
ನ್ಯೂಜಿಲೆಂಡ್ ಸ್ಟಾರ್ ಪ್ಲೇಯರ್ ರಚಿನ್ ರವೀಂದ್ರ ದೃಷ್ಟಿ ತೆಗೆದ ಅಜ್ಜಿ – ವೈರಲ್ ಆಯ್ತು ಅಜ್ಜಿ ಮೊಮ್ಮಗನ ಮುದ್ದು ವಿಡಿಯೋ..!
- ಕ್ರೀಡಾ ಸುದ್ದಿ
- November 10, 2023
- No Comment
- 85
ನ್ಯೂಸ್ ಆ್ಯರೋ : ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಈ ಬಾರಿಯ ವಿಶ್ವಕಪ್‌ನಲ್ಲಿ ಕರ್ನಾಟಕ ಮೂಲದ ನ್ಯೂಜಿಲೆಂಡ್ ಆಟಗಾರ ರಚಿನ್ ರವೀಂದ್ರ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಸ್ಸು ಗೆದ್ದಿದ್ದಾರೆ. ನಿನ್ನೆ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯಾದ ಬಳಿಕ ಬೆಂಗಳೂರಿನಲ್ಲಿರುವ ತಮ್ಮ ಅಜ್ಜಿಯ ಮನೆಗೆ ಭೇಟಿ ನೀಡಿರುವ ರಚಿನ್ ತಮ್ಮ ಅಜ್ಜಿಯಿಂದ ದೃಷ್ಟಿ ತೆಗೆಸಿಕೊಂಡು ಖುಷಿ ಪಟ್ಟಿದ್ದಾರೆ.
ಈ ವಿಡಿಯೋ ಸದ್ಯ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕರ್ನಾಟಕವನ್ನು ಇಷ್ಟಪಡುವ ರಚಿನ್!
ರಚಿನ್ ರವೀಂದ್ರ ಸದ್ಯ, ನ್ಯೂಜಿಲೆಂಡ್ ಆಟಗಾರನಾಗಿದ್ದರೂ ಕೂಡ ಮೂಲತಃ ಅವರು ಕರ್ನಾಟಕದವರು. ಸಮಯ ಸಿಕ್ಕಾಗೆಲ್ಲ ಬೆಂಗಳೂರಿನಲ್ಲಿರುವ ತಮ್ಮ ಅಜ್ಜಿಯ ಮನೆಗೆ ಬರುವ ರಚಿನ್ ಬೆಂಗಳೂರು ಹಾಗೂ ಉಡುಪಿ ಮೂಲದ ಆಹಾರವನ್ನು ಹೆಚ್ಚು ಇಷ್ಟ ಪಡುತ್ತಾರಂತೆ..!!
ಸದ್ಯ, ಬೆಂಗಳೂರಿನಲ್ಲೇ ಪಂದ್ಯ ಇದ್ದ ಕಾರಣ ಬಿಡುವಿನ ವೇಳೆ ತಮ್ಮ ಅಜ್ಜಿ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ರಚಿನ್ ಅವರ ಅಜ್ಜಿ ತಮ್ಮ ಮೊಮ್ಮಗನಿಗೆ ಯಾರ ದೃಷ್ಟಿಯೂ ತಾಗದಿರಲಿ ಎಂಬ ಉದ್ದೇಶದಿಂದ ದೃಷ್ಟಿ ತೆಗೆದಿದ್ದಾರೆ.ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
‘ರಚಿನ್’ ಹೆಸರಿನ ಹಿನ್ನಲೆ ಗೊತ್ತಾ?
ರಚಿನ್ ಎಂದಾಗ ಒಂದು ಕ್ಷಣ ಕ್ರಿಕೆಟ್ ದೇವರು ಸಚಿನ್ ಹೆಸರು ಸುಳಿದಂತಾಗುತ್ತದೆ. ಅಸಲಿಗೆ ರಚಿನ್ ಅನ್ನುವ ಹೆಸರಿನ ಹಿಂದೆ ಒಂದು ಹಿನ್ನಲೆ ಇದೆ. 1999ರಲ್ಲಿ ರಚಿನ್ ಜನಿಸಿದರು. ಬೆಂಗಳೂರಿಗರೇ ಆದ ಇವರ ತಂದೆಗೆ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಎಂದರೆ ಎಲ್ಲಿಲ್ಲದ ಪ್ರೀತಿ, ಅಭಿಮಾನ. ಅದೇ ಕಾರಣಕ್ಕೆ ತಮ್ಮ ಮಗನಿಗೆ ರಾಹುಲ್ ಹೆಸರಿಂದ ರಾ’ ಮತ್ತು ಸಚಿನ್ ಹೆಸರಿಂದ
ಚಿನ್’ ತೆಗೆದುಕೊಂಡು ರಚಿನ್ ಎಂದು ನಾಮಕರಣ ಮಾಡಿದ್ದಾರೆ. ರಚಿನ್ ಕೂಡ ತಮ್ಮ ಹೆಸರಿಗೆ ತಕ್ಕಂತೆ ವಿಶ್ವಕಪ್‌ನಲ್ಲಿ ಅದ್ದೂರಿ ಪ್ರದರ್ಶನ ನೀಡಿದ್ದಾರೆ.
ಸಚಿನ್ ದಾಖಲೆ ಮುರಿದ ರಚಿನ್!
ತಮ್ಮ ಹೆಸರಿಗೆ ತಕ್ಕಂತೆ ಈ ಬಾರಿಯ ವಿಶ್ವಕಪ್‌ನಲ್ಲಿ ಪ್ರದರ್ಶನ ನೀಡುತ್ತಿರುವ ರಚಿನ್ ಈ ಆವೃತ್ತಿಯಲ್ಲಿ ಒಟ್ಟು ಮೂರು ಶತಕ ಬಾರಿಸಿ ಕ್ರಿಕೆಟ್ ದಂತಕತೆ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕ ಆಟಗಾರರ ದಾಖಲೆಯನ್ನು ಮುರಿದಿದ್ದಾರೆ. ಸದ್ಯ 565 ರನ್ ಗಳಿಸಿರುವ ಅವರು ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇಷ್ಟೆಲ್ಲಾ ದಾಖಲೆ ಬರೆದಿರುವ ರಚಿನ್ ಅವರಿಗೆ ಇದು ಮೊಟ್ಟ ಮೊದಲ ವಿಶ್ವಕಪ್ ಟೂರ್ನಿ ಅನ್ನುವುದೇ ಗಮನಾರ್ಹ ಸಂಗತಿ.