
Adithya L1 Launch : ಯಶಸ್ವಿಯಾಗಿ ನಭಕ್ಕೆ ಚಿಮ್ಮಿದ ಆದಿತ್ಯ ನೌಕೆ – ಮತ್ತೊಂದು ಇತಿಹಾಸ ಬರೆಯಲು ಸಜ್ಜಾದ ಇಸ್ರೋ
- ಕೌತುಕ-ವಿಜ್ಞಾನ
- September 2, 2023
- No Comment
- 32
ನ್ಯೂಸ್ ಆ್ಯರೋ : ಇಸ್ರೋದ ಮಹಾತ್ವಾಕಾಂಕ್ಷಿ ಆದಿತ್ಯ ಎಲ್ 1 ನೌಕೆ ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಚಂದ್ರಯಾನ 3 ಯಶಸ್ವಿನ ಬೆನ್ನಲ್ಲೇ ಇಸ್ರೋ ಮತ್ತೊಂದು ಇತಿಹಾಸ ಬರೆಯಲು ಸಜ್ಜಾಗಿದೆ.
ಉಪಹಗ್ರಹವನ್ನು ಹೊತ್ತ PSLV-XLC57 ರಾಕೆಟ್ ನಿಗದಿತ ಕಕ್ಷೆಯಲ್ಲಿ ಸಂಚರಿಸುತ್ತಿದೆ. ರಾಕೆಟ್ 1 ಮತ್ತು 2ನೇ ಹಂತದಲ್ಲಿ ಯಶಸ್ವಿಯಾಗಿ ಬೇರ್ಪಡಿಕೆಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಮಹತ್ವಕಾಂಕ್ಷೆಯ ಆದಿತ್ಯ ಎಲ್1 ಮಿಷನ್ ಯಶಸ್ವಿಯಾಗಿ ಉಡಾವಣೆಯಾಗಿದೆ.
ಸೂರ್ಯ ಭೂಮಿಯಿಂದ 15 ಲಕ್ಷ ಕಿ.ಮೀ.ಗಳಷ್ಟು ದೂರನಿದ್ದಾನೆ. ಸೂರ್ಯನ ವಯಸ್ಸು 4.5 ಬಿಲಿಯನ್ ವರ್ಷಗಳು. ಹೈಡ್ರೋಜನ್ & ಹೀಲಿಯಂ ಗ್ಯಾಸ್‌ನ ಕೆಂಡದುಂಡೆ ಸೂರ್ಯ. ಮೇಲ್ಮೈನಲ್ಲಿ 5,500 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ಮಧ್ಯಭಾಗ ಕೋರ್‌ನಲ್ಲಿ ಊಹಿಸಲಾಗದಷ್ಟು ಶಾಖವಿದೆ. 1.5ಕೋಟಿ ಡಿಗ್ರಿ ಸೆಲ್ಸಿಯಸ್‌ನ ಗರಿಷ್ಠ ತಾಪಮಾನವಿದೆ.
ಸೂರ್ಯನ ಅಧ್ಯಯನ ನಡೆಸಲು ಇಸ್ರೊ ಹಮ್ಮಿಕೊಂಡಿರುವ ಚೊಚ್ಚಲ ಯೋಜನೆ ಇದಾಗಿದ್ದು, ಒಟ್ಟು ಏಳು ಉಪಕರಣಗಳು (ಪೇಲೋಡ್) ಇರಲಿವೆ. ಸೂರ್ಯನ ಬಾಹ್ಯ ವಾತಾವರಣದ ಅಧ್ಯಯನಕ್ಕಾಗಿ ಇಸ್ರೊ ಸಿದ್ಧತೆ ನಡೆಸಿದೆ.