
‘ಟೆಂಟಲ್ಲಿ ಬ್ಲೂಫಿಲಂ ತೋರಿಸ್ಕೊಂಡು ಲೈಫಲ್ಲಿ ಸಾಗಿ ಬಂದೋರು ಅವರು ‘- ಕುಮಾರಣ್ಣ ಹೀಗೆ ಹೇಳಿದ್ದು ಯಾರಿಗೆ ಗೊತ್ತಾ..?
- ರಾಜಕೀಯ
- November 21, 2023
- No Comment
- 67
ನ್ಯೂಸ್ ಆ್ಯರೋ : ರಾಜಕೀಯ ಜೀವನದಲ್ಲಿ ಕೇಳುವಷ್ಟು ಟೀಕೆ, ವ್ಯಂಗ್ಯ ಮಾತು ಬಹುಶಃ ನಾವೆಲ್ಲೂ ಕೇಳಲು ಸಾಧ್ಯವಿಲ್ಲವೇನೋ..ಪಕ್ಷ ಪಕ್ಷಗಳ ನಡುವೆ ರಾಜಕಾರಣಿಗಳು ಕಚ್ಚಾಡುವುದು ಮಾಮೂಲಿ. ಇನ್ನು ಅದು ಮಾಧ್ಯಮಕ್ಕೆ ಆಹಾರವಾಗದೆ ಇರುತ್ತಾ ಹೇಳಿ… ಇದೀಗ ಮತ್ತೊಮ್ಮೆ ಮಾಧ್ಯಮದ ಎದುರು ಹೆಚ್.ಡಿ ಕುಮಾರಸ್ವಾಮಿ ಮತ್ತೊಬ್ಬ ರಾಜಕೀಯ ಮುಖಂಡನನ್ನು ಗುಮ್ಮಿದ್ದಾರೆ.
‘ಘನತೆಗೆ ತಕ್ಕಂತೆ ಮಾತನಾಡಿ’ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೆಚ್.ಡಿ ಕುಮಾರಸ್ವಾಮಿಗೆ ಹೇಳಿದ್ದರು. ಇದನ್ನು ಮಾಧ್ಯಮದವರು ಪ್ರಶ್ನಿಸಿದಾಗ ಗರಂ ಆದ ಕುಮಾರಣ್ಣ ‘ ಘನತೆ ಗೌರವದ ಬಗ್ಗೆ ಮಾತನಾಡುವ ಅವರಿಗೆ ಯಾವ ರೀತಿಯ ಘನತೆ ಇದೆ’ ಎಂದು ಪ್ರಶ್ನಿಸಿದರು. ಅಲ್ಲದೆ ಸಾತನೂರಿನಲ್ಲಿ ಟೆಂಟ್ ಹಾಕಿ ಬ್ಲೂ ಫಿಲಂ ಪ್ರಸಾರ ಮಾಡುತ್ತಿದ್ದ ಹಿಂದಿನ ವಿಚಾರವನ್ನು ಕೆದಕಿ ಮಾತನಾಡಿದರು.
ಮಾಧ್ಯಮದವರ ಪ್ರಶ್ನೆಗೆ ಹೆಚ್ಡಿಕೆ ಏನೆಂದು ಉತ್ತರಿಸಿದ್ರು..?
ಹಾಸನದಲ್ಲಿ ಮಾಧ್ಯಮದವರ ಪ್ರಶ್ನೆಗೆ ಕೆಂಡಾಮಂಡಲರಾದ ಎಚ್.ಡಿ ಕುಮಾರಸ್ವಾಮಿ ಅವರು ‘ ಅವರಿಗೆ ಯಾವ ಘನತೆ ಇದೆ? ಕರೆಂಟ್ ಕಳ್ಳ ಅಂತ ಪೋಸ್ಟರ್ ಅಂಟಿಸೋದಾ ನಿಮ್ಮ ಘನತೆ..? ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷನ ಘನತೆ ಇದಲ್ಲವೇ…? ಎಂದು ಖಾರವಾಗಿ ಕೇಳಿದರು.
ಇನ್ನು ಹಳೆಯ ವಿಚಾರವನ್ನು ಮತ್ತೆ ಕೆದಕಿ ಮಾತನಾಡಿದ ಅವರು ‘ ಕನಕಪುರದ ದೊಡ್ಡ ಆಲಹಳ್ಳಿಯ ಸಾತನೂರು ಬಳಿ ಎರಡು ಟೆಂಟ್ ಇಟ್ಟುಕೊಂಡು ಕನೆಕ್ಷನ್ ತಗೊಂಡು ಜನರಿಗೆ ಬ್ಲೂಫಿಲಂ ನಡೆಸುತ್ತಿದ್ದರಲ್ಲ. ಆ ಸಂಸ್ಕೃತಿಯಲ್ಲಿ ಬಂದಿರುವುದರಿಂದ ಈ ರೀತಿಯಾಗಿ ಕಳ್ಳ ಅಂತ ಪೋಸ್ಟರ್ ಅಂಟಿಸಿಕೊಂಡು ಕುಳಿತ್ತಿದ್ದೀರಿ. ಎಲ್ಲೆಲ್ಲಿ ಏನೇನು ಮಾಡಿದ್ದೀರಿ ಅಂತ ಗೊತ್ತಿಲ್ವಾ..? ಕದ್ದು ಗ್ರಾನೈಟ್ ಹೊಡ್ಕೊಂಡು ಕುಳಿತ್ತಿದ್ದೀರಿ.
ದರೋಡೆ ಮಾಡಿದ್ದೀರಿ. ಎಲ್ಲಿಲ್ಲಿ ಏನೇನು ಮಾಡಿದ್ದೀರಿ…ಎಲ್ಲಾನೂ ಗೊತ್ತಿದೆ. ಮತ್ತಿಕೆರೆ ರೈಲ್ವೇ ನಿಲ್ದಾಣದಲ್ಲಿ ಅರ್ಧ ರಾತ್ರಿಯಲ್ಲಿ ಗ್ರಾನೈಟ್ ಬರುತ್ತಿದೆ. ನಾನು ಕಾಣದ್ದಲ್ಲ. ಹೇಗೆ ಬದುಕಬೇಕು ಅನ್ನೋದನ್ನು ನಾನು ನಿಮ್ಮಿಂದ ಕಲಿಯಬೇಕಿಲ್ಲ’ ಎಂದು ಸಿಡುಕಿನಿಂದ ನುಡಿದರು.