
ಸೆಮಿಫೈನಲ್ ನಲ್ಲಿ ಭಾರತ ಸೋಲುವುದು ಗ್ಯಾರಂಟಿ – ಅಪಶಕುನದ ಮಾತಿಗೆ ಪಾಕ್ ಮಾಜಿ ನಾಯಕ ಕೊಟ್ಟ ಕಾರಣ ಏನ್ ಗೊತ್ತಾ?
- ಕ್ರೀಡಾ ಸುದ್ದಿ
- November 8, 2023
- No Comment
- 158
ನ್ಯೂಸ್ ಆ್ಯರೋ : ಸತತ ಗೆಲುವಿನೊಂದಿಗೆ ಗೆಲುವಿನ ನಾಗಾಲೋಟ ಮುಂದುವರೆಸಿರುವ ಟೀಂ ಇಂಡಿಯಾ ಈ ಬಾರಿಯ ವಿಶ್ವಕಪ್ ಗೆಲ್ಲುವ ತವಕದಲ್ಲಿದೆ. ನ.5ರಂದು ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧದ 243 ರನ್ ಗಳ ಜಯ ದಾಖಲಿಸಿದ ರೋಹಿತ್ ಪಡೆ ಅಗ್ರಸ್ಥಾನ ಅಲಂಕರಿಸಿದ್ದು, ನ. 15ರಂದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ತಂಡವನ್ನು ಎದುರಿಸುವುದರೊಂದಿಗೆ ಟೀಂ ಇಂಡಿಯಾ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಆಡಲಿದೆ.
ಆದರೆ ಇದೇ ವೇಳೆ ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಟೀಂ ಇಂಡಿಯಾದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದು, ಭಾರತ ಸೆಮಿಫೈನಲ್ ನಲ್ಲಿ ಸೋಲುವುದು ಗ್ಯಾರಂಟಿ ಎಂದಿದ್ದಾನೆ. ಇದಕ್ಕೆ ಕೆಲವೊಂದು ಕಾರಣಗಳನ್ನು ಕೂಡ ಪಾಕ್ ನಾಯಕ ನೀಡಿದ್ದು, ಈ ಬಗೆಗಿನ ಡೀಟೈಲ್ಸ್ ಇಲ್ಲಿದೆ.
ಮಿಸ್ಬಾ ಉಲ್‌ಹಕ್ ಹೇಳಿದ್ದೇನು?
ಪಾಕ್ ತಂಡದ ಆಟಗಾರ ಶೋಯೆಬ್ ಮಲಿಕ್ ಅವರೊಂದಿಗೆ ಕುಳಿತು ಎ ಸ್ಪೋರ್ಟ್ಸ್ ನಲ್ಲಿ ಮಾತನಾಡಿದ್ದ ಮಿಸ್ಬಾ ಉಲ್ ಹಕ್, ‘ ಸೆಮಿಫೈನಲ್ ನಲ್ಲಿ ಹೀನಾಯವಾಗಿ ಸೋಲುವುದರೊಂದಿಗೆ ತವರಿನಲ್ಲಿ ವಿಶ್ವಕಪ್ ಗೆಲ್ಲುವ ಟೀಂ ಇಂಡಿಯಾದ ಕನಸು ಭಗ್ನಗೊಳ್ಳಲಿದೆ. ಲೀಗ್ ಹಂತದ ಯಾವುದೇ ಸೋಲು ತಂಡದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಸೆಮಿಫೈನಲ್ ಪ್ರವೇಶಿಸುವ ಪ್ರತಿಯೊಂದು ತಂಡವೂ ಕೂಡ ಪ್ರಬಲ ಪೈಪೋಟಿ ನೀಡಲಿದೆ. ಮತ್ತೊಂದೆಡೆ ಒತ್ತಡವೂ ಹೆಚ್ಚಲಿದೆ. ಈ ಕಾರಣಗಳಿಂದ ಟೀಂ ಇಂಡಿಯಾ ಸೋಲುವುದು ಗ್ಯಾರಂಟಿ’ ಎಂದು ಮಿಸ್ಬ ಉಲ್ ಹಕ್ ಭವಿಷ್ಯ ನುಡಿದಿದ್ದಾರೆ.
ಭಾರತದ ಸೋಲು ಖಚಿತ..!
ಮಾತು ಮುಂದುವರೆಸಿದ ಮಿಸ್ಬಾ ಉಲ್ ಹಕ್, ಭಾರತ ತಂಡವನ್ನು ಸೋಲಿಸುವುದು ಸುಲಭ. ಭಾರತದ ವಿರುದ್ಧ ಎದುರಾಳಿ ತಂಡ ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದರೆ ಭಾರತ ಒತ್ತಡಕ್ಕೆ ಒಳಗಾಗಿ ಸೋಲುತ್ತದೆ. ಸೆಮಿಫೈನಲ್ ನಲ್ಲೂ ಇದೇ ರೀತಿ ಆಗುತ್ತದೆ ಮತ್ತು ರೋಹಿತ್ ಪಡೆ ಸೋಲುವುದು ಖಚಿತ ಎಂದು ಮಿಸ್ಬಾ ಎಚ್ಚರಿಸಿದ್ದಾರೆ. ಮಿಸ್ಬಾ ಮಾತಿಗೆ ಧ್ವನಿಗೂಡಿಸಿದ ಶೋಯೆಬ್ ಮಲಿಕ್, ‘ಟೀಂ ಇಂಡಿಯಾವನ್ನು ಮಣಿಸಬೇಕಿದ್ದರೆ ಮಾನಸಿಕವಾಗಿ ಬಲಿಷ್ಠರಾಗಬೇಕು. ರೋಹಿತ್ ಪಡೆ ಎದರಾಳಿ ತಂಡವನ್ನು ಒತ್ತಡಕ್ಕೆ ಸಿಲುಕಿಸಿಯೇ ಗೆದ್ದಿದೆ’ ಎಂದಿದ್ದಾರೆ.
ಭಾರತದ ಗೆಲುವಿನ ನಾಗಾಲೋಟ..!
ಟೀಂ ಇಂಡಿಯಾ ಈ ಬಾರಿಯ ವಿಶ್ವಕಪ್‌ನಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡುತ್ತಿದೆ. ಒಂದೇ ಒಂದು ಪಂದ್ಯಾಟವನ್ನು ಸೋಲದ ರೋಹಿತ್ ಪಡೆ ತಮ್ಮ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದ್ದು, ವಿಶ್ವಕಪ್‌ಗೆ ಮುತ್ತಿಕ್ಕಲು ಇನ್ನೊಂದೇ ಹೆಜ್ಜೆ ಬಾಕಿ ಇದೆ. 1970 ರಿಂದ ಇಲ್ಲಿಯ ವರೆಗೆ ಭಾರತ ಕೇವಲ ಎರಡು ಬಾರಿಯಷ್ಟೇ ವಿಶ್ವಕಪ್ ಗೆದ್ದಿದೆ. ಈ ಬಾರಿ ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸಿರುವ ಕಾರಣ ಗೆಲ್ಲುವ ಫೇವರಿಟ್ ತಂಡ ಎನಿಸಿಕೊಂಡಿದೆ.