
ಬಟ್ಟೆ ಧರಿಸುವ ಬಗ್ಗೆ ಅಣಕಿಸಿ ಮಹಿಳಾ ರಾಜಕಾರಣಿಗಳ ಬಗ್ಗೆ ನಾಲಿಗೆ ಹರಿಬಿಟ್ಟ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ – ಖ್ಯಾತ ಪತ್ರಿಕೆಯ ಸಂಪಾದಕರ ಮೇಲೆ ದಾಖಲಾಯ್ತು ಕೇಸ್, ಬಂಧನ ಭೀತಿ..!!
- ಕರ್ನಾಟಕ
- August 24, 2023
- No Comment
- 90
ನ್ಯೂಸ್ ಆ್ಯರೋ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಚರ್ಮದ ಬಣ್ಣದ ಬಗ್ಗೆ ( ಥೇಟ್ ಮುರ್ಮು ಅವತಾರ.!) ಮಾತನಾಡಲು ಹೋಗಿ ಪೇಚಿಗೆ ಸಿಲುಕಿದ್ದ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ ಬಂಧನದ ಭೀತಿ ಎದುರಿಸುತ್ತಿದ್ದಾರೆ.
ಹೌದು.. ಹೆಣ್ಣುಮಕ್ಕಳ ವಸ್ತ್ರಧಾರಣೆಯ ಬಗ್ಗೆ ಸಲಹೆ ನೀಡಲು ಹೋಗಿ ವಿಶ್ವೇಶ್ವರ್ ಭಟ್ ಅವರು ಲೇಖಕಿಯರು ಹಾಗೂ ಸಚಿವೆಯರ ಹೆಸರುಗಳನ್ನು ಎಳೆದು ತಂದಿದ್ದಾರೆ.
ವಿಶ್ವೇಶ್ವರ ಭಟ್ ಸಂಪಾದಕತ್ವದ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾಗುವ ಆಸ್ಕ್ ದಿ ಎಡಿಟರ್ ಅಂಕಣ ವಿಭಾಗದಲ್ಲಿ ಓದುಗರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ.. ಬಟ್ಟೆ ತೊಡೋದು ಹೆಣ್ಣು ಮಕ್ಕಳ ವೈಯಕ್ತಿಕ ಚಾಯ್ಸ್. “ನಿಮ್ಮ ಮಗಳ ವಯಸ್ಸು ಮತ್ತು ಈಗಿನ ಕಾಲದ ಅಭಿರುಚಿಗಳನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಕೆಲವು ಗಂಡಸರಿಗೆ ತಾವು ಟೈಟ್ ಆಗೋದು ಇಷ್ಟ. ಆದರೆ ತಮ್ಮ ಮಗಳ ಡ್ರೆಸ್ ವಿಷಯದಲ್ಲಿ ಟೈಟನ್ನು ಇಷ್ಟಪಡುವುದಿಲ್ಲ” ಎಂದು ಉತ್ತರಿಸಿದ್ದರು.

ಅಲ್ಲದೇ ಹೆಣ್ಣು ಮಕ್ಕಳ ಬಟ್ಟೆ ಆಯ್ಕೆ ಸ್ವಾತಂತ್ರ್ಯದ ಬಗ್ಗೆ ಉತ್ತರಿಸುತ್ತಾ ವಿಶ್ವೇಶ್ವರ್ ಭಟ್, “ಹೆಣ್ಣುಮಕ್ಕಳು ಯಾವ ಡ್ರೆಸ್ಸನ್ನೂ ಬಹಳ ದಿನಗಳ ಕಾಲ ಇಷ್ಟಪಡುವುದಿಲ್ಲ ಅಂದರೆ ಟೈಟ್ ಡ್ರೆಸ್ಸನ್ನು ಯಾವತ್ತೂ ಧರಿಸುವುದಿಲ್ಲ. ಆಗೊಮ್ಮೆ- ಈಗೊಮ್ಮೆ
ಧರಿಸಿದಾಗ, ಮನೆಯಲ್ಲಿ ‘ಸದನ ಸದೃಶ’ ವಾತಾವರಣ ನಿರ್ಮಿಸಬಾರದು. ಕೆಲ ದಿನಗಳ ಬಳಿಕ ಮಗಳಿಗೆ ನೀವು ಅಂಥ ಡ್ರೆಸ್ ಧರಿಸು ಅಂದರೂ ಧರಿಸುವುದಿಲ್ಲ. ಅಷ್ಟಕ್ಕೂ ಆ ವಯಸ್ಸಿನ ಮಕ್ಕಳು ಟೈಟ್ ಡ್ರೆಸ್ ಧರಿಸಿದರೇ ಚೆಂದ. ಇನ್ನು ಲಕ್ಷ್ಮೀ ಹೆಬ್ಬಾಳ‌್ಕರ್, ಸೌಮ್ಯ ರೆಡ್ಡಿ, ಶೋಭಾ ಕರಂದ್ಲಾಜೆ, ಉಚಾ ಕತ್ತೆಮನೆ, ಪ್ರತಿಭಾ ನಂದಕುಮಾರ, ಮೋಟಮ್ಮ, ಮಮತಾ ಬ್ಯಾನರ್ಜಿ ಅಂಥ ಡ್ರೆಸ್ ಧರಿಸಿದರೆ ಬರಿಗಣ್ಣಿನಿಂದ ನೋಡಲು ಸಾಧ್ಯವಾ?” ಎಂದು ವಿಶ್ವೇಶ್ವರ್ ಭಟ್ ಪ್ರಶ್ನಿಸಿದ್ದರು.
ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾನೂನು ವಿಭಾಗದ ಉಪಾಧ್ಯಕ್ಷ ವಕೀಲ ಮಂಜುನಾಥ ನಾಯಕ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ವಿಶ್ವೇಶ್ವರ ಭಟ್ ಆಗಸ್ಟ್ 20 ರಂದು ಮಾಡಿದ್ದ ಫೇಸ್ಟುಕ್ ಪೋಸ್ಟ್ ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ, ಮೋಟಮ್ಮ ಮಮತಾ ಬ್ಯಾನರ್ಜಿಯವರ ಬಗ್ಗೆ ಅವಹೇಳನಕಾರಿ ಹಾಗೂ ಅಸಹ್ಯಕಾರಿ ಪೋಸ್ಟ್ ಮಾಡಿರುವ ಹಿನ್ನಲೆಯಲ್ಲಿ ಈ ಕೇಸ್ ದಾಖಲಾಗಿದೆ. ಮಹಿಳೆಯರ ಬಿಗಿ ಉಡುಪಿನ ಬಗ್ಗೆ ಬರೆದಿದ್ದ ಲೇಖನದಲ್ಲಿ ಅನವಶ್ಯಕವಾಗಿ ಮಹಿಳಾ ನಾಯಕರನ್ನು ಉಲ್ಲೇಖಿಸಿ ಅವರಿಗೆ ಅವಮಾನಿಸಲಾಗಿದೆ ಎಂಬ ಆರೋಪ ಸದ್ಯ ವಿಶ್ವೇಶ್ವರ್ ಭಟ್ ಅವರ ಮೇಲಿದೆ.