
ಭಾರತ-ಆಸ್ಟ್ರೇಲಿಯಾ ಟಿ20 ಸರಣಿ ಆರಂಭಕ್ಕೆ ಕ್ಷಣಗಣನೆ – ಯಾವಾಗ ಆರಂಭ? ಯಾವುದರಲ್ಲಿ ನೇರ ಪ್ರಸಾರ? ಇತ್ತಂಡಗಳು ಹೇಗಿವೆ?
- ಕ್ರೀಡಾ ಸುದ್ದಿ
- November 21, 2023
- No Comment
- 132
ನ್ಯೂಡ್ ಆ್ಯರೋ : ಐಸಿಸಿ ಏಕದಿನ ವಿಶ್ವಕಪ್‌ಗೆ ತೆರೆ ಬಿದ್ದಿದ್ದು. ಭಾರತವನ್ನು ಬಗ್ಗು ಬಡಿದ ಆಸೀಸ್ 6ನೇ ಬಾರಿ ಐತಿಹಾಸಿಕ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಫೈನಲ್ ಸೋಲಿನಿಂದ ಕಂಗೆಟ್ಟಿರುವ ಟೀಂ ಇಂಡಿಯಾ ಇದೀಗ ಆಸ್ಟ್ರೇಲಿಯಾ ವಿರುದ್ಧ ನವೆಂಬರ್ 23ರಂದು ವೈಜಾಗ್ ನಲ್ಲಿ ಆರಂಭವಾಗುವ ಟಿ20 ಸರಣಿಗೆ ತಯಾರಾಗಬೇಕಿದೆ. ಸೋಮವಾರ ಬಿಸಿಸಿಐ 15 ಸದಸ್ಯರನ್ನೊಳಗೊಂಡ ಭಾರತೀಯ ತಂಡದವನ್ನು ಆಯ್ಕೆ ಮಾಡಿದ್ದು, ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನುಳಿದಂತೆ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಸೇರಿ ಕೆಲ ಪ್ರಮುಖ ಆಟಗಾರರನ್ನು ಸರಣಿಯಿಂದ ಹೊರಗುಳಿಸಲಾಗಿದೆ.
ಯಾವಾಗ, ಎಲ್ಲಿ ಮತ್ತು ಎಷ್ಟು ಗಂಟೆಗೆ?
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯು ನವೆಂಬರ್ 23 ರಂದು ಆರಂಭವಾಗಲಿದ್ದು, ಪಂದ್ಯಾಟಗಳು ಭಾರತದ ವಿಶಾಖಪಟ್ಟಣಂ, ತಿರುವನಂತಪುರಂ, ರಾಯ್ ಪುರ್ ಹಾಗೂ ಬೆಂಗಳೂರಿನ ಮೈದಾನಗಳಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಈ ಟಿ20 ಸರಣಿ 7 ಗಂಟೆಗೆ ಆರಂಭವಾಗಲಿದೆ ಎಂದು ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ.
ಎಲ್ಲಿ ವೀಕ್ಷಿಸಬಹುದು?
ಕ್ರಿಕೆಟ್ ಪ್ರೇಮಿಗಳು ವಿಶ್ವಕಪ್ ಮುಗಿದ ಬಳಿಕ ಯಾವ ಟೂರ್ನಿ ಆರಂಭವಾಗಲಿದೆ ಎಂದು ಕಾಯುತ್ತಿದ್ದರು. ಸದ್ಯ, ಅಭಿಮಾನಿಗಳ ಕಾಯುವಿಕೆಗೆ ಉತ್ತರ ಲಭಿಸಿದ್ದು, ಇದೇ ನವೆಂಬರ್ 23 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿ ಆರಂಭವಾಗಿದೆ. ಈ ಸರಣಿಯನ್ನು ಕ್ರಿಕೆಟ್ ಅಭಿಮಾನಿಗಳು jiocinema ಹಾಗೂ ವೆಬ್ಸೈಟ್ ಮೂಲಕ ಮತ್ತು Sports 18 ನೆಟ್ವರ್ಕ್ ಮೂಲಕ ಲೈವ್ ವೀಕ್ಷಿಸಬಹುದಾಗಿದೆ.
ಇಂಡಿಯಾ-ಆಸೀಸ್ ವೇಳಾಪಟ್ಟಿ?
ಗುರುವಾರ-ನವೆಂಬರ್ 23- ವೈ.ಎಸ್.ರಾಜಶೇಖರ್ ರೆಡ್ಡಿ ಮೈದಾನ, ವಿಶಾಖಪಟ್ಟಣಂ
ಭಾನುವಾರ-ನವೆಂಬರ್ 26- ಗ್ರೀನ್ ಫೀಲ್ಡ್ ಅಂತರಾಷ್ಟ್ರೀಯ ಮೈದಾನ, ತಿರುವನಂತಪುರಂ
ಶುಕ್ರವಾರ-ಡಿಸೆಂಬರ್ 1-ಶಹೀದ್ ವೀರ್ ನಾರಾಯಣ ಸಿಂಗ್ ಕ್ರೀಡಾಂಗಣ, ರಾಯ್ ಪುರ್
ಭಾನುವಾರ-ಡಿಸೆಂಬರ್ 3-ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.
ಟೀಂ ಇಂಡಿಯಾ ಆಟಗಾರರ ಪಟ್ಟಿ?
ಸೂರ್ಯಕುಮಾರ್ ಯಾದವ್(ನಾಯಕ), ರುತುರಾಜ್ ಗಾಯಕ್ವಾಡ್(ಉಪ ನಾಯಕ), ಇಶಾನ್ ಕಿಶಾನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ(ವಿಕೇಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯಿ, ಅರ್ಷದೀಪ್ ಸಿಂಗ್, ಪ್ರಸಿದ್ಧ ಕೃಷ್ಣ, ಆವೇಶ್ ಖಾನ್, ಮುಖೇಶ್ ಕುಮಾರ್.
(ಕೊನೆಯ ಎರಡು ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ಉಪನಾಯಕನಾಗಿ ತಂಡ ಸೇರಲಿದ್ದಾರೆ)
ಆಸಿಸ್ ಟೀಂ ಹೇಗಿದೆ?
ಮ್ಯಾಥ್ಯೂ ವೇಡ್(ನಾಯಕ), ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೋಯಿನಿಸ್, ಟಿಮ್ ಡೇವಿಡ್, ಜೋಶ್ ಇಂಗ್ಲಿಸ್, ಜೇಸನ್, ಸೀನ್ ಅಬಾಟ್, ನಾಥನ್ ಎಲ್ಲಿಸ್, ಸ್ಪೆನ್ಸರ್ ಜಾನ್ಸನ್, ಆಡಂ ಝಂಪ, ತನ್ವೀರ್ ಸಂಗಾ