
ಮದುವೆಗೆ ತಯಾರಾದ ಮಿಲ್ಕಿ ಬ್ಯೂಟಿ – ತಮನ್ನಾ ಮದುವೆ ಎಲ್ಲಿ? ಯಾವಾಗ ಗೊತ್ತಾ?
- ಮನರಂಜನೆ
- November 21, 2023
- No Comment
- 87
ನ್ಯೂಸ್ ಆ್ಯರೋ : ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾದಲ್ಲಿ ‘ಕಾವಾಲಯ್ಯ’ ಹಾಡಿಗೆ ಸೊಂಟ ಬಳುಕಿಸಿ ಸೋಶಿಯಲ್ ಮೀಡಿಯಾಗೆ ಬೆಂಕಿ ಹಚ್ಚಿದ ಮಿಲ್ಕಿ ಬ್ಯೂಟಿ ನಟಿ ತಮನ್ನಾ ಮದುವೆಗೆ ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ. ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಸದ್ದಿಲ್ಲದೆ ಮದುವೆಗೆ ಸಿದ್ಧರಾಗುತ್ತಿದ್ದು ಈಗಾಗಲೇ ಸಿದ್ಧತೆಗಳು ಪ್ರಾರಂಭವಾಗಿದ್ದು, ಶೀಘ್ರದಲ್ಲೇ ತಮನ್ನಾ-ವಿಜಯ್ ಜೋಡಿ ತಮ್ಮ ವಿವಾಹದ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದಾರೆ ಎಂದು ಕೆಲವು ಮೂಲಗಳು ತಿಳಿಸಿವೆ.
ಹಸಿಬಿಸಿ ದೃಶ್ಯದಲ್ಲಿ ತಮನ್ನಾ-ವಿಜಯ್!
ತಮನ್ನಾ ಭಾಟಿಯಾ 21 ಡಿಸೆಂಬರ್ 1989 ರಂದು ಜನಿಸಿದರು ಮತ್ತು ವಿಜಯ್ ವರ್ಮಾ 29 ಮಾರ್ಚ್ 1986 ರಂದು ಜನಿಸಿದರು. 33 ವರ್ಷದ ತಮನ್ನಾ ಮತ್ತು 37 ವರ್ಷದ ವಿಜಯ್ ಇತ್ತೀಚೆಗೆ ಜೂನ್‌ನಲ್ಲಿ ತಮ್ಮ ಸಂಬಂಧವನ್ನು ಖಚಿತಪಡಿಸಿದ್ದರು.
‘ಲಸ್ಟ್ ಸ್ಟೋರೀಸ್ 2’ ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿ ಹಸಿಬಿಸಿ ದೃಶ್ಯದಲ್ಲಿ ನಟಿಸಿ ಸಾಕಷ್ಟು ಸುದ್ದಿಯಾಗಿದ್ದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕವಂತು ಇವರಿಬ್ಬರ ಸಂಬಂಧ ಹಾಗೂ ಮದುವೆಯ ಬಗ್ಗೆ ಸಾಕಷ್ಟು ಅಂತೆ-ಕಂತೆಗಳು ಹರಿದಾಡಿದ್ದು, ಸದ್ಯ, ಈ ಜೋಡಿ ಅಧಿಕೃತವಾಗಿ ವಿವಾಹಕ್ಕೆ ಸಜ್ಜಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಮದುವೆ ಯಾವಾಗ? ಎಲ್ಲಿ?
ಸದ್ಯ, ನಟಿ ತಮನ್ನಾ ‘ಜೈಲರ್, ಬೋಳಾ ಶಂಕರ’ ಸಿನಿಮಾದ ಬಳಿಕ ಯಾವುದೇ ಸಿನಿಮಾವನ್ನು ಕೂಡ ಒಪ್ಪಿಕೊಂಡಿಲ್ಲ. ಜೊತೆಗೆ ವಿಜಯ್ ವರ್ಮ ಕೂಡ ಸಿನಿಮಾದಿಂದ ದೂರವಿದ್ದಾರೆ. ಮದುವೆಯ ಸಿದ್ಧತೆಗಾಗಿ ಈ ಜೋಡಿ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಈ ಜೋಡಿ ಇದೇ ಡಿಸೆಂಬರ್ 21ರಂದು ಆಂದ್ರಪ್ರದೇಶದ ಅರಮನೆಯೊಂದರಲ್ಲಿ ವಿವಾಹವಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.