
ಪ್ರೇಮಿಗಳ ಬೆಡ್ ರೂಂ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ ಮೇಲ್ – ಮಂಗಳೂರು ಶೆಟ್ಟಿ ಲಂಚ್ ಹೋಂ ನ ಪಾರ್ಟ್ನರ್ಸ್ ಬಂಧನ..!!
- ಕರ್ನಾಟಕ
- September 15, 2023
- No Comment
- 90
ನ್ಯೂಸ್ ಆ್ಯರೋ : ಪ್ರೇಮಿಗಳ ಖಾಸಗಿ ವಿಡಿಯೊ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಿದ ಜೋಡಿಯನ್ನು ಬಂಧಿಸಲಾಗಿದೆ. ಎಂಬಿಎ ಪದವೀಧರೆ ವಿದ್ಯಾರ್ಥಿನಿಯೊಬ್ಬರಿಗೆ ಇವರೇ ರೂಮ್ ನೀಡಿ ಬ್ಲಾಕ್‌ಮೇಲ್ ಮಾಡಿರುವುದು ಪತ್ತೆಯಾಗಿದೆ.
ನಯನಾ ಹಾಗೂ ಕಿರಣ್ ಬಂಧಿತರು. ಇವರಿಬ್ಬರೂ ಕೆಂಚನಾಪುರದಲ್ಲಿ ಶೆಟ್ಟಿ ಲಂಚ್ ಹೋಮ್ ಎಂಬ ಹೋಟೆಲ್ ನಡೆಸುತ್ತಿದ್ದರು.
ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಶೆಟ್ಟಿ ಲಂಚ್ ಹೋಮ್ ಹೋಟೆಲ್ ನಲ್ಲಿ ಪ್ರೇಮಿಗಳಿಗೆ ರೂಮ್ ನೀಡಲಾಗಿತ್ತು. ಆದ್ರೆ, ರೂಮ್ನಲ್ಲಿ ರಹಸ್ಯವಾಗಿ ಕ್ಯಾಮೆರಾ ಅಡಗಿಸಿ ಇಟ್ಟಿದ್ದರು. ಬಳಿಕ ನಯನಾ ಹಾಗೂ ಪಾರ್ಟರ್ ಕಿರಣ್ ಎನ್ನುವರು ಯುವತಿಗೆ ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಪೀಡಿಸುತ್ತಿದ್ದರು.
ಒಂದು ಲಕ್ಷ ಹಣಕ್ಕೆ ನೀಡಬೇಕು. ಹಣ ಕೊಡದಿದ್ರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡ್ತೀನಿ. ನಿಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕಳುಹಿಸುತ್ತೇನೆ ಎಂದು ಕಿರಣ್ ಬೆದರಿಕೆ ಹಾಕಿದ್ದ.
ನಯನಾ ಹಾಗೂ ಕಿರಣ್ ಜೊತೆಯಾಗಿ ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಕೆಂಚನಾಪುರದಲ್ಲಿ ಶೆಟ್ಟಿ ಲಂಚ್ ಹೋಮ್ ಹೋಟೆಲ್ ಆರಂಭಿಸಿದ್ದರು. ಅದೇ ಹೋಟೆಲ್ಗೆ ನಯನಾ ಸಂಬಂಧಿ ಯುವತಿ(ಬ್ಲ್ಯಾಕ್ ಮೇಲ್ ಪ್ರಕರಣದ ಸಂತ್ರಸ್ಥೆ) ಆಗಾಗ ತನ್ನ ಪ್ರಿಯಕರ ಜೊತೆ ಬರುತ್ತಿದ್ದಳು.
ಈ ವೇಳೆ ಹೋಟೆಲ್ ರೂಮ್ ನಲ್ಲಿ ಇರುವಂತೆ ಹೇಳಿದ್ದ ನಯನಾ, ಬಳಿಕ ಇಬ್ಬರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಳು. ನಂತರ ಅವರೇ ರೂಮ್ ಕೊಟ್ಟು ಅವರೆ ಬೀಸಿದ್ದು, ಅಶ್ಲೀಲವಾಗಿ ಎಡಿಟ್ ಮಾಡಿ ಯುವತಿಗೆ ಆರೋಪಿ ಕಿರಣ್, ವಾಟ್ಸಪ್ ಮಾಡಿ ಒಂದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕೋದಾಗಿ ಬೆದರಿಸುತ್ತಿದ್ದ.
ಇದರಿಂದ ಯುವತಿ ಹೆದರಿಕೊಂಡು ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಇದೀಗ ಈ ದೂರಿನ ಆಧಾರ ಮೇಲೆ ಪೊಲೀಸರು ನಯನಾ ಹಾಗೂ ಕಿರಣ್ನನ್ನು ಬಂಧಿಸಿದ್ದಾರೆ. ಅಲ್ಲದೇ ಮೊಬೈಲ್ ವಶಕ್ಕೆ ಪಡೆದು ಯುವತಿಯ ವಿಡಿಯೋ ಡಿಲೀಟ್ ಮಾಡಿದ್ದಾರೆ.