ಸ್ಯಾಂಡಲ್ ವುಡ್ ನಟಿಯರಿಗೂ ಬೇಕಂತೆ ಹೊಸ ಕಮಿಟಿ…? ಕರ್ನಾಟಕದಲ್ಲೂ ಕೇಳಿತು ಕೂಗು….!
ನ್ಯೂಸ್ ಆ್ಯರೋ : ಮಾಲಿವುಡ್ ನಲ್ಲಿ ಕೇಳಿ ಬರುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ಆರೋಪವು, ಇದೀಗ ಸ್ಯಾಂಡಲ್ ವುಡ್ ನಲ್ಲೂ ಸದ್ದು ಮಾಡುತ್ತಿದೆ. ಈ ಪ್ರಕರಣದಲ್ಲಿ ಮಲೆಯಾಳಂನ ಕೆಲವು ನಟರ ವಿರುದ್ಧ ದೂರು ದಾಖಲಾಗಿದೆ.
ಇದೀಗ ಮಾಲಿವುಡ್ ನಲ್ಲಿ ರಚನೆಯಾಗಿರುವ ಹೇಮಾ ಸಮಿತಿಯಂತೆ ಟಾಲಿವುಡ್, ಕಾಲಿವುಡ್ ಹಾಗೂ ಸ್ಯಾಂಡಲ್ ವುಡ್‌ನ ಕೆಲ ಕಲಾವಿದರು ಕೂಡ ತಮ್ಮ ಚಿತ್ರರಂಗದಲ್ಲೂ ಇಂತಹ ಒಂದು ಸಮಿತಿ ರಚನೆ ಆಗಬೇಕೆಂದು ಧ್ವನಿಯೆತ್ತುತ್ತಿದ್ದಾರೆ.
ಚಿತ್ರರಂಗದಲ್ಲಿ ಎಲ್ಲಾ ಮಹಿಳೆಯರಿಗೆ ಸುರಕ್ಷಿತ ಮತ್ತು ನ್ಯಾಯಯುತವಾದ ವಾತಾವರಣವನ್ನು ಸೃಷ್ಟಿಸಲು ಕೆಲವು ಷರತ್ತುಗಳಿರುವ ಸಮಿತಿಗಳನ್ನು ರಚಿಸಬೇಕೆಂದು ಕೆಲವು ಸಿನಿತಾರೆಯರು ಬೇಡಿಕೆಯಿಟ್ಟಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಸಮಿತಿ ರಚಿಸುವಂತೆ ಚಂದನವನದ ಖ್ಯಾತ ನಟ ನಟಿಯರು ಸಿಎಂಗೆ ಮನವಿ ಪತ್ರ ನೀಡಿದ್ದಾರೆ. ಈ ಮನವಿ ಪತ್ರಕ್ಕೆ 153 ಗಣ್ಯರು ಸಹಿ ಹಾಕಿದ್ದಾರೆ. ಅಲ್ಲದೆ ಪತ್ರದಲ್ಲಿ ಲೈಂಗಿಕ ದೌರ್ಜನ್ಯ ತನಿಖೆಗೆ ನಿವೃತ್ತ ನ್ಯಾಯಾಧೀಶರನ್ನು ನೇಮಿಸುವಂತೆ ಬೇಡಿಕೆ ಇಡಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ಮಹಿಳಾ ಕಲಾವಿದರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಕುರಿತು ಅಧ್ಯಯನ ಮಾಡಿ ವರದಿ ಸಲ್ಲಿಸಲು ಒಂದು ಸಮಿತಿ ರಚನೆ ಆಗಬೇಕೆಂದು ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ(ಫೈರ್) ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಪ್ರತಿಯನ್ನು ನಟ ಚೇತನ್ ತಮ್ಮ ‘X’ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಪತ್ರಕ್ಕೆ ಸ್ಯಾಂಡಲ್ ವುಡ್ ನ ನಟ – ನಟಿಯರಾದ ಕಿಚ್ಚ ಸುದೀಪ್, ಚೇತನ್ , ಕಿಶೋರ್, ರಮ್ಯಾ, ಶ್ರುತಿ ಹರಿಹರನ್, ಐಂದ್ರಿತಾ ರೈ, ಶಾನ್ವಿ ಶ್ರೀವಾಸ್ತವ, ಪೂಜಾ ಗಾಂಧಿ, ಆಶಿಕಾ ರಂಗನಾಥ್, ನಿರ್ದೇಶಕ ಸುನಿ, ಕವಿತಾ ಲಂಕೇಶ್ ಮೇಘನಾ, ಲೇಖಕಿ ಉಷಾ ಸೇರಿ 153 ಮಂದಿ ಸಹಿ ಹಾಕಿದ್ದಾರೆ.
Leave a Comment