
69ನೇ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರ ಪ್ರಕಟ; ಅಲ್ಲು ಅರ್ಜುನ್, ಆಲಿಯಾ ಭಟ್, ಕೃತಿ ಸಸೂನ್ ಅತ್ಯುತ್ತಮರು; ಮಿಂಚಿದ ತೆಲುಗಿನ ಆರ್‌ಆರ್‌ಆರ್; ಕನ್ನಡಕ್ಕೆ ನಾಲ್ಕೇ ಪ್ರಶಸ್ತಿ
- ಮನರಂಜನೆ
- August 24, 2023
- No Comment
- 76
ನ್ಯೂಸ್ ಆ್ಯರೋ : 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇಂದು ಘೋಷಣೆಯಾಗಿದೆ. ಈ ಪೈಕಿ ಕನ್ನಡ ಚಿತ್ರಗಳಿಗೆ ಯಾವುದೇ ಪ್ರಮುಖ ಪ್ರಶಸ್ತಿಗಳು ದೊರೆಯದೆ ನಿರಾಸೆ ಉಂಟಾಗಿದೆ. ಈ ಬಾರಿ ಕನ್ನಡ ಸಿನಿಮಾಗಳು ಸೇರಿ ಒಟ್ಟು 280 ಚಿತ್ರಗಳು ಸ್ಪರ್ಧಾ ಕಣದಲ್ಲಿದ್ದವು.
ಅತ್ಯಧಿಕ ಪ್ರಶಸ್ತಿ ಪಡೆದ ಚಿತ್ರಗಳು

ತೆಲುಗಿನ ಆರ್‌ಆರ್‌ಆರ್, ಹಿಂದಿಯ ಗಂಗೂಬಾಯಿ ಕಾಥಿಯಾವಾಡಿ, ಸರ್ದಾರ್ ಉದ್ದಮ್ ಹೆಚ್ಚಿನ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಈ ಬಾರಿ ಹಿಂದಿ ಮತ್ತು ತೆಲುಗು ಚಿತ್ರಗಳು ಪಾರಮ್ಯ ಮೆರೆದಿವೆ.
ಕನ್ನಡಕ್ಕೆ ಕೇವಲ 4 ಪ್ರಶಸ್ತಿಗಳು

ಕ್ರಿಟಿಕ್ (ಸ್ಪೆಷಲ್ ಮೆನ್ಷನ್)-ಸುಬ್ರಹ್ಮಣ್ಯ ಬಡೂರು, ನಾನ್ ಫೀಚರ್ (ಸ್ಪೆಷಲ್ ಮೆನ್ಷನ್)-ಚಿತ್ರ – ಬಾಳೇ ಬಂಗಾರ, ನಾನ್ ಫೀಚರ್ ಫಿಲ್ಮ್ಸ್ (ಬೆಸ್ಟ್ ಎಕ್ಸ್‌ಪ್ಲೋರೇಷನ್/ಅಡ್ವೆಂಚರ್ ಫಿಲ್ಮ್)ಚಿತ್ರ – ಆಯುಷ್ಮಾನ್ (ಇಂಗ್ಲೀಷ್, ಕನ್ನಡ), ಫೀಚರ್ ಫಿಲ್ಮ್ಸ್ಅ ತ್ಯುತ್ತಮ ಕನ್ನಡ ಸಿನಿಮಾ – 777 ಚಾರ್ಲಿ.
ಪ್ರಶಸ್ತಿಗಳ ಪಟ್ಟಿ
- ಅತ್ಯುತ್ತಮ ಚಲನಚಿತ್ರ: ರಾಕೆಟ್ರಿ; ದಿ ನಂಬಿ ಎಫೆಕ್ಟ್
- ಅತ್ಯುತ್ತಮ ನಟ: ಅಲ್ಲು ಅರ್ಜುನ್, ಪುಷ್ಪ
- ಅತ್ಯುತ್ತಮ ನಟಿ: ಆಲಿಯಾ ಭಟ್ (ಗಂಗೂಬಾಯಿ ಕಾಥಿಯಾವಾಡಿ) ಕೃತಿ ಸನೂನ್ (ಮಿಮಿ)
- ಅತ್ಯುತ್ತಮ ನಿರ್ದೇಶಕ: ನಿಖಿಲ್ ಮಹಾಜನ್, ಗೋದಾವರಿ (ಮರಾಠಿ)
- ಅತ್ಯುತ್ತಮ ಜನಪ್ರಿಯ ಚಲನಚಿತ್ರ: ಆರ್‌ಆರ್‌ಆರ್
- ನರ್ಗಿಸ್ ದತ್ ಪ್ರಶಸ್ತಿ: ದ ಕಾಶ್ಮೀರ್ ಫೈಲ್ಸ್ (ಅತ್ಯುತ್ತಮ ಚಲನಚಿತ್ರಕ್ಕಾಗಿ)
- ಅತ್ಯುತ್ತಮ ಪೋಷಕ ನಟ: ಪಂಕಜ್ ತ್ರಿಪಾಠಿ (ಮಿಮಿ)
- ಅತ್ಯುತ್ತಮ ಪೋಷಕ ನಟಿ: ಪಲ್ಲವಿ ಜೋಶಿ (ಕಾಶ್ಮೀರ್ ಫೈಲ್ಸ್)
- ಅತ್ಯುತ್ತಮ ಚಿತ್ರಕಥೆ: ನಾಯಟ್ಟು (ಮಲಯಾಳಂ)
- ಅತ್ಯುತ್ತಮ ಚಿತ್ರಕಥೆ: ಗಂಗೂಬಾಯಿ ಕಾಥಿಯಾವಾಡಿ (ಹಿಂದಿ)
- ಅತ್ಯುತ್ತಮ ಸಂಗೀತ ನಿರ್ದೇಶನ: ಪುಷ್ಪ (ತೆಲುಗು)
- ಅತ್ಯುತ್ತಮ ಹಿನ್ನೆಲೆ ಸಂಗೀತ ನಿರ್ದೇಶನ: ಎಂ.ಎಂ.ಕೀರವಾಣಿ (ಆರ್‌ಆರ್‌ಆರ್)
- ಅತ್ಯುತ್ತಮ ಗಾಯಕ: ಆರ್‌ಆರ್‌ಆರ್ (ಕಾಲ ಭೈರವ)
- ಅತ್ಯುತ್ತಮ ಗಾಯಕಿ: ಇರೈವನ್ ನಿಝಾಲ್ (ಶ್ರೇಯಾ ಘೋಷಾಲ್)
- ಅತ್ಯುತ್ತಮ ಸಾಹಿತ್ಯ: ಚಂದ್ರಭೋಸ್ (ಕೊಂಡ ಪೊಲಂ)
- ಅತ್ಯುತ್ತಮ ನೃತ್ಯ ಸಂಯೋಜನೆ: ಪ್ರೇಮ್ ರಕ್ಷಿತ್ (ಆರ್‌ಆರ್‌ಆರ್)
- ಅತ್ಯುತ್ತಮ ಛಾಯಾಗ್ರಹಣ: ಸರ್ದಾರ್ ಉದ್ಧಮ್ (ಮುಖ್ಯೋಫಾಧ್ಯಾಯ)
- ಅತ್ಯುತ್ತಮ ವಸ್ತ್ರ ವಿನ್ಯಾಸ: ವೀರ ಕಪೂರ್ (ಸರ್ದಾರ್ ಉಧಮ್)
- ಅತ್ಯುತ್ತಮ ನಿರ್ಮಾಣ ವಿನ್ಯಾಸ: ಸರ್ದಾರ್ ಉಧಮ್
- ಅತ್ಯುತ್ತಮ ಸಂಕಲನ: ಗಂಗೂಬಾಯಿ ಕಾಥಿಯಾವಾಡಿ
- ಅತ್ಯುತ್ತಮ ಮೇಕಪ್: ಗಂಗೂಬಾಯಿ ಕಾಥಿಯಾವಾಡಿ
- ಅತ್ಯುತ್ತಮ ಸಾಹಸ ನೃತ್ಯ ಸಂಯೋಜನೆ: ಆರ್‌ಆರ್‌ಆರ್
- ಅತ್ಯುತ್ತಮ ಹಿಂದಿ ಚಿತ್ರ: ಸರ್ದಾರ್ ಉಧಮ್