
ಮಂಡ್ಯ: ತನ್ನ ಬಗ್ಗೆ ಹೆತ್ತವರಿಗೆ ದೂರು ನೀಡಿದ್ದಕ್ಕೆ ವಿದ್ಯಾರ್ಥಿಯ ಆಕ್ರೋಶ – ಉಪನ್ಯಾಸಕರಿಗೆ ಲಾಂಗ್ ತೋರಿಸಿ ವಿದ್ಯಾರ್ಥಿ ದರ್ಪ, ವಿಡಿಯೋ ವೈರಲ್
- ಕರ್ನಾಟಕ
- August 25, 2023
- No Comment
- 137
ನ್ಯೂಸ್ ಆ್ಯರೋ : ತನ್ನ ಬಗ್ಗೆ ಹೆತ್ತವರಿಗೆ ದೂರು ನೀಡಿದ್ದಕ್ಕೆ ವಿದ್ಯಾರ್ಥಿಯೊಬ್ಬ ಆಕ್ರೋಶ ವ್ಯಕ್ತಪಡಿಸಿ ಉಪನ್ಯಾಸಕರಿಗೆ ಲಾಂಗ್ ತೋರಿಸಿ ವಿದ್ಯಾರ್ಥಿಯೊಬ್ಬ ದರ್ಪ ಮೆರೆದ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯದ ನಾಗಮಂಗಲ ತಾಲೂಕಿನ ಬಿ.ಜಿ.ನಗರದಲ್ಲಿ ಈ ಘಟನೆ ಕಳೆದ ಆ.19 ರಂದು ನಡೆದಿದ್ದು, ಅವರೇಗೆರೆ ಗ್ರಾಮದ ಉದಯ್ ಗೌಡ (18) ಲಾಂಗ್ ತೋರಿಸಿದ ವಿದ್ಯಾರ್ಥಿಯಾಗಿದ್ದಾನೆ.
ಉಪನ್ಯಾಸಕ ಚಂದನ್ ರಿಂದ ದೂರು ದಾಖಲಾಗಿದ್ದು, ಘಟನೆಯು ವಿದ್ಯಾರ್ಥಿಗಳ ಮೊಬೈಲ್ ನಲ್ಲಿ ಸೆರೆಯಾಗಿದೆ.
ಬೆಳ್ಳೂರು ಪೊಲೀಸ್ ಠಾಣೆಗೆ ಉಪನ್ಯಾಸಕ ಚಂದನ್ ದೂರು ನೀಡಿದ್ದು, ಪೋಷಕರೊಂದಿಗೆ ಬಂದು ಉದಯ್ ಗೌಡ ಕ್ಷಮೆಯಾಚಿಸಿದ್ದಾನೆ ಎನ್ನಲಾಗಿದೆ.
ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೋಲಿಸರು ವಿಚಾರಣೆ ನಡೆಸಿದ್ದಾರೆ.