ಟ್ವಿಟರ್ ಗೆ ಪ್ರತಿಸ್ಪರ್ಧಿಯಾದ ಮೆಟಾ ಮಾಲಿಕತ್ವದ ಥ್ರೆಡ್ಸ್ – 2 ಗಂಟೆಗಳಲ್ಲಿ 20 ಲಕ್ಷ ಮಂದಿಯಿಂದ ಡೌನ್ ಲೋಡ್; ಏನಿದರ ವಿಶೇಷತೆ?

ಟ್ವಿಟರ್ ಗೆ ಪ್ರತಿಸ್ಪರ್ಧಿಯಾದ ಮೆಟಾ ಮಾಲಿಕತ್ವದ ಥ್ರೆಡ್ಸ್ – 2 ಗಂಟೆಗಳಲ್ಲಿ 20 ಲಕ್ಷ ಮಂದಿಯಿಂದ ಡೌನ್ ಲೋಡ್; ಏನಿದರ ವಿಶೇಷತೆ?

ನ್ಯೂಸ್ ಆ್ಯರೋ‌ : ವಿಶ್ವದ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ ಕಳೆದ ವರ್ಷ ಟ್ವಿಟರ್ ಅನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಅವರು ಬಳಕೆದಾರರಿಗೆ ಒಂದೊಂದೇ ಷರತ್ತು ವಿಧಿಸಿದ್ದರು. ಇದೀಗ ಮಾರ್ಕ್ ಜುಕರ್ ಬರ್ಗ್ ನೇತೃತ್ವದ ಮೆಟಾ ಸಂಸ್ಥೆ ಟ್ವಿಟರ್ ಗೆ ಸ್ಪರ್ಧೆ ನೀಡಲು ಥ್ರೆಡ್ಸ್ ಎನ್ನುವ ಆ್ಯಪ್ ಬಿಡುಗಡೆ ಮಾಡಿದೆ. ಇಂದು ಈ ಆ್ಯಪ್ ಬಿಡುಗಡೆಯಾಗಿದ್ದು, 2 ಗಂಟೆಯೊಳಗೆ 20 ಲಕ್ಷ ಮಂದಿ ಡೌನ್ ಲೋಡ್ ಮಾಡಿದ್ದಾರೆ.

100ಕ್ಕೂ ಹೆಚ್ಚು ದೇಶಗಳಲ್ಲಿ ಲಾಂಚ್

ಆ್ಯಪಲ್ ಮತ್ತು ಆಂಡ್ರಾಯ್ಡ್ ಆ್ಯಪ್ ಸ್ಟೋರ್ ಗಳಲ್ಲಿ ಇದು ಲಭ್ಯವಿದೆ. ಭಾರತ, ಅಮೆರಿಕ, ಬ್ರಿಟನ್, ಆಸ್ಟ್ರೇಲಿಯ, ಕೆನಡಾ, ಜಪಾನ್ ಮುಂತಾದ 100 ದೇಶಗಳಲ್ಲಿ ಈ ಆ್ಯಪ್ ಲಾಂಚ್ ಮಾಡಲಾಗಿದೆ. ಥ್ರೆಡ್ ನಲ್ಲಿ ಮೊದಲ ಪೋಸ್ಟ್ ಹಾಕಿರುವ ಜುಕರ್ ಬರ್ಗ್ ‘ಲೆಟ್ಸ್ ಡೂ ದಿಸ್’ ಎಂದು ಬರೆದುಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿರುವ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಬಳಸಿ ಈ ಆ್ಯಪ್ ಗೆ ಲಾಗಿನ್ ಆಗಬಹುದು. ಜೊತೆಗೆ ಇನ್ಸ್ಟಾಗ್ರಾಮ್ ಫಾಲೋವರ್ಸ್ ಅನ್ನು ಇಲ್ಲೂ ಮುಂದುವರಿಸಬಹುದು.

ಇದು ಕೂಡ ಟ್ವಿಟರ್ ಹೋಲುವ ಮೈಕ್ರೋ ಬ್ಲಾಗಿಂಗ್ ಆಗಿದ್ದು, 500 ಅಕ್ಷರವರೆಗಿನ ಪೋಸ್ಟ್ ಬರೆಯಬಹುದು. ಜೊತೆಗೆ ಲಿಂಕ್, ಫೋಟೋ, ವೀಡಿಯೋ ಶೇರ್ ಮಾಡಬಹುದು. ಮೂರು ಡಾಟ್ ಮೆನು ಆಯ್ಕೆ ಮೂಲಕ ಪ್ರೊಫೈಲ್ ಬ್ಲಾಕ್ ಮಾಡಬಹುದು, ಅನುಮತಿ, ನಿರಾಕರಣೆ, ಅನುಸರಿಸುವುದನ್ನು ರದ್ದುಗೊಳಿಸುವುದು, ನಿರ್ಬಂಧಿಸುವುದು ಇತ್ಯಾದಿ ಆಯ್ಕೆ ನೀಡಲಾಗಿದೆ.

ಸೆಲೆಬ್ರಿಟಿಗಳು, ಸಾಕಷ್ಟು ಫಾಲೋವರ್ಸ್ ಹೊಂದಿದವರು ಥ್ರೆಡ್ಸ್ ನಲ್ಲಿ ಪೋಸ್ಟ್ ಹಾಕಿದರೆ ಬೇಗ ಕ್ಲಿಕ್ ಆಗಬಹುದು ಎನ್ನುವ ಲೆಕ್ಕಾಚಾರ ಹಾಕಲಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *