ಉದ್ಯೋಗಗಳನ್ನ ಆಹ್ವಾನಿಸಿದ ಸ್ಪೋರ್ಟ್ಸ್​ ಅಥಾರಿಟಿ ಆಫ್ ಇಂಡಿಯಾ; ಅರ್ಜಿ ಸಲ್ಲಿಕೆ ಮಾಡುವುದು ಹೇಗೆ, ಇಲ್ಲಿದೆ ಮಾಹಿತಿ

sports-authority-of-india-recruitment
Spread the love

ನ್ಯೂಸ್ ಆ್ಯರೋ: ಸ್ಪೋರ್ಟ್ಸ್​​ ಇಲಾಖೆಯಲ್ಲಿ ಉದ್ಯೋಗ ಬಯಸುವ ಆಕಾಂಕ್ಷಿಗಳಿಗೆ ಶುಭಸುದ್ದಿ ಒಲಿದು ಬಂದಿದೆ. ನಿಮಗೆ ಆಸಕ್ತಿ ಇದ್ದರೇ ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ. ಒಂದು ವೇಳೆ ಈ ಕೆಲಸಗಳಿಗೆ ನಿಮ್ಮ ಹೆಸರು ಅಂತಿಮವಾದರೆ, ಸಂಬಳ 1 ಲಕ್ಷ ರೂಪಾಯಿಗಿಂತ ಅಧಿಕವಿರುತ್ತದೆ. ಹೀಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ.

ಸ್ಪೋರ್ಟ್ಸ್​ ಅಥಾರಿಟಿ ಆಫ್ ಇಂಡಿಯಾ (ಎಸ್​ಎಐ) ಇಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಸಂಬಂಧ ಅರ್ಹ ಹಾಗೂ ಆಸಕ್ತಿ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಈ ಕೆಲಸಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಹೆಚ್ಚಿನ ಕಾರ್ಯಕ್ಷಮತೆಯ ನಿರ್ದೇಶಕ ಹಾಗೂ ಕಂಡೀಷನಿಂಗ್ ಎಕ್ಸ್‌ಪರ್ಟ್ ಹುದ್ದೆಗಳನ್ನು ಆಹ್ವಾನ ಮಾಡಲಾಗಿದೆ.

ಅರ್ಜಿ ಸಲ್ಲಿಕೆ ಮಾಡಿದ ಅಭ್ಯರ್ಥಿಗಳ ಹೆಸರನ್ನು ಮೊದಲು ಶಾರ್ಟ್​ ಲಿಸ್ಟ್ ಮಾಡಲಾಗುತ್ತದೆ. ಬಳಿಕ ಅಧಿಕೃತವಾಗಿ ನೋಟಿಫಿಕೆಶನ್ ಮೂಲಕ ಆಯ್ಕೆ ಆದ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಸಂದರ್ಶನದಲ್ಲಿ ನೀಡುವ ಪರ್ಫಾಮೆನ್ಸ್ ಆಧಾರದ ಮೇಲೆ ಈ ಹುದ್ದೆ ನೀಡಲಾಗುತ್ತದೆ. ಈ ಕೆಲಸಗಳು ಒಟ್ಟು ಎರಡು ಇದ್ದು ಉದ್ಯೋಗಕ್ಕೆ ಆಯ್ಕೆ ಆದವರನ್ನು ಬೆಂಗಳೂರು, ದೆಹಲಿ ಹಾಗೂ ಕೋಲ್ಕತ್ತದಲ್ಲಿ ನೇಮಕ ಮಾಡಲಾಗುತ್ತದೆ.

ಉದ್ಯೋಗಾಂಕ್ಷಿಗಳಿಗೆ ಕನಿಷ್ಠ 45 ರಿಂದ ಗರಿಷ್ಠ 65 ವರ್ಷಗಳ ಒಳಗೆ ಇರಬೇಕು. ಎಂಎಸ್​ಐ, ಪಿಹೆಚ್​ಡಿ ಹಾಗೂ ಎಂಬಿಎ ಮಾಡಿ 10 ವರ್ಷಗಳ ಅನುಭವವನ್ನು ಹೊಂದಿರಬೇಕು. ಸಂದರ್ಶನದಲ್ಲಿ ಉದ್ಯೋಗಕ್ಕೆ ಆಯ್ಕೆ ಆಗುವ ಅಭ್ಯರ್ಥಿಗೆ ತಿಂಗಳಿಗೆ 80,000 ದಿಂದ 15,0000 ರೂಪಾಯಿ ಸಂಬಳ ನೀಡಲಾಗುತ್ತದೆ.

ಉದ್ಯೋಗಾರ್ಥಿಗಳು ಈ ಕೆಲಸಗಳಿಗೆ ಸಂಬಂಧಿಸಿದ ಅರ್ಜಿಯನ್ನು ಇಲಾಖೆಯ ಅಧಿಕೃತ ವೆಬ್​​ಸೈಟ್​ನಿಂದ ಡೌನ್​ಲೋಡ್ ಮಾಡಿಕೊಳ್ಳಬೇಕು. ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿದ ಬಳಿಕ ಬೇಕಾದ ಎಲ್ಲ ಶೈಕ್ಷಣಿಕ ದಾಖಲೆಗಳನ್ನು ಲಗತ್ತಿಸಿ ಸೆಲ್ಫ್ ಅಟಿಸ್ಟೆಡ್ ಮಾಡಬೇಕು. ಬಳಿಕ ಈ ಕೆಳಗೆ ನೀಡಿರುವ ವಿಳಾಸಕ್ಕೆ ಅರ್ಜಿಯನ್ನು ಪೋಸ್ಟ್ ಮೂಲಕ ಕಳುಹಿಸಿಕೊಡಬೇಕು.

ವಿಳಾಸ-: Director, Sports & Youth Affairs, JNS Sports Complex, Shillong – 793001

ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ- 31/ 01 /2025

ಪೂರ್ಣ ಮಾಹಿತಿ https://sportsauthorityofindia.nic.in/sai/public/assets/jobs/1736745723_Job_removed.pdf

Leave a Comment

Leave a Reply

Your email address will not be published. Required fields are marked *