ಭಗವಾನ್‌ ವಿಷ್ಣು ಪೂಜೆಗೆ ಮೀಸಲಾದ ಕಾರ್ತಿಕ ಮಾಸದ ಮಹತ್ವವೇನು..? – ಉತ್ತಮ ಆರೋಗ್ಯ ಮತ್ತು ಸಮೃದ್ಧಿಗಾಗಿ ಈ ಮಾಸದಲ್ಲಿ ಯಾವ ಪರಿಹಾರಗಳನ್ನು ತೆಗೆದುಕೊಳ್ಳಬೇಕು?

ಭಗವಾನ್‌ ವಿಷ್ಣು ಪೂಜೆಗೆ ಮೀಸಲಾದ ಕಾರ್ತಿಕ ಮಾಸದ ಮಹತ್ವವೇನು..? – ಉತ್ತಮ ಆರೋಗ್ಯ ಮತ್ತು ಸಮೃದ್ಧಿಗಾಗಿ ಈ ಮಾಸದಲ್ಲಿ ಯಾವ ಪರಿಹಾರಗಳನ್ನು ತೆಗೆದುಕೊಳ್ಳಬೇಕು?

ನ್ಯೂಸ್ ಆ್ಯರೋ : ಈ ವರ್ಷದ ಕಾರ್ತಿಕ ಮಾಸವು ಈಗಾಗಲೇ ಆರಂಭವಾಗಿದ್ದು, ನ.27ರ ವರೆಗೆ ಇರಲಿದೆ. ಕಾರ್ತಿಕ ಮಾಸವು ಭಗವಾನ್‌ ವಿಷ್ಣುವಿನ ಬಲು ನೆಚ್ಚಿನ ಮಾಸಗಳಲ್ಲಿ ಒಂದಾಗಿದ್ಜು, ಅಶ್ವಿನಿ ಮಾಸದ ಅಮಾವಾಸ್ಯೆಯ ನಂತರ, ಕಾರ್ತಿಕ ಮಾಸವು ಪ್ರಾರಂಭವಾಗುತ್ತದೆ ಎಂದು ಪರಿಗಣಿಸಲಾಗುತ್ತದೆ. ಕಾರ್ತಿಕ ಮಾಸವನ್ನು ವಿಷ್ಣುವಿನ ಆರಾಧನೆ ಮತ್ತು ತುಳಸಿಯ ಆರಾಧನೆಗೆ ಅತ್ಯಂತ ವಿಶೇಷವೆಂದು ಪರಿಗಣಿಸಲಾಗಿದೆ.‌
ಹಾಗಿದ್ದರೆ ಕಾರ್ತಿಕ ಮಾಸದ ಮಹತ್ವವೇನು..? ಆರೋಗ್ಯ ಮತ್ತು ಸಮೃದ್ಧಿಗಾಗಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ.

ಕಾರ್ತಿಕ ಮಾಸದ ಮಹತ್ವ

ಕಾರ್ತಿಕ ಮಾಸವು ಪೌರಾಣಿಕ ನಂಬಿಕೆಗಳ ಚಾತುರ್ಮಾಸದ ಪ್ರಮುಖ ತಿಂಗಳು. ಕಾರ್ತಿಕ ಮಾಸದ ದೇವೋತ್ಥಾನ ಏಕಾದಶಿಯಂದು ನಾಲ್ಕು ತಿಂಗಳ ನಿದ್ರೆಯ ನಂತರ ಭಗವಾನ್ ವಿಷ್ಣುವು ಎಚ್ಚರಗೊಳ್ಳುತ್ತಾನೆ. ಈ ಮಾಸದಲ್ಲಿ ಭಗವಾನ್ ವಿಷ್ಣುವಿನೊಂದಿಗೆ ತುಳಸಿ ಪೂಜೆಯು ವಿಶೇಷ ಮಹತ್ವವನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ. ತುಳಸಿ ಮತ್ತು ಶಾಲಿಗ್ರಾಮದ ಮದುವೆ ಇದೇ ತಿಂಗಳಲ್ಲಿ ನಡೆಯುತ್ತದೆ.

ಗಂಗಾ ಸ್ನಾನ, ದೀಪ ದಾನ, ಯಜ್ಞ ಮತ್ತು ಆಚರಣೆಗಳು ಕಾರ್ತಿಕ ಮಾಸದಲ್ಲಿ ಹೆಚ್ಚು ಫಲಿತಾಂಶಗಳನ್ನು ನೀಡುತ್ತವೆ ಎಂದು ಪರಿಗಣಿಸಲಾಗಿದೆ. ಇವುಗಳನ್ನು ಮಾಡುವುದರಿಂದ ನಿಮ್ಮ ಸಂಕಟ ನಿವಾರಣೆಯ ಜೊತೆಗೆ ಪುಣ್ಯವೂ ಸಿಗುತ್ತದೆ ಮತ್ತು ಗ್ರಹಸ್ಥಿತಿಯೂ ಸುಧಾರಿಸುತ್ತದೆ.

ಕಾರ್ತಿಕದಲ್ಲಿ ತುಳಸಿ ಪೂಜೆ

ಕಾರ್ತಿಕ ಮಾಸವನ್ನು ವಿಷ್ಣುವಿನ ಆರಾಧನೆಗೆ ಅತ್ಯಂತ ವಿಶೇಷವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ಮಾಸದಲ್ಲಿ ವಿಷ್ಣುಪ್ರಿಯ ತುಳಸಿಯನ್ನು ಪೂಜಿಸುವುದು ಸಹ ತುಂಬಾ ಒಳ್ಳೆಯದು ಎನ್ನುವ ಉಲ್ಲೇಖವಿದೆ. ಈ ತಿಂಗಳು ತುಳಸಿ ಗಿಡದ ಕೆಳಗೆ ತುಪ್ಪದ ದೀಪವನ್ನು ಹಚ್ಚುವ ಸಂಪ್ರದಾಯವಿದೆ. ಹೀಗೆ ಮಾಡುವುದರಿಂದ ನಿಮಗೆ ಧನಲಾಭವಾಗುತ್ತದೆ ಮತ್ತು ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ. ಶಾಲಿಗ್ರಾಮ ಮತ್ತು ತುಳಸಿಯ ವಿವಾಹವನ್ನು ಕಾರ್ತಿಕ ಪೂರ್ಣಿಮೆಯ ದಿನದಂದು ಮಾಡಲಾಗುತ್ತದೆ.

ಕಾರ್ತಿಕ ಮಾಸದಲ್ಲಿ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು..?

ಪೌರಾಣಿಕ ನಂಬಿಕೆಗಳ ಪ್ರಕಾರ, ಈ ತಿಂಗಳಲ್ಲಿ, ಶ್ರೀಹರಿಯು ಮತ್ಸ್ಯ ಅವತಾರದಲ್ಲಿ ವಾಸಿಸುತ್ತಾನೆ. ಆದ್ದರಿಂದ ಈ ತಿಂಗಳಿನಲ್ಲಿ ಮರೆತು ಮೀನು ಅಥವಾ ಇತರ ರೀತಿಯ ತಾಮಸಿಕ ವಸ್ತುಗಳನ್ನು ಸೇವಿಸಬಾರದು.

  • ಕಾರ್ತಿಕದಲ್ಲಿ ಬದನೆಕಾಯಿ ತಿನ್ನುವುದು ಅಶುಭವೆಂದು ಪರಿಗಣಿಸಲಾಗಿದೆ. ಹಾಗೆಯೇ ಈ ಮಾಸದಲ್ಲಿ ದ್ವಿದಳವನ್ನು ಎಂದರೆ ಎರಡು ಭಾಗ ಹೊಂದಿರುವ ಧಾನ್ಯಗಳನ್ನು ಸೇವಿಸಬಾರದು. ಉದ್ದು, ಕಡಲೆ, ಉದ್ದಿನಬೇಳೆ, ಹೆಸರು ಕಾಳು, ಬಟಾಣಿ ಇತ್ಯಾದಿ ಧಾನ್ಯಗಳನ್ನು ದ್ವಿದಳ ಧಾನ್ಯಗಳೆಂದು ಪರಿಗಣಿಸಲಾಗುತ್ತದೆ.
  • ಕಾರ್ತಿಕ ಮಾಸದಲ್ಲಿ ಜೀರಿಗೆಯನ್ನು ಬಳಸಬಾರದು. ಜೀರಿಗೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗಿದ್ದರೂ, ಕಾರ್ತಿಕ ಮಾಸದಲ್ಲಿ ಇದನ್ನು ತಿನ್ನುವುದರಿಂದ ಹಾನಿ ಉಂಟಾಗುತ್ತದೆ.
  • ಕಾರ್ತಿಕ ಮಾಸದಲ್ಲಿ ನೀವು ಮೊಸರನ್ನು ಸೇವಿಸದಿದ್ದರೆ, ನಿಮ್ಮ ಆರೋಗ್ಯ ಮತ್ತು ಆರ್ಥಿಕ ದೃಷ್ಟಿಕೋನದಿಂದ ಪ್ರಯೋಜನವನ್ನು ಪಡೆಯುವಿರಿ. ಕಾರ್ತಿಕ ಮಾಸದಲ್ಲಿ ಮೊಸರು ತಿನ್ನುವುದು ಸಂತಾನಕ್ಕೆ ಅಶುಭವೆಂದು ಪರಿಗಣಿಸಲಾಗಿದೆ.
  • ಕಾರ್ತಿಕ ಮಾಸದಲ್ಲಿ ಹಾಗಲಕಾಯಿಯನ್ನು ಕೂಡ ತಿನ್ನಬಾರದು. ಹಾಗಲಕಾಯಿಯು ವಾತ ರೋಗವನ್ನು ಹೆಚ್ಚಿಸುವ ತರಕಾರಿ ಎಂದು ನಂಬಲಾಗಿದೆ ಮತ್ತು ಈ ತಿಂಗಳಲ್ಲಿ ಹಾಗಲಕಾಯಿಯಲ್ಲಿ ಕೀಟಗಳು ಸಹ ಬೀಳುತ್ತವೆ, ಆದ್ದರಿಂದ ಹಾಗಲಕಾಯಿಯನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವೆಂದು ಪರಿಗಣಿಸಲಾಗಿದೆ.
  • ಕಾರ್ತಿಕ ಮಾಸದಲ್ಲಿ ಮೂಲಂಗಿಯನ್ನು ತಿನ್ನುವುದು ಶಾಸ್ತ್ರಗಳಲ್ಲಿ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಈ ಋತುವಿನಲ್ಲಿ, ಕಫ ದೋಷ ಮತ್ತು ಪಿತ್ತ ದೋಷ ಸಂಬಂಧಿತ ಕಾಯಿಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು, ಆದ್ದರಿಂದ ಈ ತಿಂಗಳಲ್ಲಿ ಮೂಲಂಗಿ ತಿನ್ನುವುದು ಪ್ರಯೋಜನಕಾರಿಯಾಗಿದೆ.

ಕಾರ್ತಿಕ ಮಾಸದಲ್ಲಿ ಈ ಕೆಲಸಗಳನ್ನು ಮಾಡಿ:

  • ಕಾರ್ತಿಕ ಮಾಸದಲ್ಲಿ ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಗಂಗೆಯಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಮನೆಯಲ್ಲಿ ಸ್ನಾನ ಮಾಡುವ ನೀರಿಗೆ ಗಂಗಾಜಲವನ್ನು ಬೆರೆಸಿ ಸ್ನಾನ ಮಾಡಬಹುದು.
  • ಕಾರ್ತಿಕ ಮಾಸದಲ್ಲಿ ತುಳಸಿಯ ಕೆಳಗೆ 30 ದಿನಗಳ ಕಾಲ ತುಪ್ಪದ ದೀಪವನ್ನು ಹಚ್ಚಬೇಕು. ಇಷ್ಟು ದಿನ ನಿರಂತರವಾಗಿ ದೀಪ ಹಚ್ಚಲು ಸಾಧ್ಯವಾಗದಿದ್ದರೆ ದೇವುತ್ಥಾನ ಏಕಾದಶಿಯಿಂದ ಕಾರ್ತಿಕ ಪೂರ್ಣಿಮಾದವರೆಗೆ ಕನಿಷ್ಠ 5 ದಿನಗಳ ಕಾಲ ದೀಪ ಹಚ್ಚಿಡಿ. ತುಳಸಿಯನ್ನು ಪೂಜಿಸುವುದರಿಂದ ಲಕ್ಷ್ಮಿ ದೇವಿಯ ಜೊತೆಗೆ ಕುಬೇರನ ಆಶೀರ್ವಾದವೂ ದೊರೆಯುತ್ತದೆ.

ಕಾರ್ತಿಕ ಮಾಸದ ಸಂಪೂರ್ಣ ಒಂದು ತಿಂಗಳು ಈ ಮೇಲಿನ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಅಥವಾ ಈ ಮಾಸದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ನಿಯಮಗಳನ್ನು ಪಾಲಿಸುವುದರಿಂದ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಅನುಗ್ರಹದೊಂದಿಗೆ ಕುಬೇರನ ಆಶೀರ್ವಾದವೂ ಪ್ರಾಪ್ತವಾಗುತ್ತದೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *