
Honeytrap : ಫೇಸ್‌ಬುಕ್ ಬೆಡಗಿಯ ಪ್ರೀತಿಯಲ್ಲಿ ಯಾಮಾರಿದ ಯೋಧ ಆತ್ಮಹತ್ಯೆ – ಲಕ್ಷಾಂತರ ಲೂಟಿ ಮಾಡಿದಾಕೆ ವಿರುದ್ಧ ಪತ್ನಿಯಿಂದ ಎಫ್ಐಆರ್..!!
- ಕ್ರೈಂ ಸುದ್ದಿ
- November 8, 2023
- No Comment
- 1081
ನ್ಯೂಸ್ ಆ್ಯರೋ : ಪ್ರೀತಿ ಎನ್ನುವುದು ಒಂದು ರೀತಿಯ ನಶೆ. ಒಮ್ಮೆ ಇದರ ಪಾಶದಲ್ಲಿ ಹೊರಬರುವುದು ಅಷ್ಟು ಸುಲಭವಲ್ಲ. ಹೀಗಾಗಿ ಎಷ್ಟೋ ಮಂದಿಯ ಬದುಕು ದುರಂತದಲ್ಲಿ ಕೊನೆಯಾಗುತ್ತದೆ. ಅಪರೂಪ ಎಂಬಂತೆ ಕೆಲವರಿಗಷ್ಟೇ ತಾವು ಪ್ರೀತಿಸಿದವರೊಂದಿಗೆ ಸುಖಿ ಜೀವನ ನಡೆಸುವ ಅವಕಾಶ ದೊರೆಯುತ್ತದೆ.

ಇನ್ನು ಪ್ರೀತಿಯ ಹೆಸರಿನಲ್ಲಿ ಮೋಸ ಮಾಡುವವರಿಗೇನು ಕಮ್ಮಿ ಇಲ್ಲ. ಇಂತಹ ಮೋಸದ ಜಾಲಕ್ಕೆ ಸಿಲುಕಿದವರು ಸಾಕಷ್ಟು ಮಂದಿ ಇದ್ದಾರೆ.
ಆತ ದೇಶದ ಗಡಿ ಕಾಯುತ್ತಿದ್ದ ವೀರ ಯೋಧ. ಉಗ್ರರಿಗೂ ಬಗ್ಗಿದವನಲ್ಲ. ಆದರೆ ಪ್ರೀತಿಯ ಬಲೆಗೆ ಬಿದ್ದು ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.
ಫೇಸ್‌ಬುಕ್‌ನಲ್ಲಿ ಪರಿಚಯವಾದ ಜೀವಿತಾ ಎನ್ನುವ ಯುವತಿಯ ಪ್ರೀತಿಯ ಬಲೆಯಲ್ಲಿ ಬಿದ್ದು ಮೃತಪಟ್ಟ ಸೈನಿಕ ಕೊಡಗಿನ ಸಂದೇಶ್.

ಮದುವೆಯಾಗಿದ್ದ ಸಂದೇಶ್ ನನ್ನ ಪ್ರೀತಿಯ ಬಲೆಗೆ ಬೀಳಿಸಿಕೊಂಡ ಜೀವಿತಾ ಆತನೊಂದಿಗೆ ಹಲವಾರು ಕಡೆಗಳಲ್ಲಿ ಸುತ್ತಾಡಿ, ತಮ್ಮಿಬ್ಬರ ಕೆಲವು ಖಾಸಗಿ ಫೋಟೋ, ವಿಡಿಯೋಗಳನ್ನು ಮಾಡಿಕೊಂಡಿದ್ದಳು.
ಬಳಿಕ ವರಸೆ ಬದಲಿಸಿದ ಜೀವಿತಾ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಆತನಿಗೆ ಫೋಟೋ, ವಿಡಿಯೋಗಳನ್ನು ತೋರಿಸಿ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಿ ಹಂತ ಹಂತವಾಗಿ ಬರೋಬ್ಬರಿ 20 ಲಕ್ಷ ರೂ. ಹಣ, ಯೋಧನ ಬಳಿಯಿದ್ದ ಕಾರು, ಆಸ್ತಿಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾಳೆ. ಇಷ್ಟು ಸಾಲದು ಎಂದುಕೊಂಡು ಯೋಧನಿಗೆ ಏಕಾಏಕಿ 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಪರಿಣಾಮ ಯೋಧ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಾಯುವುದಕ್ಕೂ ಮೊದಲು ಪತ್ನಿ ಯಶೋಧಳಿಗೆ ಎಲ್ಲವನ್ನೂ ಸಂದೇಶ್ ತಿಳಿಸಿದ್ದ. ಹೀಗಾಗಿ ಯೋಧನ ಪತ್ನಿ ಯಶೋಧ ಪೊಲೀಸ್ ಠಾಣೆಯಲ್ಲಿ ಜೀವಿತಾ ವಿರುದ್ಧ ದೂರು ನೀಡಿದ್ದಾಳೆ.