ಉದ್ಯೋಗಗಳನ್ನ ಆಹ್ವಾನಿಸಿದ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ; ಅರ್ಜಿ ಸಲ್ಲಿಕೆ ಮಾಡುವುದು ಹೇಗೆ, ಇಲ್ಲಿದೆ ಮಾಹಿತಿ
ನ್ಯೂಸ್ ಆ್ಯರೋ: ಸ್ಪೋರ್ಟ್ಸ್ ಇಲಾಖೆಯಲ್ಲಿ ಉದ್ಯೋಗ ಬಯಸುವ ಆಕಾಂಕ್ಷಿಗಳಿಗೆ ಶುಭಸುದ್ದಿ ಒಲಿದು ಬಂದಿದೆ. ನಿಮಗೆ ಆಸಕ್ತಿ ಇದ್ದರೇ ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ. ಒಂದು ವೇಳೆ ಈ ಕೆಲಸಗಳಿಗೆ ನಿಮ್ಮ ಹೆಸರು ಅಂತಿಮವಾದರೆ, ಸಂಬಳ 1 ಲಕ್ಷ ರೂಪಾಯಿಗಿಂತ ಅಧಿಕವಿರುತ್ತದೆ. ಹೀಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ.
ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್ಎಐ) ಇಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಸಂಬಂಧ ಅರ್ಹ ಹಾಗೂ ಆಸಕ್ತಿ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಈ ಕೆಲಸಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಹೆಚ್ಚಿನ ಕಾರ್ಯಕ್ಷಮತೆಯ ನಿರ್ದೇಶಕ ಹಾಗೂ ಕಂಡೀಷನಿಂಗ್ ಎಕ್ಸ್ಪರ್ಟ್ ಹುದ್ದೆಗಳನ್ನು ಆಹ್ವಾನ ಮಾಡಲಾಗಿದೆ.
ಅರ್ಜಿ ಸಲ್ಲಿಕೆ ಮಾಡಿದ ಅಭ್ಯರ್ಥಿಗಳ ಹೆಸರನ್ನು ಮೊದಲು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಬಳಿಕ ಅಧಿಕೃತವಾಗಿ ನೋಟಿಫಿಕೆಶನ್ ಮೂಲಕ ಆಯ್ಕೆ ಆದ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಸಂದರ್ಶನದಲ್ಲಿ ನೀಡುವ ಪರ್ಫಾಮೆನ್ಸ್ ಆಧಾರದ ಮೇಲೆ ಈ ಹುದ್ದೆ ನೀಡಲಾಗುತ್ತದೆ. ಈ ಕೆಲಸಗಳು ಒಟ್ಟು ಎರಡು ಇದ್ದು ಉದ್ಯೋಗಕ್ಕೆ ಆಯ್ಕೆ ಆದವರನ್ನು ಬೆಂಗಳೂರು, ದೆಹಲಿ ಹಾಗೂ ಕೋಲ್ಕತ್ತದಲ್ಲಿ ನೇಮಕ ಮಾಡಲಾಗುತ್ತದೆ.
ಉದ್ಯೋಗಾಂಕ್ಷಿಗಳಿಗೆ ಕನಿಷ್ಠ 45 ರಿಂದ ಗರಿಷ್ಠ 65 ವರ್ಷಗಳ ಒಳಗೆ ಇರಬೇಕು. ಎಂಎಸ್ಐ, ಪಿಹೆಚ್ಡಿ ಹಾಗೂ ಎಂಬಿಎ ಮಾಡಿ 10 ವರ್ಷಗಳ ಅನುಭವವನ್ನು ಹೊಂದಿರಬೇಕು. ಸಂದರ್ಶನದಲ್ಲಿ ಉದ್ಯೋಗಕ್ಕೆ ಆಯ್ಕೆ ಆಗುವ ಅಭ್ಯರ್ಥಿಗೆ ತಿಂಗಳಿಗೆ 80,000 ದಿಂದ 15,0000 ರೂಪಾಯಿ ಸಂಬಳ ನೀಡಲಾಗುತ್ತದೆ.
ಉದ್ಯೋಗಾರ್ಥಿಗಳು ಈ ಕೆಲಸಗಳಿಗೆ ಸಂಬಂಧಿಸಿದ ಅರ್ಜಿಯನ್ನು ಇಲಾಖೆಯ ಅಧಿಕೃತ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು. ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿದ ಬಳಿಕ ಬೇಕಾದ ಎಲ್ಲ ಶೈಕ್ಷಣಿಕ ದಾಖಲೆಗಳನ್ನು ಲಗತ್ತಿಸಿ ಸೆಲ್ಫ್ ಅಟಿಸ್ಟೆಡ್ ಮಾಡಬೇಕು. ಬಳಿಕ ಈ ಕೆಳಗೆ ನೀಡಿರುವ ವಿಳಾಸಕ್ಕೆ ಅರ್ಜಿಯನ್ನು ಪೋಸ್ಟ್ ಮೂಲಕ ಕಳುಹಿಸಿಕೊಡಬೇಕು.
ವಿಳಾಸ-: Director, Sports & Youth Affairs, JNS Sports Complex, Shillong – 793001
ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ- 31/ 01 /2025
ಪೂರ್ಣ ಮಾಹಿತಿ https://sportsauthorityofindia.nic.in/sai/public/assets/jobs/1736745723_Job_removed.pdf

Leave a Comment