ವನಿತಾ ಟಿ20 ವಿಶ್ವಕಪ್: ಭಾರತೀಯ ವನಿತೆಯರಿಗೆ ಇಂದು ಕಿವೀಸ್ ಸವಾಲು

ನ್ಯೂಸ್ ಆ್ಯರೋ: ಪ್ರಶಸ್ತಿ ಗೆಲ್ಲುವ ಆತ್ಮವಿಶ್ವಾಸದಿಂದ ದುಬಾೖಗೆ ಆಗಮಿ ಸಿರುವ ಭಾರತೀಯ ವನಿತೆಯರು ಶುಕ್ರವಾರ ನಡೆಯುವ ವನಿತಾ ಟಿ20 ವಿಶ್ವಕಪ್‌ನ “ಎ’ ಬಣದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಸವಾಲನ್ನು ಎದುರಿ ಸಲಿದ್ದಾರೆ. ತಂಡದ ಹಿರಿಯ ಆಟ ಗಾರರು ಉತ್ತಮ ನಿರ್ವಹಣೆ ನೀಡಿ ದರೆ ಭಾರತ ಭರ್ಜರಿ ಪ್ರದರ್ಶನ ನೀಡಿ ಉತ್ತಮ ಆರಂಭ ಪಡೆಯುವ ಸಾಧ್ಯತೆಯಿದೆ.
ನಾಯಕ ಹರ್ಮನ್‌ಪ್ರೀತ್ ಕೌರ್ ಕೊನೆಯ ಟಿ20 ವಿಶ್ವಕಪ್‌ನಲ್ಲಿ ಕಾಣಿಸಿ ಕೊಳ್ಳುವ ಸಾಧ್ಯತೆಯಿದೆ. ಈ ಹಿಂದೆ ಹಲವು ಅವರು ಪ್ರಶಸ್ತಿ ಗೆಲ್ಲುವ ಅವಕಾಶದಿಂದ ವಂಚಿತವಾಗಿದ್ದ ಭಾರತ ಈ ಬಾರಿ ಪ್ರಶಸ್ತಿ ಗೆಲ್ಲಲು ತೀವ್ರವಾಗಿ ಹೋರಾಡುವ ಸಾಧ್ಯತೆ ಯಿದೆ. ಆರು ಬಾರಿ ಪ್ರಶಸ್ತಿ ಗೆದ್ದಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಬಿಟ್ಟರೆ ಸಾಕಷ್ಟು ಅನುಭವ ಮತ್ತು ಪ್ರತಿಭೆಯನ್ನು ಹೊಂದಿರುವ ತಂಡ ಗಳಲ್ಲಿ ಭಾರತ ಮುಂದಿದೆ.
ಬೃಹತ್ ಕೂಟಗಳಲ್ಲಿ ಭಾರತೀಯ ವನಿತೆಯರ ಹೋರಾಟ ನಿರೀಕ್ಷಿತ ಮಟ್ಟದಲ್ಲಿಲ್ಲ. ಇದರಿಂದಾಗಿ ನಿರ್ಣಾ ಯಕ ಹಂತದಲ್ಲಿ ಆಟಗಾರ್ತಿಯರು ಆಟವನ್ನು ಕೈಚೆಲ್ಲುವುದನ್ನು ಗಮನಿಸಿ ದ್ದೇನೆ. ಯಾವುದೇ ಹಂತದಲ್ಲೂ ಉತ್ತಮವಾಗಿ ಹೋರಾಡುವ ಛಲ ಆಟಗಾರ್ತಿಯರಲ್ಲಿ ಮೂಡಿದರೆ ಭಾರತ ಮೇಲುಗೈ ಸಾಧಿಸಬಹುದು.
ಇನ್ನು ಎರಡು ಬಾರಿ ರನ್ನರ್ ಅಪ್ ಆಗಿರುವ ನ್ಯೂಜಿಲ್ಯಾಂಡ್ ಯಾವುದೇ ಹಂತ ದಲ್ಲೂ ತಿರುಗೇಟು ನೀಡುವ ಸಾಧ್ಯತೆಯಿದೆ. ಅನುಭವಿ ಮತ್ತು ಯುವ ಆಟಗಾರ್ತಿಯರ ಪಡೆಯನ್ನು ಹೊಂದಿರುವ ನ್ಯೂಜಿಲ್ಯಾಂಡಿಗೆ ನಾಯಕಿ ಸೋಫಿ ಡಿವೈನ್, ಅನುಭವಿ ಆಲ್‌ರೌಂಡರ್ ಸುಜಿ ಬೇಟ್ಸ್ ಬಲ ತುಂಬಲಿದ್ದಾರೆ.
Leave a Comment