ರಸ್ತೆ ಬದಿಯ ಹೊಟೇಲ್ ಮಾಲೀಕನ ಮನೆಯಲ್ಲಿ 1.47 ಕೋಟಿ ಹಣ ಪತ್ತೆ..!! – ವಿವಿಧ 40 ಕ್ಯೂಆರ್ ನಲ್ಲಿ ವಹಿವಾಟು, ಏನಿದು ಅಕ್ರಮ?

ರಸ್ತೆ ಬದಿಯ ಹೊಟೇಲ್ ಮಾಲೀಕನ ಮನೆಯಲ್ಲಿ 1.47 ಕೋಟಿ ಹಣ ಪತ್ತೆ..!! – ವಿವಿಧ 40 ಕ್ಯೂಆರ್ ನಲ್ಲಿ ವಹಿವಾಟು, ಏನಿದು ಅಕ್ರಮ?

ನ್ಯೂಸ್ ಆ್ಯರೋ : ತೆರಿಗೆ ಪಾವತಿಸದೆ ಸರ್ಕಾರಕ್ಕೆ ವಂಚಿಸುತ್ತಿದ್ದ ಹೊಟೇಲ್‌ಗಳ ಮೇಲೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಜಾಗೃತಿ ದಳ ದಾಳಿ ನಡೆಸಿದೆ. ಈ ವೇಳೆ ಒಬ್ಬ ಬಿರಿಯಾನಿ ಹೊಟೇಲ್ ಮಾಲೀಕನ ಮನೆಯಲ್ಲಿ ಬರೋಬ್ಬರಿ ₹ 1.47 ಕೋಟಿ ನಗದು ಪತ್ತೆಯಾಗಿದೆ.

ಈಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸುತ್ತಮುತ್ತ ಬಿರಿಯಾನಿ ಮತ್ತು ಮಾಂಸಾಹಾರಿ ಹೊಟೇಲ್‌ ತುಂಬಾನೇ ಖ್ಯಾತಿ ಪಡೆದಿದೆ. ಬಿರಿಯಾನಿ ಸವಿಯಲು ಬೆಳಗ್ಗೆನೆ ಜನರು ಸಾಲು ಗಟ್ಟಿ ನಿಂತಿರುವ ದೃಶ್ಯಗಳು ಕಂಡುಬಂದಿದೆ.

ಇದರಿಂದ ಪ್ರತಿದಿನ ಲಕ್ಷಾಂತರ ರೂಪಾಯಿ ವಹಿವಾಟು ನಡೆಸಿದರು ಹೊಟೇಲ್ ಮಾಲೀಕರು ಜಿಎಸ್‌ಟಿ ನೋಂದಣಿ ಮಾಡಿಸಿಕೊಳ್ಳದೆ ಸರ್ಕಾರಕ್ಕೆ ವಂಚಿಸುತ್ತಿದ್ದರು. ಈ ಬಗ್ಗೆ ಹಲವಾರು ದೂರುಗಳು ಬಂದಿದೆ. ಖಚಿತ ಮಾಹಿತಿ ಮೇರೆಗೆ ವಾಣಿಜ್ಯ ತೆರಿಗೆ ಇಲಾಖೆ ಜಾಗೃತಿ ವಿಭಾಗದ ತಂಡ ವ್ಯಾಪಾರ ಕೇಂದ್ರಗಳಿಗೆ ಭೇಟಿ ಕೊಟ್ಟು ಮಾಹಿತಿ ಕಲೆ ಹಾಕಿತ್ತು.

ಬಹುತೇಕ ಹೋಟೆಲ್ ಮಾಲೀಕರು ತಮ್ಮ ವಹಿವಾಟಿಗೆ ಸಂಬಂಧಿಸಿದಂತೆ ಯಾವುದೇ ತೆರಿಗೆ ಬಿಲ್ಲು, ಪೂರೈಕೆ ಬಿಲ್ಲನ್ನು ನೀಡುತ್ತಿರಲಿಲ್ಲ. ಲೆಕ್ಕ ಪುಸ್ತಕಗಳನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದು ಕಂಡುಬಂದಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿದ ಜಾಗೃತ ದಳದ 50 ಅಧಿಕಾರಿಗಳ ವಿಶೇಷ ತಂಡ, ಬಿರಿಯಾನಿ ಮತ್ತು ಮಾಂಸಾಹಾರಿ ಹೋಟೆಲ್ ಮತ್ತು ಮನೆಗಳ ಮೇಲೆ ದಾಳಿ ನಡೆಸಿ ಶೋಧನೆ ನಡೆಸಲಾಯಿತು.

ಈ ವೇಳೆ ಬಿರಿಯಾನಿ ಹೋಟೆಲ್ ಮಾಲೀಕನೊಬ್ಬನ ಮನೆಯಲ್ಲಿ ಬರೋಬ್ಬರಿ ₹1.47 ಕೋಟಿ ನಗದು ಪತ್ತೆಯಾಗಿದೆ. ಮತ್ತೊಂದು ಬಿರಿಯಾನಿ ಮಾಲೀಕನ ಮನೆಯಲ್ಲಿಯೂ ಭಾರೀ ನಗದು ಪತ್ತೆಯಾಗಿದೆ.

ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ.ಶಿಖಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ತೆರಿಗೆ ವಂಚನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಧಿವಿಧಾನಗಳನ್ನು ವಿಶ್ಲೇಷಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ತನಿಖೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.

30 ಕ್ಯೂಆರ್ ಕೋರ್ಡ್

ಗ್ರಾಹಕರಿಂದ ನಗದು ಮತ್ತು ಯುಪಿಎ ಪಾವತಿ ಮೂಲಕ ವರ್ತುಕರು ಹಣ ಪಡೆಯುತ್ತಿದ್ದರು. ತೆರಿಗೆ ವಂಚನೆ ಮಾಡುವ ಉದ್ದೇಶಕ್ಕೆ ಯುಪಿಎ ಪಾವತಿ ಖಾತೆಗಳನ್ನೇ ಬದಲಾಯಿಸುವ ಮುಖಾಂತರ ನೈಜ ವಹಿವಾಟನ್ನು ಮುಚ್ಚಿಟ್ಟು ತೆರಿಗೆ ವಂಚಿಸುತ್ತಿದ್ದರು.

ಓರ್ವ ಮಾಲೀಕನ ಬಳಿ 30 ಕ್ಯೂಆರ್ ಕೋಡ್ ಖಾತೆಗಳು ಇರುವುದು ಪತ್ತೆಯಾಗಿದೆ. ಒಂದೇ ಖಾತೆಗೆ ಹಣ ಜಮೆಯಾದರೇ ಆದಾಯ ತೆರಿಗೆ ಇಲಾಖೆ ಮತ್ತು ಆರ್‌ಬಿಐಗೆ ಮಾಹಿತಿ ಹೋಗಲಿದೆ ಎಂಬ ಕಾರಣಕ್ಕೆ ಹಲವು ಯುಪಿಎ ಖಾತೆಗಳನ್ನು ಬಳಸುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

‌ನಿಗದಿತ ತೆರಿಗೆ ಪಾವತಿಸಿ:

ವಾಣಿಜ್ಯ ತೆರಿಗೆ ಇಲಾಖೆಯ ಮಾರ್ಗಸೂಚಿಗಳನ್ನು ಪ್ರತಿಯೊಬ್ಬ ವ್ಯಾಪಾರಸ್ಥರು, ಪಾಲನೆ ಮಾಡಿ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಜತೆಗೆ ನಿಗದಿತ ತೆರಿಗೆ ಪಾವತಿಸಿ ಕಾನೂನು ಕಟ್ಟಲೆಗಳಿಂದ ಮುಕ್ತವಾಗಿ ವಹಿವಾಟು ನಡೆಸುವಂತೆ ಹೊಟೇಲ್ ಮಾಲೀಕರಿಗೆ ವಾಣಿಜ್ಯ ತೆರಿಗೆ ಇಲಾಖೆ ಸಲಹೆ ನೀಡಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *