WTC FINAL 2023 : ಗಾಯಗೊಂಡ ಕೆ.ಎಲ್. ರಾಹುಲ್ ಹೊರಕ್ಕೆ – ಯುವ ಆಟಗಾರನಿಗೆ ಸ್ಥಾನ ನೀಡಿದ ಬಿಸಿಸಿಐ

WTC FINAL 2023 : ಗಾಯಗೊಂಡ ಕೆ.ಎಲ್. ರಾಹುಲ್ ಹೊರಕ್ಕೆ – ಯುವ ಆಟಗಾರನಿಗೆ ಸ್ಥಾನ ನೀಡಿದ ಬಿಸಿಸಿಐ

ನ್ಯೂಸ್ ಆ್ಯರೋ‌ : ಇತ್ತೀಚೆಗೆ ನಡೆದ ಐಪಿಎಲ್ ಪಂದ್ಯದ ವೇಳೆ ಗಾಯಗೊಂಡ ಕನ್ನಡಿಗ ಕೆ.ಎಲ್. ರಾಹುಲ್ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಿಂದ ಹೊರಬಿದ್ದಿದ್ದಾರೆ. ಇದೀಗ ಬಿಸಿಸಿಐ ಬದಲಿ ಆಟಗಾರನನ್ನು ನೇಮಿಸಿದ್ದು, ಇಶಾನ್ ಕಿಶನ್ ಅವರನ್ನು ಫೈನಲ್ ಪಂದ್ಯಕ್ಕೆ ಆಯ್ಕೆ ಮಾಡಲಾಗಿದೆ.

ಮೇ 1ರಂದು ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಕೆ.ಎಲ್. ರಾಹುಲ್ ಅವರ ಬಲ ತೊಡೆಯ ಭಾಗಕ್ಕೆ ಗಾಯವಾಗಿತ್ತು. ರಾಹುಲ್ ಅವರಿಗೆ ಆದಷ್ಟು ಬೇಗ ಶಸ್ತ್ರಚಿಕಿತ್ಸೆಗೆ ಒಳಗಾಗಲು ತಜ್ಞರು ಸೂಚಿಸಿದ್ದಾರೆ.

ರಾಹುಲ್ ಅವರಿಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಮುಂದಿನ ಐಪಿಎಲ್ ಪಂದ್ಯಗಳು ಮತ್ತು ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ನಿಂದ ಹೊರಗುಳಿದಿದ್ದಾರೆ.

ಕಾಡಿದ ಗಾಯದ ಸಮಸ್ಯೆ
ಫೈನಲ್ ಪಂದ್ಯಕ್ಕೆ ಆಯ್ಕೆಯಾಗಿದ್ದ ಉಮೇಶ್ ಯಾದವ್ ಮತ್ತು ಜಯದೇವ್ ಉನಾದ್ಕಟ್ ಕೂಡ ಗಾಯಗೊಂಡಿದ್ದು, ಅವರು ಪಾಲ್ಗೊಳ್ಳುವ ಬಗ್ಗೆ ಅಂತಿಮ ನಿರ್ಧಾರ ಮುಂದಿನ ದಿನಗಳಲ್ಲಿ ಹೊರ ಬೀಳಲಿದೆ.

ವಿಶ್ವಕಪ್ ಫೈನಲ್ ಗೆ ಭಾರತ ತಂಡ ಹೀಗಿದೆ..
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್.ಭರತ್(ವಿ.ಕೀ), ಇಶಾನ್ ಕಿಶನ್ (ವಿ.ಕೀ.) ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *