
2027ರ ಕ್ರಿಕೆಟ್ ವಿಶ್ವಕಪ್ ನಡೆಯೋದೆಲ್ಲಿ? – ಮುಂದಿನ ಬಾರಿ ಆಟದ ಸ್ವರೂಪವೇ ಬದಲು, ಹಳೆಯ ಮಾದರಿಗೆ ಮರಳಿದ ಐಸಿಸಿ
- ಕ್ರೀಡಾ ಸುದ್ದಿ
- November 21, 2023
- No Comment
- 97
ನ್ಯೂಸ್ ಆ್ಯರೋ : 2023ರ ವಿಶ್ವಕಪ್ ಟೂರ್ನಿಗೆ ಭಾನುವಾರ ಅಧಿಕೃತ ತೆರೆ ಬಿದ್ದಿದೆ. ಆಸ್ಟ್ರೇಲಿಯಾ ತಂಡ ಟೀಂ ಇಂಡಿಯಾವನ್ನು ಬಗ್ಗು ಬಡಿದು 6ನೇ ಬಾರಿಗೆ ವಿಶ್ವ ಕಿರೀಟ ಮುಡಿಗೇರಿಸಿಕೊಂಡಿದೆ. ಈ ನಡುವೆ ಮುಂಬರುವ 2027ರ 14ನೇ ಆವೃತ್ತಿಯ ವಿಶ್ವಕಪ್ ಟೂರ್ನಿಯ ಬಗ್ಗೆ ಚರ್ಚೆ ಜೋರಾಗಿದ್ದು, ದಿನಾಂಕ ಹಾಗೂ ಸ್ಥಳ ನಿಗದಿಯಾಗಿದೆ. ಮುಂಬರುವ ಏಕದಿನ ಕ್ರಿಕೆಟ್ ವಿಶ್ವಯುದ್ಧಕ್ಕೆ ಆತಿಥ್ಯ ವಹಿಸಲಿರುವ ದೇಶ ಯಾವುದು ಮತ್ತು ಟೂರ್ನಿ ಯಾವಾಗ ಆರಂಭವಾಗಲಿದೆ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಈ ಕೆಳಗಿನಂತಿದೆ.
2027ರ ವಿಶ್ವಕಪ್ ಅರ್ಹತೆ!
ಅರ್ಹತೆಯ ವಿಚಾರದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಸಹ-ಅತಿಥೇಯರಾಗಿ ಕಾರ್ಯನಿರ್ವಹಿಸಲಿದ್ದು, ಸ್ಪರ್ಧೆಯಲ್ಲಿ ಸ್ವಯಂ ಚಾಲಿತವಾಗಿ ಸ್ಥಾನಗಳನ್ನು ಪಡೆದುಕೊಳ್ಳುತ್ತವೆ. ಇನ್ನುಳಿದಂತೆ ICC, ODI ಶ್ರೇಯಾಂಕದಲ್ಲಿ ಅಗ್ರ ಎಂಟು ತಂಡಗಳು ನೇರವಾಗಿ ಅರ್ಹತೆ ಪಡೆದುಕೊಳ್ಳಿವೆ. ಮತ್ತುಳಿದ ನಾಲ್ಕು ತಂಡಗಳನ್ನು ಜಾಗತೀಕ ಅರ್ಹತಾ ಪಂದ್ಯದ ಮೂಲಕ ನಿರ್ಧರಿಸಲಾಗುತ್ತದೆ. ಈ ವಿಶ್ವಕಪ್ ಅರ್ಹತಾ ರೇಸ್ ನಲ್ಲಿ ನಮಬಿಯಾ ಕೂಡ ಪಾಲ್ಗೊಳ್ಳುತ್ತಿದ್ದು, ನಮೀಬಿಯಾ ಹಣೆಬರಹ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಎಲ್ಲಿ ನಡೆಯಲಿದೆ 2027ರ ವಿಶ್ವಕಪ್?
2023ರ ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸಿತ್ತು. ಇದೀಗ 2027ರ ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಸಹ-ಆತಿಥ್ಯ ವಹಿಸಲಿದೆ ಎನ್ನಲಾಗಿದೆ. ಅತಿಥೇಯ ರಾಷ್ಟ್ರವಾಗಿ ನಮೀಬಿಯಾ ಪಾಲ್ಗೊಳ್ಳುವ ಸಾಧ್ಯತೆಯನ್ನೂ ಕೂಡ ಅಲ್ಲಗಳೆಯುವಂತಿಲ್ಲ. ಈ ಟೂರ್ನಿಯು 14 ತಂಡಗಳಿಗೆ ವಿಸ್ತರಣೆಯನ್ನು ಹೊಂದಿದ್ದು, 2003ರ ಆವೃತ್ತಿಯಲ್ಲಿ ಬಳಸಿದ ಸ್ವರೂಪವನ್ನು ಅಳವಡಿಸುವ ಸಾಧ್ಯತೆಯಿದೆ.
ಹೇಗಿರಲಿದೆ 2007ರ ವಿಶ್ವಕಪ್ ಸ್ವರೂಪ?
ಸ್ಪರ್ಧೆಯ ಸ್ಪರೂಪವು ಎರಡು ಗುಂಪುಗಳನ್ನು ಹೊಂದಿರಲಿದ್ದು, ಪ್ರತಿಯೊಂದು ಗುಂಪು 7 ತಂಡಗಳನ್ನು ಒಳಗೊಳ್ಳಲಿವೆ. ಪ್ರತೀ ಗುಂಪಿನಿಂದ ಮೂರು ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಏರಲಿವೆ. ಬಳಿಕ ಅಂತಿಮ ಜಯಶಾಲಿಗಳನ್ನು ನಿರ್ಧರಿಸಲು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ನಡೆಸಲಾಗುತ್ತದೆ. 2027ರ ವಿಶ್ವಕಪ್‌ನಲ್ಲಿ ಪಾಯಿಂಟ್ ಕ್ಯಾರಿ ಫಾರ್ವರ್ಡ್ ಕ್ರಮ ಅನುಸರಿಸಲಾಗುತ್ತದೆ. ಈ ಸ್ವರೂಪವನ್ನು 1999ರ ಆವೃತ್ತಿಯಲ್ಲಿ ಬಳಸಲಾಗಿತ್ತು.