ಗಂಭೀರ್ ನಿಂದ ಡ್ರೆಸ್ಸಿಂಗ್ ರೂಮ್ ರಹಸ್ಯ ಲೀಕ್​​​ಗೆ ಟ್ವಿಸ್ಟ್; ಸರ್ಫರಾಜ್​ ಖಾನ್ ಕ್ರಿಕೆಟ್ ಬದುಕು ಖೇಲ್ ಖತಂ..! ?

Sarfaraz Khan
Spread the love

ನ್ಯೂಸ್ ಆ್ಯರೋ: ಕಳೆದೊಂದು ತಿಂಗಳಿಂದ ಟೀಮ್ ಇಂಡಿಯಾದಲ್ಲಿ ವಿವಾದಗಳದ್ದೇ ಸದ್ದು ಮಾಡುತ್ತಿದೆ. ಆಸ್ಟ್ರೇಲಿಯಾ ಟೂರ್​​ ವೇಳೆ ಡ್ರೆಸ್ಸಿಂಗ್​ ರೂಮ್​ನಲ್ಲಿ ಏನೇ ಆಗಲಿ, ಬೆಳಗಾಗೋದ್ರೊಳಗೆ ಸೀಕ್ರೆಟ್ಸ್​ ಲೀಕ್​ ಆಗ್ತಿತ್ತು. ತಂಡದ ಸೀಕ್ರೆಟ್ಸ್​ ಹೇಗೆ ರಿವೀಲ್​ ಆಗ್ತಿದೆ ಅನ್ನೋದು ದೊಡ್ಡ ಪ್ರಶ್ನೆಯಾಗಿ ಕಾಡಿತ್ತು. ಇದೀಗ ಆ ಲೀಕರ್​ ಅನ್ನೋ ಆರೋಪ ಸರ್ಫರಾಜ್ ಖಾನ್ ಮೇಲೆ ಬಂದಿದೆ.

“ಆಟಗಾರರಿಗೆ ಸ್ವಾತಂತ್ರ್ಯ ನೀಡುವುದರಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ. ಹೆಡ್ ಕೋಚ್ ಹಾಗೂ ಆಟಗಾರರ ನಡುವಿನ ಸಂಬಂಧ ಉತ್ತಮವಾಗಿರಬೇಕು ಅಂದ್ರೆ, ನಂಬಿಕೆ ಬೆಳಸುವುದು ಬಹುಮುಖ್ಯ. ಆಟಗಾರರ ಬೆನ್ನಿಗೆ ನಿಲ್ಲಬೇಕು. ನಾನು ಯಾವಾಗಲೂ ಹೇಳುತ್ತೇನೆ. ಹ್ಯಾಪಿ ಡ್ರೆಸ್ಸಿಂಗ್ ರೂಮ್​ ಇಸ್ ವಿನ್ನಿಂಗ್ ಡ್ರೆಸ್ಸಿಂಗ್ ರೂಮ್.​ ಹ್ಯಾಪಿ ಆ್ಯಂಡ್ ಸೆಕ್ಯೂರ್ ಡ್ರೆಸ್ಸಿಂಗ್ ರೂಮ್ ನಿರ್ಮಿಸುವುದು ನನ್ನ ಜವಾಬ್ದಾರಿ” ಎಂದು ಗೌತಮ್ ಗಂಭೀರ್ ಹೇಳಿಕೆ ನೀಡಿದ್ದಾರೆ.

ಇನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೋಚ್ ಗಂಭೀರ್ ಅಂಡ್ ಕ್ಯಾಪ್ಟನ್ ರೋಹಿತ್ ನಡುವೆ ಎಲ್ಲವೂ ಸರಿಯಿಲ್ಲ. ಸೀನಿಯರ್ ಆಟಗಾರರ ಹಾಗೂ ಕೋಚ್ ಗಂಭೀರ್ ಸಂಬಂಧ ಚೆನ್ನಾಗಿಲ್ಲ. ಟೀಮ್ ಇಂಡಿಯಾದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇದೇ ಕಾರಣಕ್ಕೆ ಅಶ್ವಿನ್ ನಿವೃತ್ತಿ ಹೇಳಿದ್ರು ಎಂಬೆಲ್ಲ ಸುದ್ದಿಗಳು ಹೊರಬಿದ್ದಿದ್ರು. ಸದ್ಯದ ಬೆಳವಣಿಗೆ ನೋಡಿದ್ರೆ ಅವೆಲ್ಲಾ ನಡೆದಿದ್ದು ಸತ್ಯ ಎನಿಸ್ತಿದೆ. ಈ ವಿಚಾರವಾಗಿ ಹೆಡ್ ಕೋಚ್ ಗಂಭೀರ್, ರಿವ್ಯೂವ್ ಮೀಟಿಂಗ್​ನಲ್ಲಿ ಬಾಯ್ಬಿಟ್ಟಿದ್ದಾರೆ. ಡ್ರೆಸ್ಸಿಂಗ್ ರೂಮ್​​ ಟಾಕ್ಸ್​ ಸೋರಿಕೆ ಬಗ್ಗೆ ಬಿಸಿಸಿಐಗೆ ದೂರು ನೀಡಿರುವ ಗಂಭೀರ್, ಸರ್ಫರಾಜ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಮೆಲ್ಬೋರ್ನ್​​ ಟೆಸ್ಟ್ ಸೋಲಿನ ಬೆನ್ನಲ್ಲೇ ಗಂಭೀರ್ ಅವರು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಇಡೀ ತಂಡದ ಮೇಲೆ ಹರಿಹಾಯ್ದಿದ್ದರಂತೆ. ಇಷ್ಟು ದಿನ ಮುಕ್ತವಾಗಿ ಆಡಲು ಬಿಟ್ಟಿದ್ದೆ, ಇನ್ಮುಂದೆ ನಾನು ಮಾಡಿದ ಪ್ಲಾನ್​ನಂತೆ ಆಡಿ, ಇಲ್ಲ ಹೊರ ನಡೀರಿ ಎಂಬ ಸಂದೇಶ ನೀಡಿದ್ರಂತೆ. ಡ್ರೆಸ್ಸಿಂಗ್​ ರೂಮ್​ನ ಈ ವಾಗ್ವಾದ ಸೇರಿದಂತೆ ಇನ್ನಿತರ ವಿಚಾರಗಳನ್ನ ಸರ್ಫರಾಜ್, ಲೀಕ್ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಈ ಕುರಿತು ಬಿಸಿಸಿಐ, ತನಿಖೆ ನಡೆಸಲು ಮುಂದಾಗಿದೆ. ಸರ್ಫರಾಜ್ ಖಾನ್ ತಪ್ಪಿತಸ್ತ ಅನ್ನೋದು ಸಾಬೀತಾದ್ರೆ ಇದು ಕರಿಯರ್​ಗೆ ಮುಳ್ಳಾಗೋದು ಗ್ಯಾರಂಟಿ.

ಗಂಭೀರ್, ಸರ್ಫರಾಜ್ ಖಾನ್ ಮೇಲೆ ಆರೋಪ ಮಾಡಿದ್ದಾರೆ ನಿಜ. ಇದೆಷ್ಟು ಸತ್ಯ ಅನ್ನೋದು ತಿಳಿಯಬೇಕಿದೆ. ತಮ್ಮನ್ನ ರಕ್ಷಿಸಿಕೊಳ್ಳುವ ಸಲುವಾಗಿ ಸರ್ಫರಾಜ್ ಖಾನ್​​​​​​​​​​, ಹೆಸರು ತಂದ್ರಾ ಎಂಬ ಪ್ರಶ್ನೆ ಎದ್ದಿದೆ. ಬೆಂಚ್ ಕಾಯಿಸಿದ ಸಿಟ್ಟಿನಲ್ಲಿ ಸರ್ಫರಾಜ್, ಡ್ರೆಸ್ಸಿಂಗ್ ರೂಮ್​ನ ವಿಷ್ಯಗಳನ್ನು ಆಪ್ತ ಬಳಗದಲ್ಲಿ ಹಂಚಿಕೊಂಡ್ರಾ ಎಂಬ ಅನುಮಾನಗಲೂ ಇವೆ. ಸತ್ಯ ಹೊರ ಬರಬೇಕಾದ್ರೆ ನಿಷ್ಪಕ್ಷಪಾತ ತನಿಖೆ ನಡೆಯಬೇಕಿದೆ.

Leave a Comment

Leave a Reply

Your email address will not be published. Required fields are marked *