ಗೋವಿಂದ ಬಾಬು ಪೂಜಾರಿ ವಿರುದ್ಧ ಇಡಿಗೆ ಪತ್ರ ಬರೆದಿದ್ಲು ಚೈತ್ರಾ – ತಾನು ಸೇಫ್ ಆಗಲು ಪೂಜಾರಿಗೇ ಸ್ಕೆಚ್ ಹಾಕಿದ್ದ ನೌಟಂಕಿ ನಾಯಕಿ..!!

ಗೋವಿಂದ ಬಾಬು ಪೂಜಾರಿ ವಿರುದ್ಧ ಇಡಿಗೆ ಪತ್ರ ಬರೆದಿದ್ಲು ಚೈತ್ರಾ – ತಾನು ಸೇಫ್ ಆಗಲು ಪೂಜಾರಿಗೇ ಸ್ಕೆಚ್ ಹಾಕಿದ್ದ ನೌಟಂಕಿ ನಾಯಕಿ..!!

ನ್ಯೂಸ್ ಆ್ಯರೋ : ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಂದ ಐದು ಕೋಟಿ ರೂಪಾಯಿ ಹಣ ಪಡೆದ ಬಳಿಕ ಟಿಕೆಟ್ ಹಂಚಿಕೆಯಾಗದ ಹಿನ್ನೆಲೆಯಲ್ಲಿ ವಂಚಿಸಿದ್ದ ಹಣ ವಾಪಾಸ್ ಕೇಳಿದ್ದ ಗೋವಿಂದ ಬಾಬು ಪೂಜಾರಿ ಅವರಿಗೆ ಖೆಡ್ಡಾ ತೋಡಲು ಚೈತ್ರಾ ಕುಂದಾಪುರ ಮುಂದಾಗಿದ್ದ ವಿಚಾರ ಬಯಲಾಗಿದೆ.

ಗೋವಿಂದ ಬಾಬು ಪೂಜಾರಿ ಅವರು ಹಣ ಮರಳಿ ಕೇಳುವ ಇಲ್ಲವೇ ಪೋಲಿಸ್ ದೂರು ದಾಖಲಿಸುವ ಬಗ್ಗೆ ಮಾತುಕತೆ ಆಡುತ್ತಿದ್ದಾಗಲೇ ಈ‌ ಕಿಲಾಡಿ ಚೈತ್ರಾ ಕುಂದಾಪುರ ಐಟಿ ಮತ್ತು ಜಾರಿ ನಿರ್ದೇಶನಾಲಯಕ್ಕೆ ವಿಸ್ತೃತ ಪತ್ರ ಬರೆದು ತಾನು ಸೇಫ್ ಆಗಬಹುದು ಅಂದುಕೊಂಡಿದ್ದಳು‌.

ಅಕ್ರಮ ಹಣ ವರ್ಗಾವಣೆ ಬಗ್ಗೆ ದೂರು ನೀಡಿದ ಚೈತ್ರಾ ಕುಂದಾಪುರ ಅದರಲ್ಲಿ ಗೋವಿಂದ ಬಾಬು ಪೂಜಾರಿ ಅಕ್ರಮವಾಗಿ 6 ಕೋಟಿ ಹಣ ವರ್ಗಾವಣೆ ಮಾಡಿದ ಆರೋಪ ಹೊರಿಸಿದ್ದಳು.

ಗೋವಿಂದ ಪೂಜಾರಿ ಆಪ್ತನಿಂದ ಮಾಹಿತಿ ಪಡೆದಿದ್ದಾಗಿ ಇಡಿಗೆ ಪತ್ರ ಬರೆದಿದ್ದು, ಚೈತ್ರಾ ಜೊತೆಗೂ ಹಣ ನೀಡಿರುವ ಕುರಿತು ಗೋವಿಂದ ಪೂಜಾರಿ ಚರ್ಚಿಸಿದ್ದಾಗಿ ಉಲ್ಲೇಖಿಸಿದ್ದಳು‌.

ಪತ್ರದಲ್ಲಿ ಚುನಾವಣಾ ಟಿಕೆಟ್ ಗಾಗಿ ಹಣ ವರ್ಗಾಯಿಸಿದ್ದಾಗಿ ಉಲ್ಲೇಖಿಸಿದ್ದು, ಮಂಜುನಾಥ್ ಗೆ 1 ಕೋಟಿ, ಅಭಿನವ ಹಾಲಶ್ರೀ ಗೆ 1.5 ಕೋಟಿ, ವಿಶ್ವನಾಥ್ ಜೀ ಗೆ 3 ಕೋಟಿ ನೀಡಿದ್ದಾಗಿ ಚೈತ್ರಾ ಜೊತೆಗೆ ಗೋವಿಂದ ಬಾಬು ಪೂಜಾರಿ ಚರ್ಚೆ ನಡೆದಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ‌.

ಈ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದ್ದ ಚೈತ್ರಾ, ಬಳಿಕ ಚೈತ್ರಾಳನ್ನೇ ಗೋವಿಂದ ಬಾಬು ಪೂಜಾರಿ 5 ಕೋಟಿ ಸಂಬಂಧ ಪ್ರಶ್ನಿಸಿದಾಗ ಚೈತ್ರಾ ಆ್ಯಂಡ್ ಟೀಂ ಎಚ್ಚೆತ್ತುಕೊಂಡಿತ್ತು.

ಹಾಗಾಗಿ ಇಡಿಗೆ ತಾನೇ ಖುದ್ದು ಅರ್ಜಿ ಸಲ್ಲಿಸಿ 5 ಕೋಟಿ ವ್ಯವಹಾರದ ಕುರಿತು ಇಡಿ ವಿಚಾರಣೆಗೆ ಮನವಿ ಮಾಡಲಾಗಿದೆ. 2022-23 ನೇ ಐಟಿ ರಿಟರ್ನ್ಸ್ ನಲ್ಲಿ ನಮೂದಿಸಲಾಗಿದೆಯೇ ಅನ್ನೋದರ ತನಿಖೆಗೆ ಮನವಿ ಮಾಡಿದ್ದಾಳೆ.

ತನ್ನ ಜೊತೆ ಮಾತನಾಡಿದ ಫೋನ್ ಸಂಭಾಷಣೆಯನ್ನು ಇಡಿಗೆ ಸಲ್ಲಿಸಿದ್ದ ಚೈತ್ರಾ, ಗೋವಿಂದ ಪೂಜಾರಿಯನ್ನೇ ಸಿಕ್ಕಿಸಿ ಹಾಕಲು ಮುಂದಾಗಿದ್ದಳು.

ಇಷ್ಟಾಗುತ್ತಲೇ ಚೈತ್ರಾ ವಿರುದ್ಧ ಗೋವಿಂದ ಬಾಬು ಪೂಜಾರಿ ದೂರು ದಾಖಲಿಸಿದ್ದು, ಪತ್ರದಲ್ಲಿ ತಾನು ಅಮಾಯಕಿಯಂತೆ ನಾಟಕ ಮಾಡಿರುವ ಚೈತ್ರಾ ಬೆಂಗಳೂರಿನ ಖಾಸಗಿ ಕಂಪೆನಿ ಉದ್ಯೋಗಿ ಎಂದು ತನ್ನನ್ನು ತಾನು ಉಲ್ಲೇಖಿಸಿದ್ದಾಳೆ. ಸದ್ಯ ಈ ಬಗ್ಗೆ ಇಡಿ ಏನು ಕ್ರಮ ಕೈಗೊಳ್ಳಲಿದೆ? ಪ್ರಕರಣ ಏನಾಗಲಿದೆಯೋ ಕಾದು‌ ನೋಡಬೇಕಿದೆ.

Related post

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು ರದ್ದು, ಹೊಸ ಟಿಸಿಎಸ್ ನಿಯಮ ಜಾರಿ

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು…

ನ್ಯೂಸ್‌ ಆ್ಯರೋ : ತಿಂಗಳಿಗೊಮ್ಮೆ ಹಣಕಾಸಿನ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆ. ಇದೀಗ ಅಕ್ಟೋಬರ್‌ ತಿಂಗಳು ಪ್ರಾರಂಭಕ್ಕೆ ಕೆಲ ದಿನವಿರುವಾಗಲೇ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ…
ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!! – ಕೋಟ್ಯಾಂತರ ರೂಪಾಯಿ ಒಡೆಯ ಈ ತಾತ ಮಾಡೋದೇನು?

ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!!…

ನ್ಯೂಸ್ ಆ್ಯರೋ : ಎಷ್ಟು ದುಡಿದರೂ ವರ್ಷಕ್ಕೆ 5- 6 ಲಕ್ಷ ಸಂಪಾದಿಸೋದೇ ಕಷ್ಟ ಎನ್ನುವವರ ಮಧ್ಯೆ ಏನೂ ಕೆಲಸವಿಲ್ಲದ ವೃದ್ಧರೊಬ್ಬರು 10 ಕೋಟಿ ರೂ. ಆದಾಯ ಗಳಿಸಿದ್ದಾರೆ.…
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ ಮೇಲೆ ಕಾಳಜಿ ಇರುವವರು ಈ ವರದಿ ಓದಿ..

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ…

ನ್ಯೂಸ್ ಆ್ಯರೋ : ಕರಿಬೇವಿನ ಎಲೆಗಳನ್ನು ಭಾರತೀಯ ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಕರಿಬೇವು ಮುಖ್ಯ. ಕರಿಬೇವಿನ ಎಲೆಗಳು ಯಾವುದೇ ಆಹಾರದ ರುಚಿಯನ್ನು…

Leave a Reply

Your email address will not be published. Required fields are marked *