ಅಕ್ಟೋಬರ್ 1ರಿಂದ ಈ ಕೆಲಸಗಳಿಗೆ ಜನನ ಪ್ರಮಾಣಪತ್ರ ಒದಗಿಸಿದರೆ ಸಾಕು – ಕೇಂದ್ರ ಗೃಹ ಸಚಿವಾಲಯ ಹೇಳೋದೇನು?

ಅಕ್ಟೋಬರ್ 1ರಿಂದ ಈ ಕೆಲಸಗಳಿಗೆ ಜನನ ಪ್ರಮಾಣಪತ್ರ ಒದಗಿಸಿದರೆ ಸಾಕು – ಕೇಂದ್ರ ಗೃಹ ಸಚಿವಾಲಯ ಹೇಳೋದೇನು?

ನ್ಯೂಸ್ ಆ್ಯರೋ‌ : ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯಿದೆ-2023 ಸಂಸತ್ ನಲ್ಲಿ ಅಂಗೀಕಾರಗೊಂಡಿದೆ. ಹೀಗಾಗಿ ಅಕ್ಟೋಬರ್ 1ರಿಂದ ಶಾಲಾ ದಾಖಲಾತಿ, ವಾಹನ ಚಾಲನಾ ಪರವಾವನಗಿ, ಸರಕಾರಿ ಉದ್ಯೋಗ, ಪಾಸ್ ಪೋರ್ಟ್, ಮತದಾರ ಪಟ್ಟಿ ನೋಂದಣಿ ಮುಂತಾದ ಕಾರ್ಯಗಳಿಗೆ ಜನನ ಪ್ರಮಾಣ ಪತ್ರವನ್ನು ಪ್ರಮುಖ ದಾಖಲೆಯಾಗಿ ಬಳಸಬಹುದು. ಹಲವು ಸೇವೆಗಳನ್ನು ಪಡೆಯಲು ಜನನ ಪ್ರಮಾಣ ಪತ್ರವನ್ನು ಪರಿಗಣಿಸಲಾಗುತ್ತದೆ.

ಕೇಂದ್ರ ಗೃಹ ಸಚಿವಾಲಯ ಹೇಳಿದ್ದೇನು?

ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ 2023ರ ಅನುಷ್ಠಾನವನ್ನು ಘೋಷಿಸಿದ ಕೇಂದ್ರ ಗೃಹ ಸಚಿವಾಲಯ, ಇದು ನೋಂದಾಯಿತ ಜನನ ಮತ್ತು ಮರಣಗಳ ಡೇಟಾಬೇಸ್ ರಚಿಸಲು ಸಹಾಯ ಮಾಡುತ್ತದೆ. ಇದು ಡಿಜಿಟಲ್ ನೋಂದಣಿಯನ್ನು ಖಚಿತಪಡಿಸುತ್ತದೆ ಎಂದು ಹೇಳಿದೆ.

ಜನನ ಮತ್ತು ಮರಣದ ಮಾಹಿತಿಯನ್ನು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಡೇಟಾಬೇಸ್ ನಲ್ಲಿ ಸೇರಿಸಲಾಗುತ್ತದೆ. ಕೇಂದ್ರೀಯ ನೋಂದಣಿ ವ್ಯವಸ್ಥೆಯಡಿ ರಾಜ್ಯಗಳು ಜನನ ಮತ್ತು ಮರಣದ ಮಾಹಿತಿಯನ್ನು ಕಡ್ಡಾಯವಾಗಿ ನೋಂದಾಯಿಸಬೇಕು ಎಂದು ಸೂಚಿಸಲಾಗಿದೆ.

ಪ್ರಮುಖಾಂಶಗಳು

  • ಈ ಕಾಯಿದೆಯು ಜನನ ಮತ್ತು ಮರಣಗಳ ರಾಷ್ಟ್ರೀಯ ನೋಂದಣಿಯನ್ನು ಮೇಲ್ವಿಚಾರಣೆ ನಡೆಸುವ ಅಧಿಕಾರವನ್ನು ರಿಜಿಸ್ಟ್ರಾರ್ ಜನರಲ್ ಗೆ ನೀಡುತ್ತದೆ. ರಾಜ್ಯದಿಂದ ನೇಮಕಗೊಂಡ ಮುಖ್ಯ ರಿಜಿಸ್ಟ್ರಾಲ್ ಗಳು, ರಿಜಿಸ್ಟ್ರಾಲ್ ಗಳು ಈ ರಾಷ್ಟ್ರೀಯ ಡೇಟಾಬೇಸ್ ಗೆ ಮಾಹಿತಿ ಒದಗಿಸಬೇಕಾಗುತ್ತದೆ.
  • ಈ ಹಿಂದೆ ಕೆಲವು ವ್ಯಕ್ತಿಗಳು ಜನನ ಮತ್ತು ಮರಣಗಳನ್ನು ರಿಜಿಸ್ಟ್ರಾರ್ ಗೆ ವರದಿ ಮಾಡಬೇಕಿತ್ತು. ಉದಾಹರಣೆಗೆ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಜನನದ ವಿವರಗಳನ್ನು ಕಡ್ಡಾಯವಾಗಿ ವರದಿ ಮಾಡಬೇಕಿತ್ತು. ಅಲ್ಲದೆ ಪಾಲಕರು ಮತ್ತು ಮಾಹಿತಿದಾರರ ಆಧಾರ್ ಸಂಖ್ಯೆ ಒದಗಿಸಬೇಕಾಗಿತ್ತು. ಜೈಲು, ಲಾಡ್ಜ್ ನಲ್ಲಿ ಜನನವಾದ ಸಂದರ್ಭದಲ್ಲೂ ಈ ನಿಯಮ ಅನ್ವಯವಾಗುತ್ತಿತ್ತು.
  • ಹೊಸ ಕಾಯಿದೆ ಕೇಂದ್ರ ಸರಕಾರದ ಅನುಮೋದನೆಗೆ ಒಳಪಟ್ಟ ಜನಸಂಖ್ಯಾ ನೋಂದಣಿ, ಮತದಾರರ ಪಟ್ಟಿ ಮತ್ತು ಇತರ ಅಧಿಕೃತ ಪ್ರಾಧಿಕಾರಗಳೊಂದಿಗೆ ಡೇಟಾಬೇಸ್ ಹಂಚಿಕೊಳ್ಳಲು ಸಾಧ್ಯವಿದೆ.
  • ರಿಜಿಸ್ಟ್ರಾರ್ ಅಥವಾ ಜಿಲ್ಲಾ ರಿಜಿಸ್ಟ್ರಾರ್ ಅವರ ಯಾವುದೇ ಕ್ರಮ ಅಥವಾ ಆದೇಶದಿಂದ ತೊಂದರೆಗೊಳಗಾದ ವ್ಯಕ್ತಿ ಜಿಲ್ಲಾ ರಿಜಿಸ್ಟ್ರಾರ್ ಅಥವಾ ಮುಖ್ಯ ರಿಜಿಸ್ಟ್ರಾರ್ ಗೆ ಮೇಲ್ಮನವಿ ಸಲ್ಲಿಸಬಹುದು.

ಇತ್ತೀಚೆಗೆ ಮುಕ್ತಾಯವಾದ ಮುಂಗಾರು ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳು ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದ್ದವು. ಲೋಕಸಭೆ ಆಗಸ್ಟ್ 1 ಮತ್ತು ರಾಜ್ಯಸಭೆ ಆಗಸ್ಟ್ 7ರಂದು ಈ ಮಸೂದೆಗೆ ಒಪ್ಪಿಗೆ ಸೂಚಿಸಿವೆ.

Related post

Loksabha Results : ಗೆಲುವಿನ ಖಾತೆ ತೆರೆದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ – ಚಾಮರಾಜನಗರ, ಹಾಸನ ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಗೆಲುವು

Loksabha Results : ಗೆಲುವಿನ ಖಾತೆ ತೆರೆದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ –…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣಾ ಮತ ಎಣಿಕೆ ನಡೆಯುತ್ತಿದ್ದು, ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಗೆಲುವಿನ ಖಾತೆ ತೆರೆದಿದೆ. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಅವರು ಒಂದು ಲಕ್ಷಕ್ಕೂ ಅಧಿಕ…
Loksabha Results : ಸರಳ ಬಹುಮತ ಗಳಿಸುವಲ್ಲಿ ಎಡವುತ್ತಾ ಬಿಜೆಪಿ? – ದಕ್ಷಿಣ ಕನ್ನಡ, ಬೆಂ.ಗ್ರಾಮಾಂತರ ಉಡುಪಿಯಲ್ಲಿ ಬಿಜೆಪಿ ಭರ್ಜರಿ ಮುನ್ನಡೆ

Loksabha Results : ಸರಳ ಬಹುಮತ ಗಳಿಸುವಲ್ಲಿ ಎಡವುತ್ತಾ ಬಿಜೆಪಿ? –…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಎಣಿಕೆ ಕಾರ್ಯ ಇನ್ನೂ ಮುಂದುವರಿದಿದ್ದು, ಆಡಳಿತಾರೂಢ ಬಿಜೆಪಿ ಪಕ್ಷ ಸರಳ ಬಹುಮತದ ಕೊರತೆ ಎದುರಿಸುವ ಆತಂಕಕ್ಕೆ ಸಿಲುಕಿದೆ. ಎಲ್ಲಾ ಮತಗಟ್ಟೆ ಸಮೀಕ್ಷೆಗಳನ್ನು…
ದಿನ‌ ಭವಿಷ್ಯ 04-06-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 04-06-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಬಸುರಿಯು ನೆಲದ ಮೇಲೆ ನಡೆದುಕೊಂಡು ಹೋಗುವಾಗ ವಿಶೇಷ ಕಾಳಜಿ ವಹಿಸಬೇಕು. ಇನ್ನೂ ಸಂಬಳ ಪಡೆಯದವರು, ಇಂದು ಅವರು ಹಣಕ್ಕಾಗಿ ತುಂಬಾ ಚಿಂತೆ ಮಾಡಬಹುದು ಮತ್ತು ನಿಮ್ಮ ಸ್ನೇಹಿತರಿಂದ ಸಾಲವನ್ನು…

Leave a Reply

Your email address will not be published. Required fields are marked *