
ಹೆಮ್ಮರದಲ್ಲಿ ಜಲಪಾತದಂತೆ ಉಕ್ಕಿ ಹರಿದ ನೀರು – ಪ್ರಕೃತಿ ವಿಸ್ಮಯದ ಈ ವೀಡಿಯೋ ನೀವು ನೋಡ್ಲೇಬೇಕು..!
- ವೈರಲ್ ನ್ಯೂಸ್
- November 21, 2023
- No Comment
- 101
ನ್ಯೂಸ್ ಆ್ಯರೋ : ಭೂಮಿಯು ಅನೇಕ ವಿಸ್ಮಯ ಮತ್ತು ರಹಸ್ಯಗಳಿಂದ ಕೂಡಿದೆ. ಸಾಕಷ್ಟು ವಿಶೇಷ ಪ್ರಕ್ರಿಯೆಗಳು ಭೂಮಿಯಲ್ಲಿ ನಿರಂತರವಾಗಿ ನಡೆಯುತ್ತಿರುತ್ತದೆ. ನೈಸರ್ಗಿಕ ಸಂಪನ್ಮೂಲಗಳ ಎದುರು ಮಾನವ ನಿರ್ಮಿತ ಏನೂ ಅಲ್ಲ ಎಂಬುವುದು ನಮಗೆ ಅನೇಕ ಬಾರಿ ಸಾಬೀತಾಗುತ್ತಲೇ ಬಂದಿದೆ. ಇದೀಗ ಮತ್ತೊಂದು ವಿಸ್ಮಯಕಾರಿ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಮರದ ವೈಶಿಷ್ಟ್ಯವೇನು..?
ಮಾಂಟೆನೆಗ್ರೊದ ಡೈನೋಸಾ ಗ್ರಾಮದಲ್ಲಿ ಸುಮಾರು 150 ವರ್ಷಗಳಷ್ಟು ಹಳೆಯದಾದ ಹಿಪ್ಪುನೇರಳೆ ಮರವಿದೆ. 1990ರಿಂದ ಈ ಮರದಿಂದ ನೀರು ಕಾರಂಜಿಗಳ ರೂಪದಲ್ಲಿ ಹೊರಚಿಮ್ಮುತ್ತದೆ. ಜೀವಂತ ಮರಗಳು ನೀರನ್ನು ಹೊರಹಾಕುವುದಿಲ್ಲ ಎಂಬುವುದು ನಮಗೆ ತಿಳಿದಿದೆ. ಸಂಶೋಧನೆ ಆರಂಭಿಸಿದಾಗ ಈ ಹಿಪ್ಪುನೇರಳೆ ಮರ ಬೆಳೆಯುವ ಹುಲ್ಲುಗಾವಲಿನಲ್ಲಿ ಹಲವಾರು ಭೂಗತ ನೀರಿನ ಬುಗ್ಗೆಗಳಿದ್ದು ಹೆಚ್ಚುವರಿ ಒತ್ತಡದಿಂದ ಭಾರೀ ಮಳೆಯಾದಾಗಲೆಲ್ಲಾ ಈ ನೀರು ಕಾಂಡದ ಮೂಲಕ ನೀರನ್ನು ಪಂಪ್ ಮಾಡಲು ಪ್ರಾರಂಭಿಸುತ್ತದೆ.
ವೀಡಿಯೋದಲ್ಲಿ ಏನಿದೆ..?
ಈ ಹಿಪ್ಪುನೇರಳೆ ಮರದಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಸೈನ್ಸ್ ಗರ್ಲ್ ಎಂಬ ಟ್ವಿಟರ್ ಖಾತೆಯಲ್ಲಿ ಇದರ
ಹಂಚಿಕೊಂಡಿದ್ದು ಈ ವೀಡಿಯೋವನ್ನು ಸುಮಾರು 18.2ಮಿಲಿಯನ್ ಜನ ವೀಕ್ಷಿಸಿದ್ದಾರೆ. ಅದೇ ರೀತಿ ಈ ವೀಡಿಯೋಗೆ 88.7 ಸಾವಿರ ಲೈಕ್ಸ್ ಬಂದಿದೆ.
ಎಷ್ಟು ವರ್ಷದಿಂದ ಈ ಮರದಲ್ಲಿ ನೀರು ಹರಿಯುತ್ತಿದೆ..?
ಬರೋಬ್ಬರಿ 20ರಿಂದ 25ವರ್ಷಗಳಿಂದ ನಿರಂತರವಾಗಿ ಈ ಹಿಪ್ಪುನೇರಳೆ ಮರದಿಂದ ನೀರು ಜಿನುಗುತ್ತಿದೆ. ವರದಿಯ ಪ್ರಕಾರ ಸ್ಥಳೀಯ ನಿವಾಸಿಗಳು ‘ ಮರವು 150ವರ್ಷ ಹಳೆಯದ್ದು. ನೆಲದಿಂದ 1.5 ಮೀಟರ್ ಎತ್ತರದಲ್ಲಿ ಮರದ ಕಾಂಡದಿಂದ ನೀರು ಬೀಳಲು ಪ್ರಾರಂಭಿಸುತ್ತದೆ. ಇದು ನಿಜವಾಗಿಯೂ ಪ್ರಕೃತಿಯ ಕೊಡುಗೆ’ ಎಂದು ಹೇಳಿದ್ದಾರೆ.