ಪ್ರಧಾನಿ ಮೋದಿ ಸಂಕ್ರಾಂತಿ ಸಂಭ್ರಮ; ಮೆಗಾಸ್ಟಾರ್​​ ಚಿರಂಜೀವಿ ಸಾಥ್

sankranti-festival
Spread the love

ನ್ಯೂಸ್ ಆ್ಯರೋ: ದೇಶಾದ್ಯಂತ ಸಂಕ್ರಾಂತಿ ಹಾಗೂ ಪೊಂಗಲ್ ಹಬ್ಬವನ್ನು ಅತ್ಯಂತ ಹರ್ಷದಿಂದ ಆಚರಣೆ ಮಾಡಲಾಗುತ್ತಿದೆ. ಹಬ್ಬಗಳು ನಮ್ಮ ಸಂಸ್ಕೃತಿ, ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿದ್ದಾವೆ. ದೊಡ್ಡ ಹಬ್ಬಗಳಲ್ಲಿ ಸಂಕ್ರಾಂತಿ ಹಬ್ಬ ಕೂಡ ಒಂದಾಗಿದೆ. ಎಳ್ಳು-ಬೆಲ್ಲ ಕೊಟ್ಟು ವರ್ಷದ ಮೊದಲ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ನವದೆಹಲಿಯಲ್ಲಿ ಪ್ರಧಾನಿ ಮೋದಿ ಜೊತೆ ಮೆಗಾಸ್ಟಾರ್ ಚಿರಂಜೀವಿ ಸೇರಿ ಇನ್ನಿತರರ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಿದ್ದಾರೆ.

ಪೊಂಗಲ್ ಹಾಗೂ ಸಂಕ್ರಾಂತಿ ಹಬ್ಬವನ್ನು ಎಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಪ್ರಧಾನಿ ಮೋದಿ ಹಬ್ಬವನ್ನು ಆಚರಣೆ ಮಾಡುತ್ತಿದ್ದು ಇಡೀ ದೇಶದ ಜನರಿಗೆ ಮಕರ ಸಂಕ್ರಾಂತಿ, ಪೊಂಗಾಲ್ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಈ ಸಂಬಂಧ ಟ್ವಿಟ್ ಕೂಡ ಮಾಡಿ ಎಲ್ಲರಿಗೂ ಹಬ್ಬಕ್ಕಾಗಿ ವಿಶ್ ಮಾಡಿದ್ದಾರೆ. ಕನ್ನಡಿಗರಿಗೆ ಕನ್ನಡದಲ್ಲೇ ಶಭಾಶಯ ತಿಳಿಸಿರುವುದು ಖುಷಿ ಸಂಗತಿ.

ಹೊಸ ವರ್ಷದ ಆರಂಭದ ಸಂಕ್ರಾಂತಿ ಹಬ್ಬವನ್ನು ಪ್ರಧಾನಿ ಮೋದಿ ಆಚರಣೆ ಮಾಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಹಾಗೂ ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರ ದೆಹಲಿ ನಿವಾಸದಲ್ಲಿ ಪ್ರಧಾನಿ ಮೋದಿ ಅವರ ಜೊತೆ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿದ್ದಾರೆ.

ಸೌತ್ ಸೂಪರ್ ಸ್ಟಾರ್ ಚಿರಂಜೀವಿ ಅವರು ಈ ಬಾರಿಯ ಸಂಕ್ರಾಂತಿಯನ್ನು ಪ್ರಧಾನಿ ಮೋದಿ ಹಾಗೂ ಆಂಧ್ರದ ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರೊಂದಿಗೆ ಆಚರಿಸಿದರು. ದೆಹಲಿಯಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ಗಣ್ಯ ನಟ, ಭಾರತೀಯ ಬ್ಯಾಡ್ಮಿಂಟನ್ ತಾರೆ ಸೇರಿ ಇತರೆ ರಾಜಕೀಯ ಗಣ್ಯರು ಪಾಲ್ಗೊಂಡಿದ್ದರು.

ಪ್ರಧಾನಿ ಮೋದಿಯವರು ಹಬ್ಬದ ಪ್ರಯುಕ್ತ ಪವಿತ್ರಾ ತುಳಸಿ ಗಿಡಕ್ಕೆ ಪೂಜೆ ಸಲ್ಲಿಕೆ ಮಾಡಿದರು. ದೇಶದ ಜನರಿಗೆ ಒಳಿತು ಮಾಡು ಎಂದು ಕೋರಿಕೊಂಡರು. ಇದೇ ವೇಳೆ ಕೇಂದ್ರ ಸಚಿವ ಕಿಶನ್ ರೆಡ್ಡಿಯವರು ಜೊತೆಗಿದ್ದರು. ಪೊಂಗಾಲ್ ಹಬ್ಬದ ಸಂಭ್ರಮದಲ್ಲಿ ಪ್ರಧಾನಿ ಮೋದಿ ಅವರು ನೂರಾರು ಜನರ ಸಮ್ಮುಖದಲ್ಲಿ ಭೋಗಿಗೆ ತುಪ್ಪ ಸುರಿದ ಆ ಮೇಲೆ ಬೆಂಕಿ ಹಚ್ಚಿದರು. ಕೈ ಮುಗಿದು ಒಳಿತನ್ನು ಕೋರಿದರು. ಇನ್ನು ಗೂಳಿಯೊಂದಕ್ಕೆ ಪೂಜೆ ಸಲ್ಲಿಕೆ ಮಾಡಿ ಅದಕ್ಕೆ ತಟ್ಟೆಯಲ್ಲಿದ್ದ ಸಿಹಿ ತಿನಿಸು ಹಾಗೂ ಬಾಳೆಹಣ್ಣುಗಳನ್ನು ತಿನಿಸಿದರು.

ಹಬ್ಬದ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಪ್ರಧಾನ ಮಂತ್ರಿ ಮೋದಿ ಚಾಲನೆ ನೀಡಿದರು. ಈ ವೇಳೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ನಟ ಚಿರಂಜೀವಿ ಸೇರಿದಂತೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ಸಚಿವ ಕಿಶನ್ ರೆಡ್ಡಿಯವರ ನಿವಾಸದಲ್ಲಿ ಆಯೋಜಿಸಿದ್ದ ಸಂಕ್ರಾತಿಯ ಪೊಂಗಾಲ್ ಹಬ್ಬಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದರು. ಈ ವೇಳೆ ಮಹಿಳೆಯೊಬ್ಬರಿಗೆ ನಮಸ್ಕಾರ ಮಾಡಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

Leave a Comment

Leave a Reply

Your email address will not be published. Required fields are marked *

error: Content is protected !!