ಆ್ಯಪಲ್ ಐಫೋನ್‌ ಗಳನ್ನು ಸೆಪ್ಟೆಂಬರ್ ತಿಂಗಳಲ್ಲಿ ಲಾಂಚ್ ಮಾಡೋದೇಕೆ? – ದುಬಾರಿ ಫೋನ್‌ನ ಸಕ್ಸಸ್‌ನ ಸಿಕ್ರೇಟ್‌ ಇಲ್ಲಿದೆ

ಆ್ಯಪಲ್ ಐಫೋನ್‌ ಗಳನ್ನು ಸೆಪ್ಟೆಂಬರ್ ತಿಂಗಳಲ್ಲಿ ಲಾಂಚ್ ಮಾಡೋದೇಕೆ? – ದುಬಾರಿ ಫೋನ್‌ನ ಸಕ್ಸಸ್‌ನ ಸಿಕ್ರೇಟ್‌ ಇಲ್ಲಿದೆ

ನ್ಯೂಸ್‌ ಆ್ಯರೋ : ವಿಶ್ವದಾದ್ಯಂತ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೊಂದಿರುವ ಆ್ಯಪಲ್ ಐಫೋನ್ ಸೇರಿದಂತೆ ಪ್ರಮುಖ ಪ್ರಾಡಕ್ಟ್‌ಗಳು ಸೆಪ್ಟೆಂಬರ್‌ ತಿಂಗಳಿನಲ್ಲಿ ಮಾರುಕಟ್ಟೆಗೆ ಎಂಟ್ರಿಯಾಗುತ್ತದೆ. ಈ ಪ್ರಮುಖ ಪ್ರಾಡೆಕ್ಟ್‌ಗಳನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡುವುದರ ಹಿಂದಿದೆ ಒಂದು ಕಾರಣ.

ಅಂದಿನಿಂದ ಇಂದಿನವರೆಗೂ ಗುಣಮಟ್ಟ ಹಾಗೂ ಸುರಕ್ಷತೆಯನ್ನು ಕಾಯ್ದುಕೊಂಡಿರುವ ಆ್ಯಪಲ್ ಐಫೋನ್ ಇಂದಿಗೂ ಪ್ರತಿಯೊಬ್ಬರು ಖರೀದಿಸಬೇಕೆಂದು ಬಯಸುವ ಮೊಬೈಲ್‌. ಆ್ಯಪಲ್ ಹೊಸ ಹೊಸ ಐಫೋನ್‌ಗಳನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ತನ್ನ ಬೇಡಿಕೆ ಹೆಚ್ಚಿಸಿಕೊಳ್ಳುತ್ತಲೇ ಬಂದಿದೆ. ಆದರೆ ಪ್ರತಿ ಬಾರಿ ಐಫೋನ್‌ಗಳು ಸೆಪ್ಟೆಂಬರ್ ತಿಂಗಳಲ್ಲೇ ಬಿಡುಗಡೆಯಾಗುತ್ತದೆ.

ಆಷಾಢ ಮುಗಿದು ಶ್ರಾವಣದಲ್ಲಿ ಸಾಲು ಸಾಲು ಹಬ್ಬಗಳು:

ಜೂನ್- ಜುಲೈನಲ್ಲಿ ಆಷಾಢ ಮುಗಿದು ಶ್ರಾವಣ ಆರಂಭವಾಗುತ್ತಿದ್ದ ಹಾಗೇ ಸಾಲು ಸಾಲು ಹಬ್ಬಗಳು ಶುರುವಾಗುತ್ತದೆ. ಇನ್ನೂ ಈ ಸಂದರ್ಭದಲ್ಲಿ ದುಬಾರಿ ವಸ್ತುಗಳನ್ನು ಖರೀದಿಸಲು ಇಂತಹ ಒಳ್ಳೆಯ ದಿನಗಳನ್ನು ನೋಡುತ್ತಾರೆ. ಆದ್ದರಿಂದ ಸೆಪ್ಟೆಂಬರ್ ತಿಂಗಳಲ್ಲಿ ಹೊಸ ವಸ್ತುಗಳನ್ನು ಖರೀದಿಸಲು ಜನರು ಮುಂದಾಗುತ್ತಾರೆ.

ಸೆಪ್ಟೆಂಬರ್‌ನಲ್ಲಿ ಆ್ಯಪಲ್ ಪ್ರೊಡಕ್ಷನ್ ಸೈಕಲ್

ಗುಣಮಟ್ಟದಲ್ಲಿ ಎಂದೂ ರಾಜಿಯಾಗದ ಆ್ಯಪಲ್ ಪ್ರೊಡಕ್ಷನ್ ಸೈಕಲ್ ತಿಂಗಳು ಸೆಪ್ಟೆಂಬರ್. ಹಲವು ಸುತ್ತಿನ ಪರೀಕ್ಷೆ, ಪ್ರಯೋಗ ನಡೆಯುತ್ತದೆ. ಇದು ಸೆಪ್ಟೆಂಬರ್ ನಿಂದ ಸೆಪ್ಟೆಂಬರ್‌ವರೆಗೆ ಅಂದರೆ ಒಂದು ವರ್ಷ ಇದರ ಪರೀಕ್ಷೆ ನಡೆಯುತ್ತದೆ.

ಪ್ರತಿಸ್ಪರ್ಧಿಗಳಿಗಿಂತ ಮುಂಚೆ ಬಿಡುಗಡೆ

ಐಫೋನ್‌ಗೆ ಪ್ರತಿಸ್ಪರ್ಧಿಯಾಗಿ ಹಲವು ಫೋನ್‌ಗಳಿವೆ. ಈ ಫೋನ್‌ಗಳು ಸಾಮಾನ್ಯವಾಗಿ ಕ್ರಿಸ್ಮಸ್, ಹೊಸ ವರ್ಷಕ್ಕೆ ಬಿಡುಗಡೆಯಾಗುತ್ತದೆ. ಈ ಪ್ರತಿಸ್ಪರ್ಧಿಗಳಿಗಿಂತ ಮುಂಚೆ ಬಿಡುಗಡೆ ಆದರೆ ಮಾರುಕಟ್ಟೆಯಲ್ಲಿ ಉತ್ತಮ ಸೇಲ್ ಆಗುತ್ತದೆ ಎಂಬುದು ಅವರ ಲೆಕ್ಕಚಾರ.

ಅಮೆರಿಕದಲ್ಲಿ ಶಾಲಾ- ಕಾಲೇಜು ಸೆಪ್ಟೆಂಬರ್‌ನಲ್ಲಿ ಆರಂಭ

ಇನ್ನೂ ಆ್ಯಪಲ್ ಫೋನ್‌ಗೆ ಹೆಚ್ಚಾಗಿ ಡಿಮ್ಯಾಂಡ್‌ ಮಾಡುವವರೆ ಯುವಪೀಳಿಗೆ. ಇನ್ನೂ ಅಮೆರಿಕ ದೇಶದಲ್ಲಿ ಶಾಲಾ- ಕಾಲೇಜು ಸೆಪ್ಟೆಂಬರ್‌ನಲ್ಲಿ ತೆರಯುತ್ತದೆ. ಈ ಸಂದರ್ಭದಲ್ಲಿ ಹೆಚ್ಚು ಮಾರಾಟವಾಗುವ ನಿರೀಕ್ಷೆಯಲ್ಲಿ ಸೆಪ್ಟೆಂಬರ್‌ನಲ್ಲಿ ಐಫೋನ್ ಅನ್ನು ಬಿಡುಗಡೆ ಮಾಡುತ್ತಾರೆ.

ಈ ಮೇಲಿನ ಎಲ್ಲಾ ಲೆಕ್ಕಾಚಾರದಲ್ಲಿ ಆ್ಯಪಲ್ ಐಫೋನ್‌ ಅನ್ನು ಕಂಪೆನಿ ಬಿಡುಗಡೆ ಮಾಡುತ್ತಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *