
ನಿಮ್ಮ ನಡಿಗೆಯಲ್ಲೇ ನಿಮ್ಮ ವ್ಯಕ್ತಿತ್ವ ಪತ್ತೆ ಹಚ್ಚಬಹುದು – ಇದರಲ್ಲಿ ನಿಮ್ಮ ನಡಿಗೆಯ ಶೈಲಿ ಯಾವುದು?
- ಕೌತುಕ-ವಿಜ್ಞಾನ
- September 2, 2023
- No Comment
- 116
ನ್ಯೂಸ್ ಆ್ಯರೋ : ವ್ಯಕ್ತಿಯೊಬ್ಬನ ಪ್ರತಿಯೊಂದು ಚಲನವಲನ, ನಡವಳಿಕೆ ವ್ಯಕ್ತಿತ್ವದ ಕನ್ನಡಿಯೇ ಆಗಿದೆ. ಫೋನ್ ನಲ್ಲಿ ಯಾವ ರಿಂಗ್ ಟೋನ್ ಇಡುತ್ತಾರೆ ಎನ್ನುವುದನ್ನು ಗಮನಿಸಿಯೂ ವ್ಯಕ್ತಿತ್ವವನ್ನು ಅಳೆಯಲು ಸಾಧ್ಯವಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ನಡೆಯುವ ರೀತಿಯಿಂದ ವ್ಯಕ್ತಿತ್ವವನ್ನು ಅಳೆಯಬಹುದು
ಜರ್ಮನ್ ಮೂಲದ ಮನಶಾಸ್ತ್ರಜ್ಞ ವರ್ನರ್ ವೋಲ್ಪ್ 1935ರಲ್ಲಿ ನಾವು ನಡೆಯುವ ರೀತಿಯಿಂದಲೇ ನಮ್ಮ ವ್ಯಕ್ತಿತ್ವವನ್ನು ಅಳೆಯಬಹುದು ಎನ್ನುವುದನ್ನು ಪ್ರತಿಪಾದಿಸಿದ್ದಾರೆ. ಕೆಲವರು ನಿಧಾನವಾಗಿ ನಡೆದರೆ ಇನ್ನು ಕೆಲವರು ವೇಗವಾಗಿ ಹೆಜ್ಜೆ ಹಾಕುತ್ತಾರೆ. ಹಲವರು ತಲೆ ತಗ್ಗಿಸಿ ನಡೆಯುತ್ತಾರೆ. ಇದು ಏನನ್ನು ಸೂಚಿಸುತ್ತದೆ ಎನ್ನುವುದನ್ನು ನೋಡೋಣ.
ನಿಧಾನ ನಡಿಗೆ
ನಿಧಾನವಾಗಿ ಆದರೆ ಆತ್ಮವಿಶ್ವಾಸದಿಂದ ಭುಜಗಳನ್ನು ನೇರವಾಗಿ ಮತ್ತು ತಲೆಯನ್ನು ಎತ್ತರಕ್ಕೆ ಹಿಡಿದು ನಡೆದರೆ ಅಂತಹವರು ಶಾಂತ, ವರ್ಚಸ್ವಿ ಮತ್ತು ಆಕರ್ಷಕ ವ್ಯಕ್ತಿತ್ವ ಹೊಂದಿದವರು ಎಂದರ್ಥ. ಜೊತೆಗೆ ಸಾಮಾಜಿಕವಾಗಿ ಸ್ನೇಹಪರರಾಗಿರುತ್ತಾರೆ. ಪದೇ ಪದೆ ತಪ್ಪು ಮಾಡುವವರನ್ನು ಅವರು ಎಂದಿಗೂ ಕ್ಷಮಿಸುವುದಿಲ್ಲ. ಅದೇ ರೀತಿ ತಲೆ ಕೆಳಗೆ ಹಾಕಿ ನಡೆಯುವ ರೀತಿ ಭಯಭೀತಿ ಮನಸ್ಥಿತಿ ಹೊಂದಿರುವುದನ್ನು ಸೂಚಿಸುತ್ತದೆ. ಇದಕ್ಕೆ ಆತ್ಮವಿಶ್ವಾಸದ ಕೊರತೆಯೂ ಕಾರಣವಾಗಿರಬಹುದು.
ವೇಗದ ನಡಿಗೆ
ದಿನ ನಿತ್ಯದ ಕೆಲಸ ಕಾರ್ಯಗಳನ್ನು ವೇಗವಾಗಿ ನಿರ್ವಹಿಸುವವರು ವೇಗವಾಗಿ ನಡೆಯುವ ಅಭ್ಯಾಸ ಹೊಂದಿರುತ್ತಾರೆ. ಅಲ್ಲದೆ ಅಂತಹವರು ಯಾವುದೇ ಸಂಕೋಚವಿಲ್ಲದೆ ಹೊಸ ಜನರೊಂದಿಗೆ ಬೆರಯುವ ಸ್ನೇಹಪರರಾಗಿರುತ್ತಾರೆ. ಅವರು ಅಪಾಯಗಳನ್ನು ಎದುರಿಸಲು ಹೆದರುವುದಿಲ್ಲ. ಗುರಿಯನ್ನು ವೇಗವಾಗಿ ತಲುಪುತ್ತಾರೆ. ಅಭಿಪ್ರಾಗಳನ್ನು ಮುಕ್ತವಾಗಿ ಮತ್ತು ನಿರ್ಭೀತಿಯಿಂದ ಹೇಳಲು ಶಕ್ತರಾಗಿರುತ್ತಾರೆ. ಸದಾ ಕ್ರಿಯಾಶೀಲರಾಗಿರುತ್ತಾರೆ.
ದಾಪುಗಾಲಿನ ನಡಿಗೆ
ಆತ್ಮವಿಶ್ವಾಸದ ಸಂಕೇತ ದಾಪುಗಾಲು ನಡಿಗೆ. ಜನರು ಇಂತಹವರಿಗೆ ಬಹಳಷ್ಟು ಗೌರವ ನೀಡುತ್ತಾರೆ. ನಡಿಗೆ ಶೈಲಿಯೇ ಜನರು ದಾರಿ ಬಿಟ್ಟು ಕೊಡುವಂತೆ ಮಾಡುತ್ತದೆ.