ವಿಶ್ವದ ಅತ್ಯಂತ ದುಬಾರಿ ಕೋಳಿಯ ಬಗ್ಗೆ ನೀವು ಕೇಳಿದ್ದೀರಾ? – ಈ ಕೋಳಿಯ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತೀರಾ..!!

ವಿಶ್ವದ ಅತ್ಯಂತ ದುಬಾರಿ ಕೋಳಿಯ ಬಗ್ಗೆ ನೀವು ಕೇಳಿದ್ದೀರಾ? – ಈ ಕೋಳಿಯ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತೀರಾ..!!

ನ್ಯೂಸ್ ಆ್ಯರೋ : ನೀವು ದುಬಾರಿ ಬೆಲೆಯ ವಾಹನಗಳನ್ನು, ಆಭರಣಗಳನ್ನು, ಪ್ರಾಣಿಗಳನ್ನೆಲ್ಲ ಕಂಡಿರಬಹುದು. ಆದರೆ ಲಕ್ಷಾಂತರ ಬೆಲೆಯ ಕೋಳಿಯನ್ನು ಎಂದಾದರೂ ಕಂಡಿದ್ದೀರಾ? ಇದು ಆಶ್ಚರ್ಯ ಎನಿಸಿದರೂ ಸತ್ಯ ಸಂಗತಿ.

ಇಂಡೊನೇಷ್ಯದ ಜಾವಾ ಮೂಲದ ‘ಅಯ್ಯಂ ಸೆಮಾನಿ’ ಎಂಬ ಕೋಳಿಯ ಬೆಲೆ ಬರೋಬ್ಬರಿ 2 ಲಕ್ಷದ 8 ಸಾವಿರ ರೂಪಾಯಿ. ಈ‌ ಕೋಳಿಯ ಬೆಲೆ ಇಷ್ಟೊಂದು ದುಬಾರಿ ಯಾಕೆ? ಈ ಕೋಳಿಯಲ್ಲಿ ಅಂತಹದ್ದೇನಿದೆ? ಎಂಬೆಲ್ಲ ಪ್ರಶ್ನೆಗಳು ನಿಮ್ಮಲ್ಲಿದ್ರೆ ಈ ವರದಿ ಓದಿ.

ಅಂತಹದ್ದೇನಿದೆ ಈ ಕೋಳಿಯಲ್ಲಿ?

ಅಯ್ಯಂ ಸೆಮಾನಿ ಎಂಬ ಈ ಕೋಳಿಯಲ್ಲಿ ಫೈಬ್ರೋಮೆಲಸೋಸಿಸ್ ಕಾರಣದಿಂದ ಕಪ್ಪು ವರ್ಣದ್ರವ್ಯಗಳು ರೂಪುಗೊಳ್ಳುತ್ತವೆ. ಇದೊಂದು ಅಪರೂಪದ ಸ್ಥಿತಿಯಾಗಿದ್ದು, ಈ ಕಾರಣದಿಂದ ಕೋಳಿಯ ಗರಿ, ಚರ್ಮ, ಮಾಂಸ ಮತ್ತು ಮೂಳೆಗಳು ಕೂಡ ಕಪ್ಪಾಗಿರುತ್ತದೆ. ಇದೇ ಕಾರಣದಿಂದ ಈ ಕೋಳಿಗಳನ್ನು ‘ಲಾಂಬೋರ್ಗಿನಿ ಚಿಕನ್’ ಎಂದು ಕರೆಯುತ್ತಾರೆ. ಹೆಚ್ಚು ಧಾನ್ಯಗಳನ್ನು ತಿನ್ನುವ ಈ ಕೋಳಿಗಳಲ್ಲಿ ಹೆಚ್ಚಿನ ಪ್ರೋಟಿನ್ ಅಂಶ ಇರುತ್ತದೆ.

ಆರೋಗ್ಯಕ್ಕೆ ಬೆಸ್ಟ್ ಅಯ್ಯಂ ಸೆಮಾನಿ ಕೋಳಿ!

ಆರೋಗ್ಯಕ್ಕೆ ಇದು ಅತ್ಯುತ್ತಮ ಎನಿಸಿಕೊಂಡಿರುವುದೇ ಈ ಕೋಳಿಯ ಬೆಲೆ ದುಬಾರಿಯಾಗಲು ಪ್ರಮುಖ ಕಾರಣ. ತಿನ್ನಲು ರುಚಿಯಾಗಿರುವ ಈ ಕೋಳಿಯ ಮಾಂಸದಲ್ಲಿ ಹೆಚ್ಚು ಪ್ರೋಟೀನ್‌ ಮತ್ತು ಕಡಿಮೆ ಕೊಬ್ಬಿನಾಂಶ ಇರುತ್ತದೆ. ದೇಹದ ಪ್ರೋಟಿನ್ ಅಂಶ ಹೆಚ್ಚಿಸಲು ಬಯಸುವ ಜನರಿಗೆ ಈ ಕೋಳಿಯ ಮಾಂಸ ಸೇವನೆ ಒಳ್ಳೆಯದು.

ಇದಿಷ್ಟೇ ಅಲ್ಲದೇ ಈ ಕೋಳಿಯ ಮೊಟ್ಟೆಯೂ ಕೂಡ ಪೌಷ್ಟಿಕಾಂಶದ ಕಣಜವಾಗಿದೆ. ಈ ಎಲ್ಲಾ ಕಾರಣಗಳಿಂದ ಅಯ್ಯಂ ಸೆಮಾನಿ ಕೋಳಿಯು ಜಗತ್ತಿನ ಅತ್ಯಂತ ದುಬಾರಿ ಕೋಳಿ ಎನಿಸಿಕೊಂಡಿದೆ.

ಜಗತ್ತಿನ ಇತರೆ ದುಬಾರಿ ಕೋಳಿಗಳು ಯಾವುವು?

ಅಯ್ಯಂ ಸೆಮಾನಿಯ ನಂತರ ಇನ್ನಷ್ಟು ದುಬಾರಿ ಕೋಳಿಗಳು ಜಗತ್ತಿನಲ್ಲಿವೆ ಅವುಗಳೆಂದರೆ.
ಡಾಂಗ್ ಟಾವೋ ($2000), ಡೆತ್ ಲೆಯರ್ ($250), ಲೀಸ್ ಫೈಟರ್ ($150), ಓಸ್ರ್ ($100), ಒಲ್ಯಾಂಡ್ಸ್ ಕುಬ್ಜ ($100), ಸ್ವೀಡಿಷ್ ಬ್ಲಾಕ್ ($100), ಸೆರೆಮಾ ($100), ಬ್ರೆಸ್ಸೆ ($70) ಮತ್ತು ಬ್ರಹ್ಮ ($30) ಇಷ್ಟು ಬೆಲೆಯ ದುಬಾರಿ ಕೋಳಿಗಳು ಜಗತ್ತಿನಲ್ಲಿವೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *