ಜೈಸ್ವಾಲ್ ಅಬ್ಬಕ್ಕೆ ಬಾಂಗ್ಲಾ ತತ್ತರ; ಭಾರತಕ್ಕೆ ಭರ್ಜರಿ ಜಯ

india won by 7 wkts ind vs ban 2nd test
Spread the love

ನ್ಯೂಸ್ ಆ್ಯರೋ‌: ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ 7 ವಿಕೆಟ್​ಗಳಿಂದ ಅಮೋಘ ಗೆಲುವು ಸಾಧಿಸಿದೆ. 95 ರನ್​ಗಳ ಸುಲಭ ಗುರಿ ಬೆನ್ನತ್ತಿದ ನಾಯಕ ರೋಹಿತ್ ಶರ್ಮಾ ಬಳಗ ಗೆಲುವು ಸಾಧಿಸಿತು. ಈ ಮೂಲಕ ಭಾರತ 2-0ದಿಂದ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಂಡಿತು.

ಕಾನ್ಪುರದ ಗ್ರೀನ್ ಪಾರ್ಕ್​ ಸ್ಟೇಡಿಯಂನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ ಬಾಂಗ್ಲಾದೇಶ ಕೇವಲ 146 ರನ್​ಗಳಿಗೆ ಆಲೌಟ್ ಆಗಿತ್ತು. ಇದರಿಂದ ಭಾರತಕ್ಕೆ 95 ರನ್​ಗಳ ಗುರಿ ನೀಡಿತ್ತು. ಈ ಸಾಧಾರಣ ಮೊತ್ತ ಬೆನ್ನತ್ತಿದ ಟೀಮ್ ಇಂಡಿಯಾ ಟೆಸ್ಟ್​ನ ಕೊನೆ ದಿನದಲ್ಲಿ ಗೆದ್ದು ಸಂಭ್ರಮಿಸಿತು. ರೋಹಿತ್ ಶರ್ಮಾ ಕೇವಲ 8 ರನ್​ಗೆ ಔಟ್ ಆದರು. ಆದರೆ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅಮೋಘವಾದ ಹಾಫ್​ ಸೆಂಚುರಿ (51) ಸಿಡಿಸಿ ಔಟ್ ಆದರು. ಜೈಸ್ವಾಲ್ 51 ಎಸೆತಗಳಲ್ಲಿ 2 ಸಿಕ್ಸ್​ ಹಾಗೂ 12 ಫೋರ್​ಗಳೊಂದಿಗೆ 72 ರನ್ ಚಚ್ಚಿದರು. ಬಳಿಕ ಬಂದ ವಿರಾಟ್ ಕೊಹ್ಲಿ 29 ರನ್ ಹಾಗೂ ಪಂತ್ 4 ರನ್​ ಗಳಿಸುವ ಮೂಲಕ ಭಾರತ ಸರಣಿಯನ್ನು ಕೈವಶ ಮಾಡಿಕೊಂಡಿತು.

2ನೇ ಟೆಸ್ಟ್ ಆರಭವಾಗಿದ್ದ ವೇಳೆ 2 ದಿನ ಮಳೆಯಿಂದ ಪಂದ್ಯವನ್ನು ಸ್ಟಾಪ್ ಮಾಡಲಾಗಿತ್ತು. ಆದರೆ 4ನೇ ದಿನದಲ್ಲಿ ಟಿ20 ಶೈಲಿಯಲ್ಲಿ ಅಭಿಮಾನಿಗಳಿಗೆ ಭಾರತದ ಬ್ಯಾಟ್ಸ್​ಮನ್​ಗಳು ಮನರಂಜನೆ ನೀಡಿದರು. ಬಾಂಗ್ಲಾ ಮೊದಲ ಇನ್ನಿಂಗ್ಸ್​​ನಲ್ಲಿ 233 ರನ್​ಗೆ ಆಲೌಟ್ ಆಗಿತ್ತು.​ ಇನ್ನು ಭಾರತದ ಬ್ಯಾಟ್ಸ್​ಮನ್​ಗಳು ಮೊದಲ ಇನ್ನಿಂಗ್ಸ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ 285 ರನ್​ ಬಾರಿಸಿ ಡಿಕ್ಲೇರ್ ಮಾಡಿಕೊಂಡಿದ್ದರು. 2ನೇ ಇನ್ನಿಂಗ್ಸ್​ನಲ್ಲಿ ಬಾಂಗ್ಲಾ 146 ರನ್​ಗಳಿಗೆ ಆಲೌಟ್ ಆಗಿತ್ತು. ಇದರಿಂದ ಭಾರತಕ್ಕೆ 95 ರನ್​ಗಳ ಟಾರ್ಗೆಟ್ ಫಿಕ್ಸ್ ಆಗಿತ್ತು. ಈ ಗುರಿ ಬೆನ್ನತ್ತಿದ ಭಾರತ ಗೆಲುವು ಸಾಧಿಸಿದೆ.

Leave a Comment

Leave a Reply

Your email address will not be published. Required fields are marked *