Tamilrockers :ಮನೆಯಲ್ಲಿ ಫ್ರೀ ಸಿನಿಮಾ ನೋಡ್ತಾ ಇದ್ದೋರಿಗೆ ಶಾಕಿಂಗ್ ನ್ಯೂಸ್ – ಪೈರಸಿ ಕಿಂಗ್ ತಮಿಳು ರಾಕರ್ಸ್ ಅಡ್ಮಿನ್ ಅರೆಸ್ಟ್..!

20240729 153921
Spread the love

ನ್ಯೂಸ್ ಆ್ಯರೋ : ಕಳೆದ ಕೆಲವು ವರ್ಷಗಳಿಂದ ಬಹುಪಾಲು ಯುವಕರು ಥಿಯೇಟರ್​​ಗಿಂತ ಮೊಬೈಲ್​​ನಲ್ಲಿಯೇ ಹೆಚ್ಚಾಗಿ ಹೊಸ ಸಿನಿಮಾಗಳನ್ನು ನೋಡುತ್ತಿದ್ದಾರೆ. ಒಂದು ರೀತಿಯಲ್ಲಿ ಪೈರಸಿ ಟ್ರೆಂಡ್ ಹೆಚ್ಚಾಗಿದ್ದು ಒಂದೆಡೆಯಾಗಿದ್ದರೆ, ತಮಿಳು ರಾಕರ್ಸ್ ವೆಬ್ ಸೈಟ್ ನಲ್ಲಿ ಎಲ್ಲಾ ಚಿತ್ರಗಳೂ ಫ್ರೀ ಯಾಗಿ ಸಿಗ್ತಾ ಇತ್ತು. ಆದರೆ ಇನ್ಮುಂದೆ ಹಾಗಾಗಲ್ಲ, ತಮಿಳು ರಾಕರ್ಸ್ ಅಡ್ಮಿನ್ ಪೋಲಿಸರ ಕೈಗೆ ಲಾಕ್ ಆಗಿದ್ದಾನೆ.

ಕೇರಳದ ತಿರುವನಂತಪುರಂನಲ್ಲಿರುವ ಏರಿಯಾಸ್ ಥಿಯೇಟರ್‌ನಲ್ಲಿ ನಟ ಧನುಷ್ ಅಭಿನಯದ ರಾಯನ್ ಚಿತ್ರದ ರೆಕಾರ್ಡಿಂಗ್ ಮಾಡುತ್ತಿದ್ದಾಗ ತಮಿಳ್ ರಾಕರ್ಸ್ ಸೈಟ್ ನ ಅಡ್ಮಿನ್ ಸ್ಟೀಫನ್ ರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಪೋಲಿಸರ ಕೈಗೆ ಸಿಕ್ಕಿ ಬೀಳುತ್ತಲೇ ಆರೋಪಿ ಸ್ಟೀಫನ್ ರಾಜ್​ನ ವಿಚಾರಣೆ ವೇಳೆ ಕೆಲವೊಂದು ರಹಸ್ಯ ಸಂಗತಿಗಳನ್ನು ಬಾಯಿಬಿಟ್ಟಿದ್ದು, ಸ್ವತಃ ಪೋಲಿಸರೇ ದಂಗಾಗಿದ್ದಾರಂತೆ..!! ಆರೋಪಿ ಸ್ಟೀಫನ್​ ಒಂದು ವರ್ಷಗಳಿಂದಲೂ ಹೊಸ ಸಿನಿಮಾ ರಿಲೀಸ್​ ಆಗುತ್ತಿದ್ದಂತೆಯೇ ಮೊದಲಿಗೆ ಬರುತ್ತಿದ್ದನಂತೆ. ಹಾಗೆಯೇ ಸೀಟಿನಲ್ಲಿ ಚಿಕ್ಕ ಕ್ಯಾಮೆರಾ ಅಳವಡಿಸಿ ಹೊಸ ಚಿತ್ರಗಳ ವಿಡಿಯೋ ತೆಗೆಯುತ್ತಿದ್ದ ಎಂದು ಒಪ್ಪಿಕೊಂಡಿದ್ದಾನೆ.

ಕಳೆದ ಒಂದು ವರ್ಷದಿಂದಲೂ ಹೊಸ ಚಿತ್ರಗಳನ್ನು ಅಪ್‌ಲೋಡ್ ಮಾಡುತ್ತಿದ್ದೇನೆ ಎಂದು ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ ಚಿತ್ರವೊಂದಕ್ಕೆ 5 ಸಾವಿರ ರೂಪಾಯಿ ಕಮಿಷನ್ ಪಡೆದು ವೆಬ್​ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ ಎಂದು ಪೋಲಿಸರ ಮುಂದೆ ಹೇಳಿದ್ದಾನೆ ಎನ್ನಲಾಗಿದೆ.

ಸಿನಿಮಾಗಳನ್ನು ಪೈರಸಿ ಮಾಡೋದ್ರಲ್ಲಿ ಪಂಟರ್ ಎಂದುಕೊಂಡಿದ್ದ ತಮಿಳ್​ ರಾಕರ್ಸ್​ ವಿರುದ್ಧ ಈಗಾಗಲೇ ಸೈಬರ್ ಕ್ರೈಮ್​ ಪೊಲೀಸರು ಹಲವು ಬಾರಿ ಕ್ರಮ ಕೈಗೊಂಡಿದ್ದರು. ಆದ್ರೆ ಎಷ್ಟೇ ಸಲ ಕ್ರಮ ಕೈಗೊಂಡರೂ ಇವರು ಮತ್ತೆ ಹೊಸ ಐಡಿ ಕ್ರಿಯೇಟ್, ಪಾಸ್​ವರ್ಡ್​ ಕ್ರಿಯೇಟ್​ ಮಾಡಿಕೊಂಡು ಸಿನಿಮಾಗಳನ್ನು ಕದ್ದು, ತಮ್ಮ ವೆಬ್​ಸೈಟ್​ಗಳಲ್ಲಿ ಶೇರ್​ ಮಾಡುತ್ತಲೇ ಇದ್ದರು. ಆದರೆ ಇದೀಗ ಪೊಲೀಸರು ಈ ಅಕ್ರಮಕ್ಕೆ ತೆರೆ ಎಳೆದಿದ್ದು ಈ ಗ್ಯಾಂಗ್ ಇನ್ಯಾವ ಹೊಸ ಅವತಾರದಲ್ಲಿ ‌ಕಾಣಿಸಿಕೊಳ್ಳುತ್ತೋ ನೋಡಬೇಕು.

Leave a Comment

Leave a Reply

Your email address will not be published. Required fields are marked *

error: Content is protected !!