ರಾಗಿ ಮುದ್ದೆ ನಾಟಿಕೋಳಿ ಸಾರು ಉಣ್ಣುವ ಸ್ಪರ್ಧೆ – 3 ಕಿಲೋ ಮುದ್ದೆ ತಿಂದ 70 ವರ್ಷದ ಅಜ್ಜ..!!

ರಾಗಿ ಮುದ್ದೆ ನಾಟಿಕೋಳಿ ಸಾರು ಉಣ್ಣುವ ಸ್ಪರ್ಧೆ – 3 ಕಿಲೋ ಮುದ್ದೆ ತಿಂದ 70 ವರ್ಷದ ಅಜ್ಜ..!!

ನ್ಯೂಸ್ ಆ್ಯರೋ : ಹಳ್ಳಿಯ ಸೊಗಡನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ಇತ್ತೀಚೆಗೆ ನಾಟಿ ಕೋಳಿ ಸಾರು, ರಾಗಿ ಮುದ್ದೆ ಊಟದ ಸ್ಪರ್ಧೆ ಆಯೋಜಿಸಲಾಗಿತ್ತು.

ಈ ವಿಶೇಷ ಸ್ಪರ್ಧೆಯಲ್ಲಿ 70 ವರ್ಷದ ಶ್ರೀನಿವಾಸ್ ಬರೋಬ್ಬರಿ 250 ಗ್ರಾಂ ತೂಕದ 12 ಮುದ್ದೆಗಳನ್ನು ಅಂದರೆ 3 ಕಿಲೋ ಮುದ್ದೆ ತಿನ್ನುವ ಮೂಲಕ ಯುವ ಜನತೆಯ ಹುಬ್ಬೇರಿಸಿದ್ದಾರೆ.

ಆನೇಕಲ್ ತಾಲೂಕಿನ ಸರ್ಜಾಪುರದ ಮಂಥನ ಹೋಟೆಲ್ ಅವರಣದಲ್ಲಿ ನಡೆದ ನಾಟಿ ಕೋಳಿ ಮುದ್ದೆ ಊಟ ಸ್ಪರ್ಧೆಯನ್ನು ಸ್ಥಳೀಯ ಮಹೇಶ್ ಮತ್ತು ಕೆಎನ್ ಪ್ರಿಂಟರ್ಸ್ ಸಹಭಾಗಿತ್ವದಲ್ಲಿ ಆಯೋಜನೆ ಮಾಡಲಾಗಿತ್ತು.

ಈ ಸ್ಪರ್ಧೆಯಲ್ಲಿ ಮಂಡ್ಯ, ಕುಣಿಗಲ್, ಹಾಸನ, ಹೊಸಕೋಟೆ, ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಸೇಲಂ, ಸೇರಿದಂತೆ 37 ಕಡೆಯ ಸ್ಪರ್ಧಿಗಳು ಭಾಗಿಯಾಗಿದ್ದರು. ಒಟ್ಟು 30 ನಿಮಿಷ ಕಾಲಾವಕಾಶದಲ್ಲಿ ನಾಟಿ ಕೋಳಿ ಮತ್ತು ಮುದ್ದೆ ಉಣ್ಣುವ ಸ್ಪರ್ಧೆ ಇದಾಗಿತ್ತು.

ಮೊದಲ ಸ್ಥಾನ ಪಡೆದ ಹರೀಶ್ 13 ಮುದ್ದೆ ಕಬಳಿಸಿದರೆ, ಮೂರನೇ ಸ್ಥಾನ ಪಡೆದ ಆನಂದ್ 10 ಮುದ್ದೆಯನ್ನು ತಿಂದು ಉಡಾಯಿಸಿದ್ದಾರೆ.

Ragi ball eating competition  A 70-year-old grandfather ate a 3 kg of ragi balls

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಹರೀಶ್ ಅರ್ಧ ಗಂಟೆಯಲ್ಲಿ 13 ರಾಗಿ ಮುದ್ದೆಗಳನ್ನು ತಿಂದು, ಒಂದು ಟಗರು ಗೆದ್ದುಕೊಂಡಿದ್ದಾರೆ.

37 ಸ್ಪರ್ಧಿಗಳು ಭಾಗವಹಿಸಿದ್ದು ಸ್ಪರ್ಧಿಗಳಿಗೆ 30 ನಿಮಿಷ ಕಾಲಾವಕಾಶ ನೀಡಲಾಗಿತ್ತು. ಮೊದಲ ಸ್ಥಾನ ಪಡೆದವರಿಗೆ ಆಡು ಮತ್ತು ಎರಡನೇ ಮೂರನೇ ಸ್ಥಾನ ಪಡೆದವರಿಗೆ ನಾಟಿ ಕೋಳಿಯನ್ನು ಬಹುಮಾನದೊಂದಿಗೆ ನೀಡಿದ್ದು ವಿಶೇಷವಾಗಿತ್ತು.

ಆಧುನಿಕ ಜಂಕ್ ಫುಡ್ ಗಳ ಭರಾಟೆಯ ಎದುರು ಗ್ರಾಮೀಣ ಸೊಗಡಿನ ಆಹಾರ ಪದ್ಧತಿಯನ್ನು ಯುವ ಜನಾಂಗಕ್ಕೆ ಪರಿಚಯಿಸಲು ಈ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *