ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಟೊಯೋಟಾ ರೂಮಿಯಾನ್ ಕಾರು – ಎಕ್ಸ್‌ ಶೋ ರೂಂ ಬೆಲೆ, ಕಾರಿನ ಫೀಚರ್ಸ್ ಸೇರಿದಂತೆ ಎಲ್ಲಾ ಮಾಹಿತಿ ಇಲ್ಲಿದೆ..

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಟೊಯೋಟಾ ರೂಮಿಯಾನ್ ಕಾರು – ಎಕ್ಸ್‌ ಶೋ ರೂಂ ಬೆಲೆ, ಕಾರಿನ ಫೀಚರ್ಸ್ ಸೇರಿದಂತೆ ಎಲ್ಲಾ ಮಾಹಿತಿ ಇಲ್ಲಿದೆ..

ನ್ಯೂಸ್‌ ಆ್ಯರೋ : ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪೆನಿಯು ತನ್ನ ಹೊಸ ಕಾರಾದ ರೂಮಿಯನ್‌ ಅನ್ನು (Toyota Rumion) ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊಸ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕ ₹10.29 ಲಕ್ಷದಿಂದ ಟಾಪ್ ಎಂಡ್ ಮಾದರಿಯು ₹ 13.68 ಲಕ್ಷ ಬೆಲೆ ಎಂದು ಘೋಷಣೆ ಮಾಡಿದೆ.

ಹೊಸ ರೂಮಿಯಾನ್ ಎಂಪಿವಿ ಕಾರು ಎಸ್, ಎಸ್ ಆಟೋಮ್ಯಾಟಿಕ್, ಜಿ, ವಿ, ವಿ ಆಟೋಮ್ಯಾಟಿಕ್ ಮತ್ತು ಎಸ್ ಸಿಎನ್ ಜಿ ಎನ್ನುವ ಆರು ವೆರಿಯೆಂಟ್ ಗಳಲ್ಲಿ ಖರೀದಿ ಲಭ್ಯವಿದ್ದು, ಇದರಲ್ಲಿ ಎಸ್ ವೆರಿಯೆಂಟ್ ₹10.29 ಲಕ್ಷ ಹೊಂದಿದ್ದರೆ ಎಸ್ ಆಟೋಮ್ಯಾಟಿಕ್ ₹ 11.89 ಲಕ್ಷ, ಜಿ ವೆರಿಯೆಂಟ್ ₹11.45 ಲಕ್ಷ, ವಿ ವೆರಿಯೆಂಟ್ ₹12.18 ಲಕ್ಷ, ವಿ ಆಟೋಮ್ಯಾಟಿಕ್ ವೆರಿಯೆಂಟ್ ₹13.68 ಲಕ್ಷ ಹೊಂದಿದೆ. ಹಾಗೆಯೇ ಎಸ್ ವೆರಿಯೆಂಟ್ ಆಧರಿಸಿರುವ ಸಿಎನ್ ಜಿ ಮಾದರಿಯು ₹11.24 ಲಕ್ಷ ಬೆಲೆ ಹೊಂದಿದೆ.

ಭಾರತದಲ್ಲಿ ಪಾಲುದಾರಿಕೆ ಯೋಜನೆ ಅಡಿ ಟೊಯೊಟಾ ಕಂಪನಿಯು ಮಾರುತಿ ಸುಜುಕಿ ಜೊತೆಗೂಡಿ ಈಗಾಗಲೇ ಹಲವು ರೀಬ್ಯಾಡ್ಜ್ ಕಾರುಗಳನ್ನು ಪರಿಚಯಿಸಿದ್ದು, ಇದೀಗ ಜನಪ್ರಿಯ ಎರ್ಟಿಗಾ ಆಧರಿಸಿ ರೂಮಿಯಾನ್ ಪರಿಚಯಿಸಿದೆ. ಹೊಸ ರೂಮಿಯಾನ್ ಕಾರು ಎರ್ಟಿಗಾ ಕಾರಿನಂತೆಯೇ ಹಲವಾರು ತಾಂತ್ರಿಕ ಸೌಲಭ್ಯ ಹೊಂದಿದ್ದು, ತುಸು ಹೆಚ್ಚುವರಿ ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ₹ 60 ಸಾವಿರದಷ್ಟು ದುಬಾರಿಯಾಗಿದೆ.

ಏನೆಲ್ಲ ವಿಶೇಷತೆಯಿದೆ?

ಹೊಸ ರೂಮಿಯಾನ್ ಕಾರು ತಾಂತ್ರಿಕವಾಗಿ ಎರ್ಟಿಗಾ ಆಧರಿಸಿದ್ದರೂ ಕೂಡಾ ಟೊಯೊಟಾ ಕಂಪನಿಯ ಸುಧಾರಿತ ವಿನ್ಯಾಸವು ಗ್ರಾಹಕರನ್ನು ಆಕರ್ಷಿಸಲಿದ್ದು, ಇದರಲ್ಲಿ ಇನೋವಾದಿಂದ ಸ್ಪೂರ್ತಿ ಪಡೆದಿರುವ ಫ್ರಂಟ್ ಗ್ರಿಲ್, ಫ್ರಂಟ್ ಬಂಪರ್, ಕ್ರೋಮ್ ಸರೌಂಡ್ ಏರ್ ಡ್ಯಾಮ್, ಮಷಿನ್ ಫಿನಿಶ್ಡ್ ಹೊಂದಿರುವ ಅಲಾಯ್ ವ್ಹೀಲ್ ಸೇರಿ ಹಲವು ಆಕರ್ಷಕ ಫೀಚರ್ಸ್ ಜೋಡಣೆ ಮಾಡಲಾಗಿದೆ. ಜೊತೆಗೆ ಹೊಸ ಕಾರಿನ ಒಳಭಾಗದಲ್ಲೂ ಹಲವಾರು ಆಕರ್ಷಕ ಫೀಚರ್ಸ್ ಗಳಿದ್ದು, ಇದು 7 ಸೀಟರ್ ಸೌಲಭ್ಯದೊಂದಿಗೆ 7 ಇಂಚಿನ ಟಚ್ ಸ್ಕ್ರೀನ್, ವೈರ್ ಲೆಸ್ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ಅನಲಾಗ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ಡಿಜಿಟಲ್ ಮಲ್ಟಿ ಇನ್ಫಾರ್ಮೆಷನ್ ಡಿಸ್ಲೇ, ಬ್ಲ್ಯಾಕ್ ಔಟ್ ಡ್ಯಾಶ್ ಬೋರ್ಡ್, ಫ್ಲಕ್ಸ್ ವುಡ್ ಇನ್ಸರ್ಟ್ ಸೇರಿದಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳ ಜೋಡಣೆ ಹೊಂದಿದೆ.

ಎಂಜಿನ್ ಆಯ್ಕೆಗಳು ಮತ್ತು ಮೈಲೇಜ್

ರೂಮಿಯಾನ್ ಕಾರು ಮಾದರಿಯು ಮಾರುತಿ ಸುಜುಕಿ ಎರ್ಟಿಗಾದಲ್ಲಿರುವಂತೆ ಎಂಜಿನ್ ಆಯ್ಕೆ ಹೊಂದಿದ್ದು, ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ 1.5 ಲೀಟರ್ ಪೆಟ್ರೋಲ್ ಅಥವಾ ಸಿಎನ್ ಜಿ ಆವೃತ್ತಿಗಳನ್ನು ಖರೀದಿ ಮಾಡಬಹುದಾಗಿದೆ. ಇದರಲ್ಲಿ 1.5 ಲೀಟರ್ ಪೆಟ್ರೋಲ್ ಆವೃತ್ತಿಯು ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರಲಿದ್ದು, ಇದು 103 ಹಾರ್ಸ್ ಪವರ್ ಮತ್ತು 137 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 20.51 ಕಿ.ಮೀ ಮೈಲೇಜ್ ನೀಡುತ್ತದೆ.

ಹಾಗೆಯೇ ಸಿಎನ್ ಜಿ ಮಾದರಿಯು ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಪ್ರತಿ ಕೆಜಿ ಸಿಎನ್ ಜಿಗೆ ಗರಿಷ್ಠ 26.11 ಕಿ.ಮೀ ಮೈಲೇಜ್ ನೀಡಲಿದ್ದು, ಇದು ವೈಯಕ್ತಿಕ ಬಳಕೆಗೆ ಮತ್ತು ವಾಣಿಜ್ಯ ಬಳಕೆದಾರರ ಆಯ್ಕೆಗೆ ಅತ್ಯುತ್ತಮವಾಗಿದೆ.

ಸುರಕ್ಷತೆಯಲ್ಲೂ ಗಮನ ಸೆಳೆದ ರೂಮಿಯಾನ್

ಹೊಸ ರೂಮಿಯಾನ್ ಕಾರು ಸುರಕ್ಷತೆಯಲ್ಲೂ ಗಮನಸೆಳೆಯಲಿದ್ದು, ಇದು ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಪಡೆದುಕೊಂಡಿರಲಿದೆ. ಎರ್ಟಿಗಾದಲ್ಲಿರುವಂತೆ ನಾಲ್ಕು ಏರ್ ಬ್ಯಾಗ್, ಸೀಟ್ ಬೆಲ್ಟ್ ವಾರ್ನಿಂಗ್, ಚೈಲ್ಡ್ ಲಾಕ್, ಓವರ್ ಸ್ಪೀಡ್ ವಾರ್ನಿಂಗ್, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್, ಆ್ಯಂಟಿ ಥೆಫ್ಟ್ ಇಮ್ ಮೊಬಿಲೈಜರ್, ಹಿಂಬದಿಯ ಆಸನದಲ್ಲಿ ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಮತ್ತು ಸೆಂಟ್ರಲ್ ಲಾಕಿಂಗ್ ಸೌಲಭ್ಯ ಒಳಗೊಂಡಿರಲಿದೆ. ಇದರೊಂದಿಗೆ ಹೊಸ ಕಾರು ಶೀಘ್ರದಲ್ಲಿಯೇ ಜಾರಿಗೆ ಬರಲಿರುವ ಭಾರತ್ ಕ್ರ್ಯಾಶ್ ಟೆಸ್ಟಿಂಗ್ ಮಾನದಂಡಗಳನ್ನು ಪೂರೈಸಲು ಸಹಕಾರಿಯಾಗಲಿದ್ದು, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡಲಿದೆ.

3 ವರ್ಷಗಳ ವಾರಂಟಿ

ಹೊಸ ರೂಮಿಯಾನ್ ರೀಬ್ಯಾಡ್ಜ್ ಕಾರು ಖರೀದಿಸುವ ಗ್ರಾಹಕರಿಗೆ ಟೊಯೊಟಾ ಕಂಪನಿಯು 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ನೀಡಿದೆ. ಜೊತೆಗೆ ಗ್ರಾಹಕರು ಹೆಚ್ಚುವರಿ ಮೊತ್ತ ಪಾವತಿಯೊಂದಿಗೆ 5 ವರ್ಷಗಳ ವಿಸ್ತರಿತ ವಾರಂಟಿ ಆಯ್ಕೆ ಪಡೆದುಕೊಳ್ಳಬಹುದಾಗಿದ್ದು, ಇದು ಎರ್ಟಿಗಾ, ಎಕ್ಸ್ಎಲ್6 ಮತ್ತು ಕಿಯಾ ಕಾರೆನ್ಸ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಿದೆ.

ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದ್ದ ಹಾಗೆಯೇ ಭಾರೀ ಕ್ರೇಜ್‌ ಅನ್ನು ಹುಟ್ಟು ಹಾಕಿರುವ ರೂಮಿಯಾನ್, ಮುಂದಿನ ದಿನಗಳಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *