ಅಯ್ಯಪ್ಪ ಸ್ವಾಮಿ ಭಕ್ತರಿಗೆ ಶುಭ ಸುದ್ದಿ; ಇಂದಿನಿಂದ ಮಂಡಲ ಪೂಜೆ, ದರ್ಶನಕ್ಕೆ ಅವಕಾಶ

Sabarimala Temple
Spread the love

ನ್ಯೂಸ್ ಆ್ಯರೋ: ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನವು ಮಂಡಲ ಪೂಜೆಗಾಗಿ ನ.15ರಂದು ತೆರೆಯಲಿದ್ದು, ಡಿ.26ರ ತನಕ ದರ್ಶನಕ್ಕೆ ಅವಕಾಶವಿದೆ. ನಿತ್ಯ 70000 ಜನರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದ್ದು, ಒಂದು ವೇಳೆ ಜನಸಂದಣಿ ತೀರಾ ಹೆಚ್ಚಾದಲ್ಲಿ ಅರ್ಧಗಂಟೆ ಕಾಲ ದರ್ಶನದ ಸಮಯ ವಿಸ್ತರಿಸಲು ಚಿಂತಿಸಲಾಗಿದೆ.

ಈಗಾಗಲೇ ವರ್ಚುವಲ್‌ ಕ್ಯೂ ಮೂಲಕ ಲಕ್ಷಾಂತರ ಭಕ್ತರು ನ.15- ಡಿ.29ರವರೆಗಿನ ಸಮಯವನ್ನು ಮುಂಗಡವಾಗಿ ಭೇಟಿಗಾಗಿ ಕಾದಿರಿಸಿದ್ದಾರೆ. ಇದರ ಜೊತೆಗೆ , ಪಂಪಾ, ಎರುಮೆಲಿ, ವಂದಿಪೆರಿಯಾರ್‌ಗಳಲ್ಲಿಯೂ ನಿತ್ಯ 10,000 ಭಕ್ತರಿಗೆ ಬುಕಿಂಗ್‌ ಮಾಡಿಸಲು ಅವಕಾಶವಿದ್ದು, ಇದಕ್ಕೆ ಆಧಾರ್‌ ಕಾರ್ಡ್‌, ವೋಟರ್‌ ಐಡಿ, ಪಾಸ್‌ಪೂರ್ಟ್‌ ಪ್ರತಿ ತೋರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

New Project 3 1

ಇನ್ನು ಅಮರನಾಥ ಹಾಗೂ ಚಾರ್‌ಧಾಮ್‌ ಯಾತ್ರೆಯ ವೇಳೆ ನೀಡಲಾಗುವಂತೆ, ಶಬರಿಮಲೆ ಯಾತ್ರಾರ್ಥಿಗಳಿಗೆಂದೇ ಪ್ರತ್ಯೇಕ ಹವಾಮಾನ ಮುನ್ಸೂಚನೆ ನೀಡಲು ಭಾರತೀಯ ಹವಾಮಾನ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಶಬರಿಮಲೆಯ 3 ಜಾಗಗಳಲ್ಲಿ ಮಳೆ, ಉಷ್ಣಾಂಶ ಮಾಪಕಗಳನ್ನು ಸ್ಥಾಪಿಸಲಾಗಿದೆ.

ಮೊದಲ ಹಂತದಲ್ಲಿ ಮುಂದಿನ ಮೂರು ದಿನಗಳ ಹವಾಮಾನ ಮಾಹಿತಿ ಹಂಚಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಇದನ್ನು ತತ್‌ಕ್ಷಣದ ಮಾಹಿತಿ ನೀಡುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಐಎಂಡಿಯ ಸ್ಥಳೀಯ ನಿರ್ದೇಶಕಿ ನೀತಾ ಕೆ. ಗೋಪಾಲ್‌ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಉಂಟಾಗುವ ತಾಪಮಾನ ಏರಿಕೆ, ಅಧಿಕ ತೇವಾಂಶ, ಭಾರೀ ಮಳೆಯನ್ನು ಗಮನದಲ್ಲಿಟ್ಟುಕೊಂಡು ಪಟ್ಟಣಂತಿಟ್ಟ ಜಿಲ್ಲಾಧಿಕಾರಿ ಮಾಡಿದ ಮನವಿಯಿಂದ ಈ ವ್ಯವಸ್ಥೆ ಮಾಡಲಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!