‘ಟೈಮ್ಡ್ ಔಟ್’ ಕ್ರಿಕೆಟ್‌ನಲ್ಲಿ ಇದೇ ಮೊದಲಲ್ಲ – ಸಂಧಿವಾತದಿಂದ ಬಳಲಿದ್ದ, ಪಟ್ಟಾಂಗ ಹೊಡೆದಿದ್ದ ಬ್ಯಾಟರ್ ಗೆ ಔಟ್ ಕೊಟ್ಟಿದ್ದರು ಅಂಪೈರ್..!

‘ಟೈಮ್ಡ್ ಔಟ್’ ಕ್ರಿಕೆಟ್‌ನಲ್ಲಿ ಇದೇ ಮೊದಲಲ್ಲ – ಸಂಧಿವಾತದಿಂದ ಬಳಲಿದ್ದ, ಪಟ್ಟಾಂಗ ಹೊಡೆದಿದ್ದ ಬ್ಯಾಟರ್ ಗೆ ಔಟ್ ಕೊಟ್ಟಿದ್ದರು ಅಂಪೈರ್..!

ನ್ಯೂಸ್ ಆ್ಯರೋ : ಐಸಿಸಿ ಏಕದಿನ ವಿಶ್ವಕಪ್ ನ ಬಾಂಗ್ಲಾ ಮತ್ತು ಶ್ರೀಲಂಕಾ ನಡುವಿನ ಪಂದ್ಯದ ವೇಳೆ ವಿಚಿತ್ರ ಘಟನೆಯೊಂದಕ್ಕೆ ಮೈದಾನ ಸಾಕ್ಷಿಯಾಗಿತ್ತು. ಶ್ರೀಲಂಕಾದ ಹಿರಿಯ ಆಲ್ ರೌಂಡರ್ ಏಂಜಲೋ ಮ್ಯಾಥ್ಯೂಸ್ ಅವರು ಟೈಮ್ ಔಟ್ ಆಗಿ ಒಂದೂ ಎಸೆತ ಎದುರಿಸದೆ ಪೆವಿಲಿಯನ್ ಗೆ ಮರಳಬೇಕಾಯಿತು. ಕ್ರಿಕೆಟ್ ನಿಯಮದ ಹೊರತಾಗಿ ಅಲ್ಲದಿದ್ದರೂ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಘಟನೆ ನಡೆಯಿತು. ಈ ಘಟನೆಯ ಬಳಿಕ ‘ಟೈಮ್ಡ್ ಔಟ್’ ನಿಯಮದ ಬಗ್ಗೆ ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಚರ್ವೆಯಾಗುತ್ತಿದೆ. ಟೈಮ್ಡ್ ಔಟ್ ನಿಯಮ ಹಾಗೂ ಇತಿಹಾಸದ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಏನಿದು ಟೈಮ್ಡ್ ಔಟ್ ಕಾನೂನು!

ಐಸಿಸಿಯ 40.1.1 ನಿಯಮದ ಅನ್ವಯ ಪಂದ್ಯವೊಂದರಲ್ಲಿ ಬ್ಯಾಟರ್ ಒಬ್ಬ ಔಟಾದ ಅಥವಾ ನಿವೃತ್ತರಾದ ಬಳಿಕ 2 ನಿಮಿಷದೊಳಗೆ ಮತ್ತೊಬ್ಬ ಬ್ಯಾಟರ್ ಕ್ರೀಸ್‌ಗೆ ಆಗಮಿಸಬೇಕು. ಆದರೆ ಒಂದು ವೇಳೆ ಹೊಸ ಬ್ಯಾಟರ್ ತಡ ಮಾಡಿದರೆ, ಅವರನ್ನು ‘ಟೈಮ್ಸ್ ಔಟ್’ ಫೀಲ್ಡ್ ಮೂಲಕ ಔಟ್ ಮಾಡಬಹುದಾಗಿದೆ. 1980 ರ ಕೋಡ್‌ ನಲ್ಲಿ ಔಟ್ ವಿಧಾನವಾಗಿ ಟೈಮ್ಡ್ ಔಟ್ ಅನ್ನು ಕಾನೂನುಗಳಿಗೆ ಸೇರಿಸಲಾಯಿತು. 2000 ರ ಕೋಡ್‌ನಲ್ಲಿ ಇದನ್ನು ಮೂರು ನಿಮಿಷಗಳಿಗೆ ಪರಿಷ್ಕರಿಸಲಾಯಿತು. ಆದರೂ ಈ ವಿಶ್ವಕಪ್‌ ನಲ್ಲಿ ಆಟದ ಪರಿಸ್ಥಿತಿಗಳು ಒಳಬರುವ ಬ್ಯಾಟ್ಸ್‌ಮನ್‌ ಗೆ ಕೇವಲ ಎರಡು ನಿಮಿಷಗಳನ್ನು ನೀಡುತ್ತದೆ. 1775ರ ಕ್ರಿಕೆಟ್‌ ನ ಮೊದಲ ಮುದ್ರಿತ ನಿಯಮಗಳಲ್ಲಿ ಅಂಪೈರ್‌ಗಳು “ಒಬ್ಬ ವ್ಯಕ್ತಿಯು ಔಟಾಗುವಾಗ ಎರಡು ನಿಮಿಷಗಳು ಒಳಗೆ ಬರಲು” ಅವಕಾಶ ನೀಡಾಯ್ತು.

ಹರಟೆಯಲ್ಲಿ ತೊಡಗಿದ್ದ ಬ್ಯಾಟರ್ ಔಟ್!

ಎಂಜಲೋ ಮ್ಯಾಥ್ಯೂಸ್‌ ಅವರಿಗಿಂತಲೂ ಮುನ್ನ ಭಾರತೀಯ ಬ್ಯಾಟರ್ ಒಬ್ಬ ಟೈಮ್ಡ್ ಔಟ್ ನಿಯಮಕ್ಕೆ ಬಲಿಯಾಗಿದ್ದರು. ತ್ರಿಪುರಾದ ಹೇಮುಲಾಲ್ ಯಾದವ್ ಅವರು ವಿಚಿತ್ರ ಕಾರಣಕ್ಕೆ ಔಟ್ ಆಗಿದ್ದರು. ಹೇಮುಲಾಲ್ ಅವರು ಅಂದು ಬೌಂಡರಿ ಲೈನ್ ಹೊರಗೆ ಮಾತನಾಡುತ್ತಾ ನಿಂತಿದ್ದರು ಎಂದು ಔಟ್ ನೀಡಲಾಗಿತ್ತು. ಒಡಿಶಾ ವಿರುದ್ಧದ ಪಂದ್ಯದಲ್ಲಿ ತ್ರಿಪುರಾದ ಒಂಬತ್ತು ವಿಕೆಟ್ ಬಿದ್ದಾಗ ಹೇಮುಲಾಲ್ ಯಾದವ್ ಬೌಂಡರಿ ಹೊರಗೆ ನಿಂತಿದ್ದರು. ಈ ವೇಳೆಗೆ ಅಂಪೈರ್ ಗಳು ಡ್ರಿಂಕ್ಸ್ ಗೆ ಕರೆದರು. ಹೀಗಾಗಿ ಯಾದವ್ ತಂಡದ ಮ್ಯಾನೇಜರ್ ಜತೆಗೆ ಮಾತನಾಡುತ್ತಾ ಬೌಂಡರಿಯಾಚೆಯೇ ನಿಂತಿದ್ದರು. ಅದೇನು ಗಹನವಾದ ಚರ್ಚೆಯಿತ್ತು ಗೊತ್ತಿಲ್ಲ, ಆದರೆ ಒಡಿಶಾ ಆಟಗಾರರು ಔಟ್ ಮನವಿ ಮಾಡಿದರು. ಅಂಪೈರ್ ಗಳು ಹೇಮುಲಾಲ್ ಯಾದವ್ ಅವರನ್ನು ಟೈಮ್ಡ್ ಔಟ್ ಎಂದು ತೀರ್ಪು ನೀಡಿದ್ದ‌ರು‌.

1919ರಲ್ಲಿ ನಡೆಸಿತ್ತು ಟೈಮ್ಡ್ ಔಟ್..!

1919ರಲ್ಲಿ ಸಸೆಕ್ಸ್ ತಂಡ ಕೇವಲ 10 ಆಟಗಾರರೊಂದಿಗೆ ಮೈದಾನಕ್ಕೆ ಇಳಿದಿತ್ತು. ಇದೇ ವೇಳೆ ತಂಡದ ಮಾಜಿ ಆಟಗಾರ ಹೆರಾಲ್ಡ್ ಹೇಗೇಟ್ ಅವರನ್ನು ಆಡುವಂತೆ ಕೇಳಿಕೊಳ್ಳಲಾಯ್ತು. ಆದರೆ ಸಂಧಿವಾತದಿಂದ ಬಳಲುತಿದ್ದ ಹೇಗೇಟ್ ಹಿಂಜರಿಕೆಯಿಂದಲೇ ತಂಡ ಸೇರಿಕೊಂಡರು. ಎರಡನೇ ಇನ್ನಿಂಗ್ಸ್‌ ನಲ್ಲಿ ಸಸೆಕ್ಸ್‌ನ ಒಂಬತ್ತನೇ ವಿಕೆಟ್ ಪತನವಾದಾಗ, ಸ್ಕೋರ್‌ಗಳು ಸಮವಾಗಿದ್ದವು. ಈ ಕ್ಷಣದ ಮಹತ್ವವನ್ನು ಅರಿತುಕೊಂಡ ಹೇಗೇಟ್ ಬ್ಯಾಟಿಂಗ್‌ ಗೆ ಹೊರಡಲು ಆರಂಭಿಸಿದರು. ಎರಡನೇ ದಿನದಲ್ಲಿ ನೀಲಿ ಸರ್ಜ್ ಸೂಟ್‌ ತೊಟ್ಟು ಪೆವಿಲಿಯನ್‌ ನಲ್ಲಿ ಕುಳಿತಿದ್ದ ಹೇಗೇಟ್, ತಂಡಕ್ಕಾಗಿ ಮೈದಾನಕ್ಕೆ ಹೋಗಲು ಬಹಳ ಪ್ರಯತ್ನವನ್ನು ಮಾಡಿದರೆಂದು ಡೇವಿಡ್ ಫೂಟ್ ತನ್ನ ಪುಸ್ತಕ ‘ಸನ್‌ಶೈನ್, ಸಿಕ್ಸ್ ಮತ್ತು ಸೈಡರ್’ ನಲ್ಲಿ ವಿವರಿಸುತ್ತಾರೆ. ಆದರೆ ಸಮಯ ಕಳೆಯುತ್ತಲೇ ಇತ್ತು. ಎದುರಾಳಿ ಸೋಮರ್‌ಸೆಟ್ ಆಟಗಾರರು ಮನವಿ ಮಾಡಿದಾಗ, ಹೇಗೇಟ್ ಅವರನ್ನು ಅಂಪೈರ್ ಔಟ್ ಎಂದು ಘೋಷಿಸಲಾಯ್ತು.

ತಡವಾಗಿ ಬಂದ ವಿಮಾನ ಬ್ಯಾಟರ್ ಔಟ್..!

2002ರಲ್ಲೂ ಇಂತಹದ್ದೆ ಒಂದು ವಿಚಿತ್ರ ಟೈಮ್ಡ್ ಔಟ್ ಪ್ರಕರಣಕ್ಕೆ ಕ್ರಿಕೆಟ್ ಸಾಕ್ಷಿಯಾಗಿತ್ತು. ವೆಸ್ಟ್ ಇಂಡೀಸ್ ತಂಡದ ವೆಸ್ಬರ್ಟ್ ಡ್ರೇಕ್ಸ್ ಅವರು ದಕ್ಷಿಣ ಆಫ್ರಿಕಾದಲ್ಲಿ ದೇಶಿಯ ಕ್ರಿಕೆಟ್ ಆಡುತ್ತಿದ್ದರು. ಫ್ರೀ ಸ್ಟೇಟ್ ವಿರುದ್ಧದ ಪಂದ್ಯದಲ್ಲಿ ಅವರು ಬಾರ್ಡರ್ ತಂಡಕ್ಕೆ ಆಡುತ್ತಿದ್ದರು. ಆದರೆ ಈ ಸಮಯದಲ್ಲಿ ಅವರು ದಕ್ಷಿಣ ಆಫ್ರಿಕಾದಲ್ಲಿ ಇರದ ಕಾರಣ ಟೈಮ್ಡ್ ಔಟ್ ಗೆ ಬಲಿಯಾಗಿದ್ದರು. ಅದಕ್ಕೂ ಮೊದಲು ಶ್ರೀಲಂಕಾದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ವೆಸ್ಟ್ ಇಂಡೀಸ್ ಪರ ಆಡುತ್ತಿದ್ದ ಅವರು ಸಮಯಕ್ಕೆ ಸರಿಯಾಗಿ ದಕ್ಷಿಣ ಆಫ್ರಿಕಾಕ್ಕೆ ಬರಬಹುದೆಂದು ಭಾವಿಸಿದ್ದರು. ಆದರೆ ಅವರ ವಿಮಾನವು ತಡವಾಗಿ ಆಗಮಿಸಿದ ಕಾರಣ ಅಂಪೈರ್ ಗಳು ಔಟ್ ಎಂದು ಘೋಷಿಸಿದರು.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *