Sooryayan : ಸೂರ್ಯನ ಅಧ್ಯಯನಕ್ಕೆ ಹೊರಟ ಆದಿತ್ಯ ಎಲ್-1 – 4ನೇ ಹಂತದ ಕಕ್ಷೆ ಬದಲಾವಣೆ ಯಶಸ್ವಿ

Sooryayan : ಸೂರ್ಯನ ಅಧ್ಯಯನಕ್ಕೆ ಹೊರಟ ಆದಿತ್ಯ ಎಲ್-1 – 4ನೇ ಹಂತದ ಕಕ್ಷೆ ಬದಲಾವಣೆ ಯಶಸ್ವಿ

ನ್ಯೂಸ್ ಆ್ಯರೋ‌ : ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೇ ಇಸ್ರೋ ಸೂರ್ಯ ಮಿಷನ್ ಅಡಿಯಲ್ಲಿ ಸೂರ್ಯನ ಅಧ್ಯಯನಕ್ಕೆ ಕಳುಹಿಸಿದ ಬಾಹ್ಯಾಕಾಶ ನೌಕೆ ಆದಿತ್ಯ ಎಲ್-1 ತನ್ನ 4ನೇ ಕಕ್ಷೆಯ ಬದಲಾವಣೆಯನ್ನು ಪೂರೈಸಿದೆ. ಈ ಕುರಿತು ಇಸ್ರೋ ಎಕ್ಸ್ (ಟ್ವಿಟರ್)ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಸೂರ್ಯನ ಅಧ್ಯಯನದ ಗುರಿ

ಸೂರ್ಯನನ್ನು ಅಧ್ಯಯನ ಮಾಡಲು ಲಗ್ರೇಂಜ್ ಪಾಯಿಂಟ್ 1(ಎಲ್ 1)ಗೆ ಹೊರಟಿರುವ ಆದಿತ್ಯ ಎಲ್-1 ಸೆಪ್ಟೆಂಬರ್ 19ರ ಮುಂಜಾನೆ 2 ಗಂಟೆ ಸುಮಾರಿಗೆ ನಿರ್ಣಾಯಕ ಟ್ರಾನ್ಸ್-ಲಗ್ರಾಂಜಿಯನ್ ಪಾಯಿಂಟ್ 1 ಅಳವಟಿಕೆಗೆ ಒಳಗಾಗಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಯಾವುದೇ ಗ್ರಹಣ ಅಥವಾ ಅಡೆತಡೆ ಇಲ್ಲದೆ ಸೂರ್ಯನನ್ನು ನೊಡಬಹುದಾದ ಸ್ಥಳಕ್ಕೆ ಲಗ್ರೇಂಜ್ ಪಾಯಿಂಟ್ ಎಂದು ಹೆಸರು. ಹೀಗಾಗಿ ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯನ್ನು ಲಗ್ರೇಂಜ್ ಪಾಯಿಂಟ್ 1ಕ್ಕೆ ಕಳುಹಿಸಲಾಗಿದೆ. ಸೆಪ್ಟಂಬರ್ 2ರಂದು ಇದನ್ನು ಶ್ರೀಹರಿ ಕೋಟಾದಿಂದ ಉಡಾವಣೆ ಮಾಡಲಾಗಿತ್ತು.

ಲಗ್ರೇಂಜ್ ಪಾಯಿಂಟ್ 1 ತಲುಪಲು ಬಾಹ್ಯಾಕಾಶ ನೌಕೆಗೆ ಸುಮಾರು 125 ದಿನ ತಗುಲಲಿದೆ. ಸೌರ ಜ್ವಾಲೆ, ಸೂರ್ಯನಿಂದ ಹೊರ ಹೊಮ್ಮುವ ಕರೋನಲ್ ಮಾಸ್ ಎಜೆಕ್ಷನ್ ಮುಂತಾದ ವಿಷಯಗಳನ್ನು ಅಧ್ಯಯನ ಮಾಡುವುದು ಇಸ್ರೋ ವಿಜ್ಞಾನಿಗಳ ಗುರಿ. ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಯೋಜನೆ ಇದಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *