
JDS ತಾಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷನ ಕಾಮಕಾಂಡ – ಹಾಸ್ಟೆಲ್ ವಿದ್ಯಾರ್ಥಿನಿಯರ ಜೊತೆ ಲಾಡ್ಜ್ ನಲ್ಲಿ ಜಿಂಗಚಿಕ, ಫೋಟೋಸ್ ವೈರಲ್..!!
- ಕರ್ನಾಟಕ
- September 2, 2023
- No Comment
- 165
ನ್ಯೂಸ್ ಆ್ಯರೋ : ರಾಯಚೂರು ಜಿಲ್ಲೆಯ ದೇವದುರ್ಗ ಜೆಡಿಎಸ್ ತಾಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷನ ಕರ್ಮಕಾಂಡ ಬಯಲಾಗಿದೆ.
ಜೆಡಿಎಸ್ ತಾಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷ ಸಲೀಂ ಕಾಕರಗಲ್, ವಿದ್ಯಾರ್ಥಿನಿಯರ ಜೊತೆಗಿನ ಖಾಸಗಿ ಫೋಟೋಗಳು ವೈರಲ್ ಆಗಿವೆ. ಸುಮಾರು ಮೂರ್ನಾಲ್ಕು ವಿದ್ಯಾರ್ಥಿನಿಯರ ಜೊತೆಗಿರುವ ಖಾಸಗಿ ಫೋಟೋ ವೈರಲ್ ಆಗಿವೆ.
ಹಾಸ್ಟೆಲ್ ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡಿ, ದೇವದುರ್ಗ ಪಟ್ಟಣದ ಲಾಡ್ಜ್‌ಗಳಲ್ಲಿ ಹುಡುಗಿಯರ ಜೊತೆಗೆ ಇರುವ ಫೋಟೋಗಳು ವೈರಲ್ ಆಗಿದ್ದು, ಸೂಕ್ತ ಕ್ರಮಕ್ಕೆ ಜನರು ಆಗ್ರಹಿಸಿದ್ದಾರೆ.
ಸದ್ಯ ಸಲೀಂ ಕಾಕರಗಲ್ ಖಾಸಗಿ ಕ್ಷಣದ ವಿಡಿಯೋ ವೈರಲ್ ಆಗಿದ್ದು, ದೇವದುರ್ಗ ಪಟ್ಟಣದ ಲಾಡ್ಜ್ ಗಳನ್ನೇ ಈತ ಖಾಸಗಿ ಅಡ್ಡ ಆಗಿ ಮಾಡಿಕೊಂಡಿದ್ದನಂತೆ. ಬ್ಲಾಕ್ ಮೇಲ್ ಮಾಡ್ತಾ ಹುಡುಗಿಯರ ಜೊತೆ ಶೋಕಿ ಮಾಡುವುದು, ಹಾಸ್ಟೆಲ್ ವಿದ್ಯಾರ್ಥಿನಿಯರನ್ನೂ ಟಾರ್ಗೆಟ್ ಮಾಡಿ ಕೃತ್ಯ ಎಸಗುತ್ತಿದ್ದ ಎಂಬ ಆರೋಪ ಕೇಳಿ ಬಂದಿದ್ದು, ಯಾವುದೇ ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.