ಬಟ್ಟೆ ತೊಳೆಯುವ ಸಾಬೂನಿನ ನೊರೆ ಬಾಯಿಗೆ ಹಾಕಿ ಮೂರ್ಚೆ ಹೋದಂತೆ ನಟಿಸಿದ ಚೈತ್ರಾ – ಸಿಸಿಬಿ ಪೋಲಿಸರ ಮುಂದೆ ಬೃಹನ್ನಾಟಕ ಸೂತ್ರಧಾರಿಯ ಮತ್ತೊಂದು ನಾಟಕ‌ ಶಂಕೆ..!!

ಬಟ್ಟೆ ತೊಳೆಯುವ ಸಾಬೂನಿನ ನೊರೆ ಬಾಯಿಗೆ ಹಾಕಿ ಮೂರ್ಚೆ ಹೋದಂತೆ ನಟಿಸಿದ ಚೈತ್ರಾ – ಸಿಸಿಬಿ ಪೋಲಿಸರ ಮುಂದೆ ಬೃಹನ್ನಾಟಕ ಸೂತ್ರಧಾರಿಯ ಮತ್ತೊಂದು ನಾಟಕ‌ ಶಂಕೆ..!!

ನ್ಯೂಸ್ ಆ್ಯರೋ : ಬಹುಕೋಟಿ ವಂಚನೆಯ ಬೃಹನ್ನಾಟಕ ಸೂತ್ರಧಾರಿ ಚೈತ್ರಾ ಕುಂದಾಪುರ ಸಿಸಿಬಿ ಪೋಲಿಸರ ಮುಂದೆ ಮತ್ತೊಂದು ನಾಟಕ ಮಾಡಿರುವ ಅನುಮಾನ ಮೂಡಿದೆ‌. ಇಂದು ಮುಂಜಾನೆ ಮೂರ್ಚೆ ಬಂದಂತೆ ನಟಿಸಿದ್ದ ಚೈತ್ರಾ ಬಾಯಲ್ಲಿ ನೊರೆ ಬರಲು ಬಟ್ಟೆ ತೊಳೆಯುವ ಸಾಬೂನಿನ ನೊರೆ ಹಾಕಿಕೊಂಡ ಶಂಕೆ ವ್ಯಕ್ತವಾಗಿದೆ.

ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಯಲ್ಲಿರುವ ವಾಶ್​ ರೂಮ್ ಅನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಮುನ್ನೆಚ್ಚರಿಕೆ ಸಲುವಾಗಿ ಚೈತ್ರಾ ಕುಂದಾಪುರ ಅವರ ಆರೋಗ್ಯವನ್ನು ಎಲ್ಲಾ ರೀತಿಯಲ್ಲಿ ತಪಾಸಣೆ ನಡೆಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಅದರಂತೆ, ಬಿಪಿ, ಪಲ್ಸ್ ರೇಟ್ ನಾರ್ಮಲ್ ಇದೆ. ಅದರೂ ಮೂರ್ಛೆ ರೋಗಕ್ಕೆ ಸಂಬಂಧಿಸಿದ ತಪಾಸಣೆಗಳು, ಬಿಪಿ, ಹೃದಯ ಸಂಬಂಧಿ ಚೆಕಪ್, ಉಸಿರಾಟದ ಸಮಸ್ಯೆ ಸೇರಿದಂತೆ ಎಲ್ಲ ರೀತಿಯ ಪರೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ.

ವೈದ್ಯರ ತಪಾಸಣೆ ವೇಳೆ ಪಿಟ್ಸ್ ಅಥವಾ ಮೂರ್ಛೆ ರೋಗಕ್ಕೆ ಸಂಬಂಧಿಸಿದ ಯಾವುದೇ ಕುರುಹು ಕಂಡು ಬಂದಿಲ್ಲ ಎನ್ನಲಾಗಿದ್ದು, ಸದ್ಯ ಇನ್ನೂ ಕೆಲಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸಲು ಸಿಸಿಬಿ ಪೊಲೀಸರ ನಿರ್ಧಾರ ಮಾಡಿದ್ದಾರೆ.

ಸದ್ಯ ಚೈತ್ರಾ ಕುಂದಾಪುರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಬಂದ ತನಿಖಾಧಿಕಾರಿ ಸಿಸಿಬಿ ಕಚೇರಿಗೆ ವಾಪಸ್ ಆಗಿದ್ದಾರೆ. ಅಲ್ಲದೇ ಈ ಹಿಂದೆ ಇದೇ ರೀತಿ ಆಗಿದ್ದ ಘಟನೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಚೈತ್ರಾ ಕುಂದಾಪುರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ವಿಕ್ಟೋರಿಯಾ ಆಸ್ಪತ್ರೆ ವೈದ್ಯೆ ಡಾ.ಅಸೀಮಾ ಬಾನು, ಚೈತ್ರಾ ಕುಂದಾಪುರ ಆರೋಗ್ಯ ಸ್ಥಿರವಾಗಿದೆ. ಚೈತ್ರಾ ಕುಂದಾಪುರ ಸಿಟಿ ಸ್ಕ್ಯಾನ್, ಇಸಿಜಿ ರಿಪೋರ್ಟ್ ನಾರ್ಮಲ್​ ಇದೆ. ಚೈತ್ರಾ ಕುಂದಾಪುರಗೆ ನಡೆಸಿದ ಎಲ್ಲಾ ಟೆಸ್ಟ್​ನಲ್ಲೂ ನಾರ್ಮಲ್ ಇದೆ. ಅವರನ್ನು ಆಸ್ಪತ್ರೆಗೆ ಕರೆತಂದಾಗ ಮೂರ್ಛೆ ರೋಗ ಇರಲಿಲ್ಲ. ಸದ್ಯ ಐಸಿಯುನಲ್ಲಿ ಚೈತ್ರಾ ಕುಂದಾಪುರಗೆ ಚಿಕಿತ್ಸೆ ಮುಂದುವರಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

Related post

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ಮೇಷಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳ ಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ. ನೀವು ನಿಮ್ಮನ್ನು…
ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ – ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಕಾರವಾರದಲ್ಲಿ ಅರೆಸ್ಟ್…!!

ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ…

ನ್ಯೂಸ್ ಆ್ಯರೋ : ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ…
ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ ಬಿದ್ದವನ ಕಥೆ ಮುಂದೇನಾಯ್ತು ಗೊತ್ತಾ?

ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ…

ನ್ಯೂಸ್‌ ಆ್ಯರೋ : ಈ ಆಧುನಿಕ ಯುಗದಲ್ಲಿ ಎಲ್ಲನೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಇನ್ನೂ ಗೂಗಲ್ ಮುಖೇನಾ ನಮಗೆ ಬೇಕಾದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಯಾವ ವಿಷಯದ ಬಗ್ಗೆನೂ…

Leave a Reply

Your email address will not be published. Required fields are marked *