Engineers Day 2023: ಈ ದಿನದ ಇತಿಹಾಸ ಮತ್ತು ಮಹತ್ವವೇನು? – ವಿಶ್ವೇಶ್ವರಯ್ಯ ಹುಟ್ಟುಹಬ್ಬಕ್ಕೆ ಇಷ್ಟೊಂದು ಮಹತ್ವ ಯಾಕೆ ಗೊತ್ತಾ?

Engineers Day 2023: ಈ ದಿನದ ಇತಿಹಾಸ ಮತ್ತು ಮಹತ್ವವೇನು? – ವಿಶ್ವೇಶ್ವರಯ್ಯ ಹುಟ್ಟುಹಬ್ಬಕ್ಕೆ ಇಷ್ಟೊಂದು ಮಹತ್ವ ಯಾಕೆ ಗೊತ್ತಾ?

ನ್ಯೂಸ್ ಆ್ಯರೋ : ಇಂದು ಸೆಪ್ಟೆಂಬರ್ 15 ಇಂಜಿನಿಯರ್ ದಿನ. ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಇಂಜಿನಿಯರ್‌ ದಿನವನ್ನು ಆಚರಿಸಲಾಗುತ್ತದೆ. ದೇಶ ಕಂಡ ಅಪ್ರತಿಮ ಇಂಜಿನಿಯರ್, ಭಾರತ ರತ್ನ ಸರ್‌. ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನದ ಸ್ಮರಣಾರ್ಥ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಇಂಜಿನಿಯರ್ ದಿನವನ್ನು ಆಚರಿಸಲಾಗುತ್ತದೆ.

ಇಂಜಿನಿಯರ್ ದಿನವನ್ನು ಮೊದಲ ಬಾರಿಗೆ 1968, ಸೆಪ್ಟೆಂಬರ್ 15 ರಂದು ಆಚರಣೆ ಮಾಡಲಾಯಿತು. ಅಂದಿನಿಂದ ಪ್ರತಿವರ್ಷ ಸೆಪ್ಟೆಂಬರ್ 15 ರಂದು ಭಾರತದಲ್ಲಿ ಇಂಜಿನಿಯರ್ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಇಂಜಿನಿಯರ್‌ ದಿನವನ್ನು ಆಚರಣೆ ಮಾಡುವ ಮೂಲಕ ವಿಶ್ವೇಶ್ವರಯ್ಯ ಅವರ ಜೀವನವನ್ನು ಮತ್ತು ಅವರು ಮಾಡಿದ ಸಾಧನೆಯನ್ನು ಸ್ಮರಿಸಿಕೊಳ್ಳಲಾಗುತ್ತದೆ.

ಇತಿಹಾಸವೇನು..?

1968 ರಲ್ಲಿ ಭಾರತ ಸರ್ಕಾರವು ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಇಂಜಿನಿಯರ್ಸ್ ದಿನ ಎಂದು ಆಚರಣೆ ಮಾಡುವಂತೆ ಘೋಷಣೆ ಮಾಡಿತು.

ಅಂದಿನಿಂದ ಆಧುನಿಕ ಮತ್ತು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡಲು ಶ್ರಮಿಸುತ್ತಿರುವ ಎಲ್ಲಾ ಇಂಜಿನಿಯರ್‌ಗಳನ್ನು ಗೌರವಿಸಲು ಮತ್ತು ಗುರುತಿಸಲು ಈ ದಿನವನ್ನು ಇಂಜಿನಿಯರ್ಸ್ ಡೇ ಎಂದು ಆಚರಿಸಲಾಗುತ್ತದೆ.

ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ಆಧುನಿಕ ಭಾರತ ಸೃಷ್ಟಿಸಿದರು. ಮತ್ತು ದೇಶಕ್ಕೆ ಹೊಸ ರೂಪ ನೀಡಿದರು.

ವಿಶ್ವೇಶ್ವರಯ್ಯ ಅವರು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ನೀಡಿದರು. ವಿಶ್ವೇಶ್ವರಯ್ಯ ಅವರ ಶ್ರಮ, ಸಾಧನೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ.

ನಾಡಿನ ತುಂಬ ವಿಶ್ವೇಶ್ವರಯ್ಯ ಅವರು ನಿರ್ಮಿಸಿರುವ ಅನೇಕ ನದಿಗಳ ಅಣೆಕಟ್ಟುಗಳು ಮತ್ತು ಸೇತುವೆಗಳ ಯಶಸ್ಸಿನ ಹಿಂದೆ ವಿಶ್ವೇಶ್ವರಯ್ಯನವರ ದೊಡ್ಡ ಕೊಡುಗೆ ಇದೆ. ನಾಡಿನ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ವಿಶ್ವೇಶ್ವರಯ್ಯ ಅವರ ಕೊಡುಗೆಯಿದೆ.

ಇಂಜಿನಿಯರ್ಸ್ ಡೇ ಮಹತ್ವ

ಸರ್ ಎಂ ವಿಶ್ವೇಶ್ವರಯ್ಯ ಅವರಿ 1903 ರಲ್ಲಿ ಸ್ವಯಂಚಾಲಿತ ತಡೆಗೋಡೆ ನೀರಿನ ಪ್ರವಾಹ ಗೇಟ್‌ಗಳನ್ನು ವಿನ್ಯಾಸಗೊಳಿಸಿ ಪೇಟೆಂಟ್ ಪಡೆದರು. ಇದಕ್ಕೆ ಬ್ಲಾಕ್ ಸಿಸ್ಟಮ್ ಎನ್ನುತ್ತಾರೆ. ಇದು ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿದ್ದು ಅದು ನೀರು ಉಕ್ಕಿ ಹರಿಯುವ ಸಂದರ್ಭದಲ್ಲಿ ಮುಚ್ಚುತ್ತದೆ. ಇದನ್ನು ಮೊದಲು ಪುಣೆಯ ಖಡಕ್ವಾಸ್ಲಾ ಜಲಾಶಯದಲ್ಲಿ ಸ್ಥಾಪಿಸಲಾಯಿತು.

ಕರ್ನಾಟಕದ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಎಂಬ ಸಣ್ಣ ಹಳ್ಳಿಯಲ್ಲಿ 1861 ರಲ್ಲಿ ಜನಿಸಿದ ಸರ್ ಎಂ ವಿಶ್ವೇಶ್ವರಯ್ಯ ಅವರು ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಅನ್ನು ಅಧ್ಯಯನ ಮಾಡಿದರು ಮತ್ತು ಪುಣೆಯ ವಿಜ್ಞಾನ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಮಾಡಿದರು. 1917 ರಲ್ಲಿ ಅವರು ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದರು, ಇದನ್ನು ಈಗ ಬೆಂಗಳೂರಿನ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂದು ಕರೆಯಲಾಗುತ್ತದೆ.

ಕರ್ನಾಟಕದಲ್ಲಿ ಕೃಷ್ಣರಾಜ ಸಾಗರ ಜಲಾಶಯ ನಿರ್ಮಾಣ ಯೋಜನೆಗೆ ಸರ್ ಎಂ.ವಿಶ್ವೇಶ್ವರಯ್ಯ ಮುಖ್ಯಸ್ಥರಾಗಿದ್ದರು. 1934ರಲ್ಲಿ ಭಾರತದ ಆರ್ಥಿಕತೆಗೆ ಸಂಬಂಧಿಸಿ ಅನೇಕ ಯೋಜನೆಗಳನ್ನು ರೂಪಿಸಿದ ಸಮಿತಿಯಲ್ಲೂ ಅವರ ಪಾತ್ರವಿತ್ತು. ವಿಶ್ವೇಶ್ವರಯ್ಯ ಅವರ ಸಾರ್ವಜನಿಕ ಸೇವೆಯನ್ನು ಗಮನಿಸಿ ಅವರಿಗೆ ʻKnight Commander of the British Indian Empireʼ ಎಂಬ ಬಿರುದನ್ನು ನೀಡಲಾಗಿತ್ತು. 101 ವರ್ಷ ಜೀವನ ನಡೆಸಿದ ವಿಶ್ವೇಶ್ವರಯ್ಯನವರು 1962ರ ಏಪ್ರಿಲ್ 14ರಂದು ನಿಧನರಾದರು.

ಆಧುನಿಕ ಮೈಸೂರು ರಾಜ್ಯದ ಪಿತಾಮಹ

ವಿಶ್ವೇಶ್ವರಯ್ಯನವರನ್ನು ಆಧುನಿಕ ಮೈಸೂರು ರಾಜ್ಯದ ಪಿತಾಮಹ ಎಂದು ಗೌರವಿಸಲಾಗಿದೆ. ಅವರು ಮೈಸೂರು ಸರ್ಕಾದ ಜೊತೆ ಹಲವು ಕಾರ್ಖಾನೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿದರು.

ವಿಶೇಷವಾಗಿ ಮೈಸೂರು ಸೋಪ್ ಫ್ಯಾಕ್ಟರಿ, ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಮೈಸೂರು ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಸ್ಥಾಪಿಸಿದರು.

ಎಲ್ಲೆಲ್ಲಿ ಇಂಜಿನಿಯರ್ ದಿನ ಆಚರಿಸುತ್ತಾರೆ?

ಪ್ರಪಂಚದಾದ್ಯಂತದ ಇಂಜಿನಿಯರ್‌ಗಳನ್ನು ಪ್ರೋತ್ಸಾಹಿಸಲು ಇಂಜಿನಿಯರ್ ದಿನವನ್ನು ಆಚರಿಸಲಾಗುತ್ತದೆ. ಇಂಜಿನಿಯರ್ ಡೇ ಅನ್ನು ಭಾರತದಲ್ಲಿ ಮಾತ್ರವಲ್ಲದೆ ಅನೇಕ ದೇಶಗಳಲ್ಲಿ ಆಚರಣೆ ಮಾಡಲಾಗುತ್ತದೆ.

ಜೂನ್ 16 ರಂದು ಅರ್ಜೆಂಟೀನಾದಲ್ಲಿ, ಮೇ 7 ರಂದು ಬಾಂಗ್ಲಾದೇಶದಲ್ಲಿ, ಜೂನ್ 15 ರಂದು ಇಟಲಿಯಲ್ಲಿ, ಡಿಸೆಂಬರ್ 5 ರಂದು ಟರ್ಕಿಯಲ್ಲಿ, ಫೆಬ್ರವರಿ 24, ಬೆಲ್ಜಿಯಂನಲ್ಲಿ ಮಾರ್ಚ್ 20 ರಂದು ಮತ್ತು ಸೆಪ್ಟೆಂಬರ್ 14 ರಂದು ರೊಮೇನಿಯಾದಲ್ಲಿ ಇಂಜಿನಿಯರ್ ದಿನ ಆಚರಿಸಲಾಗುತ್ತದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *