
ಗೂಗಲ್ ಕಂಪೆನಿಯಿಂದ ಮತ್ತೊಂದು ಸ್ಮಾರ್ಟ್ ಫೋನ್ ಬಿಡುಗಡೆ – ಇದರ ಫೀಚರ್ಸ್ ಹೇಗಿದೆ?
- ಟೆಕ್ ನ್ಯೂಸ್
- November 21, 2023
- No Comment
- 80
ನ್ಯೂಸ್ ಆ್ಯರೋ : ಗೂಗಲ್ ಕಂಪೆನಿಯ ಬಗ್ಗೆ ಎಲ್ಲರಿಗೂ ಪರಿಚಯವಿದೆ. ತಂತ್ರಜ್ಞಾನದ ಎಲ್ಲಾ ಪ್ರಯೋಗಗಳನ್ನು ಈ ಟೆಕ್ ಕಂಪೆನಿ ಮಾಡುತ್ತಲೇ ಇರುತ್ತದೆ. ನಾವು ರೆಡ್ಮೀ, ರಿಯಲ್ ಮಿ, ವಿವೋ, ವನ್ ಪ್ಲಸ್ ಹೀಗೆ ಯಾವುದಾದರೊಂದು ಕಂಪೆನಿಯ ಸ್ಮಾರ್ಟ್ ಫೋನ್ ಗಳನ್ನು ಅತ್ಯಂತ ಇಷ್ಟಪಡುತ್ತೇವೆ. ಫೋನ್ ಬದಲಾಯಿಸುವಾಗೆಲ್ಲ ಅದೇ ಕಂಪೆನಿಯ ಮೊಬೈಲ್ ಖರೀದಿಸಲು ಬಯಸುತ್ತೇವೆ. ಇದೀಗ ಗೂಗಲ್ ಕಂಪೆನಿ ಕೂಡಾ ಹೊಸ ಸ್ಮಾರ್ಟ್ ಪೋನನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ ಅಂದ್ರೆ ನಂಬ್ತೀರಾ..?
ಗೂಗಲ್ ಪಿಕ್ಸೆಲ್ 8a ರೆಂಡರ್ ಸ್ಮಾರ್ಟ್ ಫೋನ್ ವೈಶಿಷ್ಟ್ಯವೇನು.?
A- ಸರಣಿಯ ಫಿಕ್ಸೆಲ್ ಫೋನ್ ಈ ತಿಂಗಳ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ. ಫಿಕ್ಸೆಲ್ 8a ಹಿಂಭಾಗ ಫಿಕ್ಸೆಲ್ 8 ಮತ್ತು 8ಪ್ರೋ ಅನ್ನು ಹೋಲುತ್ತದೆ. ಇದು ಎರಡು ಕ್ಯಾಮೆರಾಗಳನ್ನು ಹೊಂದಿದೆ. ಎಲ್ಇಡಿ ಫ್ಲ್ಯಾಷ್ ಮೋಡೆಲ್ ಅನ್ನು ಸಹ 8ಮತ್ತು 8 ಪ್ರೋ ಪ್ರೀಮಿಯಂ ಮಾದರಿಗಳಂತೆಯೇ ಇರಿಸಲಾಗಿದೆ.
ಫೋನಿನ ಸೈಡಿನಲ್ಲಿ ಪವರ್ ಬಟನ್, ವಾಲ್ಯೂಮ್ ರಾಕರ್, ಸಿಮ್ ಟ್ರೇ ಮತ್ತು ಸೆಲ್ಯುಲಾರ್ ಆಂಟೆನಾ ನೀಡಲಾಗಿದೆ. ಮೇಲಿನ ಭಾಗವು ಕೂಡಾ ಆ್ಯಂಟೆನಾ ರೇಖೆಯನ್ನು ಹೊಂದಿದೆ. ಮೈಕ್ ಹೋಲ್ ನ್ನು ಕೂಡಾ ಪಡೆಯುತ್ತೇವೆ. ಕೆಳಭಾಗದಲ್ಲಿ USB- C ಪೋರ್ಟ್ ಮತ್ತು ಸ್ಪೀಕರ್ ಗ್ರಿಲ್ ಇದೆ.
ಈ ಸ್ಮಾರ್ಟ್ ಫೋನ್ 6.1 ಇಂಚಿನ ಡಿಸ್ಪ್ಲೇ ಹೊಂದಿರುವ ಸಾಧ್ಯತೆ ಇದೆ. ಇದು ಫಿಕ್ಸೆಲ್ 8ರ 6.2 ಇಂಚಿನ ಪ್ಯಾನೆಲ್ ಗಳಿಗಿಂತ ಚಿಕ್ಕದಾಗಿದೆ. ಮುಂಭಾಗದ ಕ್ಯಾಮೆರಾಕ್ಕಾಗಿ ಪಂಚ್ ಹೋಲ್ ಕಟೌಟ್ ನೀಡಲಾಗಿದೆ. ಈ ಫೋನ್ ಸಿಂಗಲ್ ಕೋರ್ ಟೆಸ್ಟ್ ನಲ್ಲಿ 1218 ಪೋಯಿಂಟ್ ಹಾಗೂ ಮಲ್ಟಿ ಕೋರ್ ಕಾರ್ಯಕ್ಷಮತೆ ಪರೀಕ್ಷೆಯಲ್ಲಿ 3175ಅಂಕಗಳನ್ನು ಗಳಿಸಿದೆ.
ಗೂಗಲ್ ಸ್ಮಾರ್ಟ್ ಫೋನಲ್ಲಿ ಅಳವಡಿಸಿದ ತಂತ್ರಜ್ಞಾನವೇನು..?
ಈ ಫೋನ್ ನಲ್ಲಿ CPU ಅನ್ನು Mali- G715 GPU ಜೊತೆಗೆ ಜೋಡಿಸಬಹುದು. ನೀವು ಇಲ್ಲಿ Titan G2 ಭದ್ರತಾ ಚಿಪ್ ಮತ್ತು ಕೆಲವು A1 ಟೆಕ್ನಾಲಜಿ ಪಡೆಯುವ ಸಾಧ್ಯತೆಯಿದೆ. ಈ ಮೊಬೈಲ್ 8 GB RAM ನ್ನು ಹೊಂದಿದೆ ಎಂದು ಬಹಿರಂಗವಾಗಿದೆ. ಈ ಮೊಬೈಲ್ ನೀಲಿ ಬಣ್ಣದಲ್ಲಿ ಬರಬಹುದು.