
ಕೆನಡಾ, ಇಸ್ರೇಲ್ ನಿಂದ ಕಾಲ್ ಬಂದ್ರೆ ಡೋಂಟ್ ಪಿಕ್…! – ನೀವು ಹಣ ಕಳ್ಕೋಬೋದು ಹುಷಾರ್..!
- ಕರ್ನಾಟಕ
- November 21, 2023
- No Comment
- 76
ನ್ಯೂಸ್ ಆ್ಯರೋ : ತಂತ್ರಜ್ಞಾನ ಮುಂದುವರೆದಂತೆ ಹೊಸ ಹೊಸ ಪ್ರಯೋಗಗಳು ಹೆಚ್ಚುತ್ತಲೇ ಇರುತ್ತದೆ. ಆದರೆ ಅತಿಯಾದ ಆವಿಷ್ಕಾರದಿಂದ ಎಷ್ಟು ಲಾಭವಿದೆಯೋ ಅಷ್ಟೇ ಅನಾನುಕೂಲತೆಗಳು ಕೂಡಾ ಇದೆ. ಯಾಕೆಂದರೆ ಇತ್ತೀಚೆಗೆ ಸೈಬರ್ ಕ್ರೈಮ್ ನಂತಹ ಪ್ರಕರಣಗಳು ಹೆಚ್ಚುತ್ತಲೇ ಇದೆ. ಸಾವಿರಾರು ಕೋಟಿ ರೂ. ಪಂಗನಾಮ ಹಾಕುವ ವಂಚಕರು ಸೈಬರ್ ಕ್ರೈಮ್ ಅಪರಾಧದಿಂದ ಅನೇಕರನ್ನು ವಂಚಿಸುತ್ತಲೇ ಇರುತ್ತಾರೆ.
ಇತ್ತೀಚೆಗೆ ಕೃತಕ ಬುದ್ಧಿಮತ್ತೆ ಎಲ್ಲಾ ಕಡೆ ಪ್ರಭಾವ ಬೀರುತ್ತಿದೆ. ಇದರಿಂದ ವಂಚನೆಯೂ ಹೆಚ್ಚಾಗ್ತಿದೆ. ಇದಕ್ಕೆ ಇಲ್ಲೊಂದು ನಿದರ್ಶನ ನೋಡಿ. 59 ವರ್ಷದ ಮಹಿಳೆಯೊಬ್ಬರು ಎಐ ಧ್ವನಿ ವಂಚನೆಯಿಂದ 1.4ಲಕ್ಷ ರೂ ಕಳೆದುಕೊಂಡಿದ್ದಾರೆ. ಮಹಿಳೆಯ ಪ್ರಕಾರ ಕರೆ ಮಾಡಿದವರು ಕೆನಡಾದಲ್ಲಿರುವ ತನ್ನ ಸೋದರಳಿಯನ ಧ್ವನಿಯಲ್ಲೇ ಮಾತನಾಡಿದರು. ಹಾಗೂ ಅವರು ಸಂಕಷ್ಟದಲ್ಲಿದ್ದಾರೆ. ತುರ್ತಾಗಿ ಹಣದ ಅವಶ್ಯಕತೆ ಇದೆ ಎಂದು ಹೇಳಿಕೊಂಡರು’ ಎಂದಿದ್ದಾರೆ.
AI ಧ್ವನಿ ವಂಚನೆ ಹೇಗಾಗುತ್ತದೆ..?
ಕೆನಡಾ ಮತ್ತು ಇಸ್ರೇಲ್ ನಲ್ಲಿ ಕುಟುಂಬವನ್ನು ಹೊಂದಿರುವ ಜನರು ಈ ಮೋಸಕ್ಕೆ ಬಲಿಯಾಗುತ್ತಾರೆ. ತನ್ನ ಸ್ವಂತ ಸಂಬಂಧಿಕರ ಧ್ವನಿಯಲ್ಲೇ, ಅವರದ್ದೇ ಭಾಷೆಯಲ್ಲಿ ಮಾತನಾಡಿ ಕ್ರಿಮಿನಲ್ ಗಳು ಅವರಿಂದ ಹಣ ಪಡೆದುಕೊಳ್ಳುತ್ತಾರೆ. ಇತ್ತೀಚೆಗೆ ಈ ಮೋಸದ ಜಾಲಕ್ಕೆ ಅನೇಕರು ಬಲಿಯಾಗಿದ್ದಾರೆ ಎಂದು ಮಾಧ್ಯಮ ವರದಿಗಳು ಕೂಡಾ ಹೇಳುತ್ತವೆ.
ಮಹಿಳೆಯೊಬ್ಬರಿಗೆ ಕರೆ ಮಾಡಿ ತನ್ನ ಸ್ವಂತ ಸೋದರಳಿಯನಂತೆ ನಿರರ್ಗಳವಾಗಿ ಪಂಜಾಬಿ ಭಾಷೆಯಲ್ಲಿ ಮಾತನಾಡಿದ ವಂಚಕ ‘ ನನಗೆ ಅಪಘಾತವಾಗಿದೆ. ನನ್ನನ್ನು ಇದೀಗ ಜೈಲಿಗೆ ಕಳುಹಿಸಿದ್ದಾರೆ. ದಯವಿಟ್ಟು ನನ್ನ ಅಕೌಂಟಿಗೆ ತುರ್ತಾಗಿ ಹಣ ಕಳುಹಿಸಿ. ದಯವಿಟ್ಟು ನಮ್ಮ ಸಂಭಾಷಣೆಯನ್ನು ರಹಸ್ಯವಾಗಿಡಿ’ ಎಂದು ಆ ವ್ಯಕ್ತಿ ಹೇಳಿದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಇದು ವಂಚನೆ ಎಂದು ಆಕೆ ತಿಳಿದುಕೊಳ್ಳುವ ಸಮಯಕ್ಕೆ ಮಹಿಳೆ ಈಗಾಗಲೇ ಕರೆಯಲ್ಲಿ ನಮೂದಿಸಲಾದ ಬ್ಯಾಂಕ್ ಅಕೌಂಟ್ ಗೆ ಇದೇ ರೀತಿ ಅನೇಕ ಟ್ರಾನ್ಸಕ್ಷನ್ ಆಗಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಸೈಬರ್ ಇಂಟೆಲಿಜೆನ್ಸ್ ಏನು ಹೇಳುತ್ತೆ..?
AI ಧ್ವನಿ ಅನುಕರಿಸುವ ಉಪಕರಣಗಳು ಧ್ವನಿಯನ್ನು ನಿಖರವಾಗಿ ಅನುಕರಿಸಬಲ್ಲವು. ಇದರಲ್ಲಿ ವಂಚಕನು ಇನ್ನೊಂದು ತುದಿಯಲ್ಲಿ ಮಾತನಾಡುತ್ತಾನೆ. ಆದರೆ AI ಉಪಕರಣವು ಸ್ವಯಂಚಾಲಿತವಾಗಿ ಧ್ವನಿಯನ್ನು ಅಳವಡಿಸಿಕೊಳ್ಳುತ್ತದೆ ಎಂದು ಸೈಬರ್ ಇಂಟೆಲಿಜೆನ್ಸ್ ಮತ್ತು ಡಿಜಿಟಲ್ ಪೊರೆನ್ಸಿಕ್ಸ್ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರಸಾದ್ ಪಾಟಿಬಂಡ್ಲ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.