ಡೀಸೆಲ್ ಚಾಲಿತ ಚತುಶ್ಚಕ್ರ ವಾಹನಗಳ ಮಾಲಕರಿಗೆ ಶಾಕ್; 2027ರ ವೇಳೆಗೆ ಬಳಕೆ ನಿಷೇಧ?

ಡೀಸೆಲ್ ಚಾಲಿತ ಚತುಶ್ಚಕ್ರ ವಾಹನಗಳ ಮಾಲಕರಿಗೆ ಶಾಕ್; 2027ರ ವೇಳೆಗೆ ಬಳಕೆ ನಿಷೇಧ?

ನ್ಯೂಸ್ ಆ್ಯರೋ‌ : ನೀವು ಡೀಸೆಲ್ ಚಾಲಿತ ನಾಲ್ಕು ಚಕ್ರ ವಾಹನ ಹೊಂದಿದ್ದೀರ? ಹಾಗಾದರೆ ಗಮನಿಸಿ. 2027ರ ವೇಳೆಗೆ ಡೀಸೆಲ್ ಚಾಲಿತ ಚತುಶ್ಚಕ್ರ ವಾಹನಗಳ ಬಳಕೆಯನ್ನು ನಿಷೇಧಿಸಬೇಕು ಎಂದು ತೈಲ ಸಚಿವಾಲಯದ ಸಮಿತಿ ಶಿಫಾರಸ್ಸು ಮಾಡಿದೆ.

ಅನಿಲ ಹೊರಸೂಸುವಿಕೆಯನ್ನು ನಿಲ್ಲಿಸುವ ಸಲುವಾಗಿ ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಮಾಲಿನ್ಯಪೀಡಿತ ಪಟ್ಟಣಗಳಲ್ಲಿ ವಿದ್ಯುತ್ ಮತ್ತು ಗ್ಯಾಸ್ ಚಾಲಿತ ವಾಹನಗಳನ್ನು ಬಳಸಬೇಕು ಎಂದು ಸಮಿತಿ ಸಲಹೆ ನೀಡಿದೆ. 2030ರ ವೇಳೆಗೆ ಎಲೆಕ್ಟ್ರಿಕ್ ಅಲ್ಲದ ಯಾವುದೇ ಹೊಸ ಸಿಟಿ ಬಸ್​ಗಳನ್ನು ಸೇರಿಸಬಾರದು. 2024ರಿಂದ ನಗರ ಸಾರಿಗೆಗೆ ಡೀಸೆಲ್ ಬಸ್​ಗಳನ್ನು ಸೇರಿಸಬಾರದು ಎಂದು ಸಮಿತಿಯು ವರದಿಯಲ್ಲಿ ಆಗ್ರಹಿಸಿದೆ.

ಭಾರತದಲ್ಲಿ ಸಂಸ್ಕರಿಸಿದ ಇಂಧನ ಬಳಕೆಯಲ್ಲಿ ಡಿಸೇಲ್​ನ್ನು ಐದನೇ ಎರಡರಷ್ಟು ಬಳಸಲಾಗುತ್ತದೆ. ಅದರಲ್ಲಿ ಶೇ. 80ರಷ್ಟು ಪ್ರಮಾಣವನ್ನು ಸಾರಿಗೆ ವಲಯದಲ್ಲಿ ಬಳಸಲಾಗುತ್ತದೆ. 2024ರಿಂದ ನಗರಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಹೊಸ ನೋಂದಣಿಗಳಿಗೆ ಅನುಮತಿ ನೀಡಬೇಕು. ಸರಕು ಸಾಗಣೆಗೆ ರೈಲು ಮತ್ತು ಅನಿಲ ಚಾಲಿತ ಟ್ರಕ್​ಗಳನ್ನು ಹೆಚ್ಚೆಚ್ಚು ಬಳಸಬೇಕು ಎಂದು ಸಮಿತಿ ಸಲಹೆ ನೀಡಿದೆ.

ಎರಡರಿಂದ ಮೂರು ವರ್ಷಗಳಲ್ಲಿ ರೈಲ್ವೆ ಜಾಲ ಸಂಪೂರ್ಣ ವಿದ್ಯುದೀಕರಣಗೊಳ್ಳುವ ನಿರೀಕ್ಷೆಯಿದೆ. ದೀರ್ಘ ಪ್ರಯಾಣಕ್ಕೂ ವಿದ್ಯುಚ್ಛಕ್ತಿಯಿಂದ ಚಲಿಸಲ್ಪಡುವ ಬಸ್​ಗಳನ್ನು ಬಳಸಲು ಮುಂದಾಗಬೇಕು. 2020 ಮತ್ತು 2050ರ ನಡುವೆ ಅನಿಲ (ಗ್ಯಾಸ್) ಬೇಡಿಕೆ ಶೇ. 9.78 ಬೆಳವಣಿಗೆಯಾಗುವ ನಿರೀಕ್ಷೆಯಿರುವುದರಿಂದ ಭೂಮಿಯಡಿಯಲ್ಲಿ ಅನಿಲ ಸಂಗ್ರಹಗಾರಗಳನ್ನು ನಿರ್ವಿುಸಲು ಭಾರತ ಮುಂದಾಗಬೇಕು. ಇದಕ್ಕಾಗಿ ಖಾಲಿ ಬಿದ್ದಿರುವ ತೈಲ ಮತ್ತು ಗ್ಯಾಸ್ ಫೀಲ್ಡ್​ಗಳನ್ನು ಬಳಸಿಕೊಳ್ಳಬಹುದು ಎಂದು ಹೇಳಿದೆ.

ಇಂಧನ ಇಲಾಖೆ ಮಾಜಿ ಕಾರ್ಯದರ್ಶಿ ತರುಣ್ ಕಪೂರ್ ನೇತೃತ್ವದ ಇಂಧನ ಪರಿವರ್ತನಾ ಸಲಹಾ ಸಮಿತಿಯ ಈ ಶಿಫಾರಸುಗಳನ್ನು ಜಾರಿಗೆ ತರಲು ಪೆಟ್ರೋಲಿಯಂ ಸಚಿವಾಲಯ ಕೇಂದ್ರ ಕ್ಯಾಬಿನೆಟ್ ಅನುಮೋದನೆಯನ್ನು ಪಡೆಯುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *