ಐಪಿಎಲ್ ಮುಗಿದರೂ ನಿಂತಿಲ್ಲ ಧೋನಿ ಹವಾ – ಅಭಿಮಾನಿಯ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ‘ತಲಾ’ ಫೋಟೋ

ಐಪಿಎಲ್ ಮುಗಿದರೂ ನಿಂತಿಲ್ಲ ಧೋನಿ ಹವಾ – ಅಭಿಮಾನಿಯ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ‘ತಲಾ’ ಫೋಟೋ

ನ್ಯೂಸ್ ಆ್ಯರೋ‌ : ಈ ಸಲದ ಐಪಿಎಲ್ ಹಬ್ಬಕ್ಕೆ ತೆರೆ ಬಿದ್ದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದನೇ ಬಾರಿ ಚಾಂಪಿಯನ್ ಎನಿಸಿಕೊಂಡಿದೆ. ಈ ಬಾರಿ ಸಿಎಸ್‍ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೆ ತಮ್ಮ ಆಟದಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಐಪಿಎಲ್ ಟೂರ್ನಿ ಮುಗಿದು ಸುಮಾರು ಒಂದು ವಾರ ಕಳೆದಿದ್ದು, ಈ ವಿಚಾರ ಮತ್ತೆ ಮುನ್ನಲೆಗೆ ಬರಲು ಕಾರಣವೊಂದಿದೆ. ಅಭಿಮಾನಿಯೊಬ್ಬರು ತಮ್ಮ ಮದುವೆ ಕಾಗದದಲ್ಲಿ ಧೋನಿ ಚಿತ್ರವನ್ನು ಮುದ್ರಿಸಿದ್ದು ವೈರಲ್ ಆಗಿದೆ.

ಛತ್ತೀಸ್ ಗಢದ ಧೋನಿ ಅಭಿಮಾನಿ ದೀಪಕ್ ಜೂ. 7ರಂದು ಗರಿಮಾ ಎಂಬವರ ಜೊತೆ ಹಸೆಮಣೆಗೇರಲಿದ್ದು, ಆಮಂತ್ರಣ ಪತ್ರಿಕೆಯಲ್ಲಿ ಧೋನಿ ಮುಖದ ಚಿತ್ರ ಮುದ್ರಿಸಿ ಅವರ ಜೆರ್ಸಿ ನಂಬರ್ 7 ಎಂದು ಬರೆದಿದ್ದಾರೆ. ಅಲ್ಲದೆ ಸಿಎಸ್‍ಕೆ ಅಭಿಮಾನಿಗಳು ಧೋನಿಯನ್ನು ಪ್ರೀತಿಯಿಂದ ಕರೆಯುವ ತಲಾ ಎಂಬುದನ್ನೂ ಚಿತ್ರದ ಕೆಳಗೆ ಉಲ್ಲೇಖಿಸಿದ್ದಾರೆ.

ಮೇಯಲ್ಲಿ ಇನ್ನೊಬ್ಬ ಅಭಿಮಾನಿ ಚಿಪಾಕ್ ಕ್ರೀಡಾಂಗಣದ ಮಾದರಿಯನ್ನು ಧೋನಿಗೆ ಉಡುಗೊರೆಯಾಗಿ ನೀಡಿದ್ದ. ಆತನೊಂದಿಗೆ ಧೋನಿ ಮಾತನಾಡುತ್ತಿರುವ ದೃಶ್ಯವನ್ನು @instamsdhoni.fc. ಇನ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. ಮಾಡೆಲ್ ಗೆ ಅಳವಡಿಸಿರುವ ದೀಪಗಳನ್ನು ಧೋನಿ ಬೆರಗುಗಣ್ಣಿನಿಂದ ನೋಡುವ ದೃಶ್ಯ ಈ ವೀಡಿಯೋದಲ್ಲಿ ಸೆರೆಯಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *