ಟೀಮ್ ಇಂಡಿಯಾ ಜೆರ್ಸಿಯಲ್ಲಿ ಇನ್ನು ಮುಂದೆ ಡ್ರೀಮ್ 11 ಲೋಗೋ – ಎಷ್ಟು ಕೋಟಿ ಮೊತ್ತದ ಒಪ್ಪಂದ ಗೊತ್ತಾ?

ಟೀಮ್ ಇಂಡಿಯಾ ಜೆರ್ಸಿಯಲ್ಲಿ ಇನ್ನು ಮುಂದೆ ಡ್ರೀಮ್ 11 ಲೋಗೋ – ಎಷ್ಟು ಕೋಟಿ ಮೊತ್ತದ ಒಪ್ಪಂದ ಗೊತ್ತಾ?

ನ್ಯೂಸ್ ಆ್ಯರೋ‌ : ಭಾರತ ಕ್ರಿಕೆಟ್ ತಂಡದ ಆಟಗಾರರ ಜೆರ್ಸಿ ಮೇಲೆ ಇನ್ನು ಮುಂದೆ ಬೈಜೂಸ್ ಬದಲು ಡ್ರೀಮ್ 11 ಲೋಗೋ (Dream 11 Logo On Indian cricket team jersey) ಕಂಡು ಬರಲಿದೆ. ಸುಮಾರು 358 ಕೋಟಿ ರೂ.ಗೆ ಈ ಕುರಿತು ಒಪ್ಪಂದ ಏರ್ಪಟ್ಟಿದೆ.

ಎರಡು ವಾರಗಳ ಬಳಿಕ ಸಿಕ್ಕ ಪ್ರಾಯೋಜಕರು
ಬಿಸಿಸಿಐ ಹೊಸ ಜೆರ್ಸಿ ಪ್ರಾಯೋಜಕರನ್ನು ಹುಡುಕುತ್ತಿದೆ ಎಂದು ಪ್ರಕಟಣೆ ಹೊರಡಿಸಿದ ಸುಮಾರು ಎರಡು ವಾರಗಳ ಬಳಿಕ ಈ ಒಪ್ಪಂದ ಕುದುರಿದೆ. ಕೆಲವು ಸಮಸ್ಯೆಗಳ ಹಿನ್ನಲೆಯಲ್ಲಿ ಹಿಂದಿನ ಬೈಜೂಸ್ ಕಂಪೆನಿ ಜೊತೆಗಿನ ಒಪ್ಪಂದ ದಿಢೀರ್ ಮುರಿದು ಬಿದ್ದಿತ್ತು. ಸದ್ಯ ಒಪ್ಪಂದ ಕುರಿತು ಅಧಿಕೃತ ಘೋಷಣೆ ಬಾಕಿ ಇದೆ.

ಜೂ. 15ರಂದು ಬಿಸಿಸಿಐ ಟೀಮ್ ಇಂಡಿಯಾ ಜೆರ್ಸಿ ಪ್ರಾಯೋಜಕತ್ವಕ್ಕಾಗಿ ಅರ್ಜಿ ಆಹ್ವಾನಿಸಿತ್ತು. ಐಸಿಸಿ ವಿಶ್ವಕಪ್ ಮತ್ತು ಏಷ್ಯಾ ಕಪ್ ಪಂದ್ಯಾವಳಿಗಳಿಗೂ ಸೇರಿ ಈ ಅರ್ಜಿ ಆಹ್ವಾನಿಸಲಾಗಿತ್ತು. ಕೆಲವು ಬ್ರ್ಯಾಂಡ್‍ಗಳನ್ನು ಹರಾಜು ಪ್ರಕ್ರಿಯೆಗಳಿಂದ ಹೊರಗಿಡಲಾಗಿತ್ತು.

ಆಲ್ಕೋಹಾಲ್ ಉತ್ಪನ್ನಗಳು, ಬೆಟ್ಟಿಂಗ್ ಕಂಪೆನಿಗಳು, ಕ್ರಿಪ್ಟೋ ಕರೆನ್ಸಿ ಘಟಕಗಳು, ರಿಯಲ್ ಮನಿ ಗೇಮಿಂಗ್ ಫ್ಲಾಟ್ ಫಾರ್ಮ್, ತಂಬಾಕು ಉತ್ಪನ್ನಗಳು, ಅಶ್ಲೀಲತೆಯನ್ನು ಪ್ರಚೋದಿಸುವಂತಹ ಉತ್ಪನ್ನಗಳ ಜಾಹೀರಾತುಗಳನ್ನು ನಿಷೇಧಿಸಲಾಗಿತ್ತು.

ಈಗಾಗಲೇ ಕಿಟ್ ಪ್ರಾಯೋಜಕತ್ವವನ್ನು ಅಡಿಡಾಸ್ ಕಂಪೆನಿ ಸುಮಾರು 300 ಕೋಟಿ ರೂ.ಗೆ ವಹಿಸಿಕೊಂಡಿದ್ದರಿಂದ ಕ್ರೀಡಾ ಉತ್ಪನ್ನ ತಯಾರಿಕಾ ಕಂಪೆನಿಗಳನ್ನೂ ಹರಾಜು ಪ್ರಕ್ರಿಯೆಗೆ ಪರಿಗಣಿಸಿರಲಿಲ್ಲ. ಜೊತೆಗೆ ಮಾಸ್ಟರ್ ಕಾರ್ಡ್ ನ ಒಪ್ಪಂದವೂ ಮುಕ್ತಾಯವಾಗಿರುವುದರಿಂದ ಟೈಟಲ್ ಪ್ರಾಯೋಜಕರನ್ನೂ ಹುಡುಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *