ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್ ಜೈಲಿಂದ ಹೊರಗೆ ಬರೋದು ಡೌಟ್…!
ನ್ಯೂಸ್ ಆ್ಯರೋ : ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿ ಪೊಲೀಸರು ಕೇಸ್ ಗೆ ಸಂಬಂಧಿಸಿದ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ.
ಪವಿತ್ರ ಗೌಡರಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ, ದರ್ಶನ್ ಹಾಗೂ ಅವರ ಗ್ಯಾಂಗ್ ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿದ್ದಾರೆ.
ಈ ಪ್ರಕರಣದಲ್ಲಿ ನಾಲ್ವರು ಸ್ವತಃ ಹೋಗಿ ಶರಣಾಗಿದ್ದರು. ಈ ವೇಳೆ ಆರೋಪಿಗಳು ಹಣಕಾಸಿನ ವಿಚಾರಕ್ಕಾಗಿ ಕೊಲೆ ಮಾಡಿದ್ದು ಹೇಳಿದ್ದಾರೆ. ರೂಪಿಗಳ ಹೇಳಿಕೆಯಲ್ಲಿ ಗೊಂದಲವಿದ್ದುದ್ದರಿಂದ ಡಿಸಿಪಿ ಎಸ್.ಗಿರೀಶ್ ಹಾಗೂ ಎಸಿಪಿ ಚಂದನ್ ಕುಮಾರ್ ಅವರು ತೀವ್ರ ವಿಚಾರಣೆ ನಡೆಸಿದಾಗ ಸತ್ಯಾಂಶವು ಬಯಲಾಗುತ್ತದೆ. ರೇಣುಕಾ ಸ್ವಾಮಿಯ ಮೇಲೆ ನಟ ದರ್ಶನ್, ಪವಿತ್ರ ಗೌಡ ಹಾಗೂ ಇವರ ತಂಡ ತೀವ್ರವಾಗಿ ಹಲ್ಲೆ ನಡೆಸಿದ್ದು ತನಿಖೆಯ ವೇಳೆ ತಿಳಿದುಬಂದಿದೆ.
ಆ ಬಳಿಕ ಪೊಲೀಸರು ಜೂನ್ 11 ರಂದು ದರ್ಶನ್ ಅನ್ನು ಮೈಸೂರಿನಲ್ಲಿ, ಪವಿತ್ರಾ, ವಿನಯ್, ದೀಪಕ್, ಪ್ರದೋಶ್, ಲಕ್ಷ್ಮಣ ಅವರುಗಳನ್ನು ಬೆಂಗಳೂರಿನಲ್ಲಿ, ಪವನ್ ಅನ್ನು ರಾಮನಗರದಲ್ಲಿ, ನಂದೀಶ್ ಮಂಡ್ಯದ ಚಾಮಲಾಪುರದಲ್ಲಿ, ನಾಗರಾಜನನ್ನು ಮೈಸೂರಿನ ರಾಮಕೃಷ್ಣಾನಗರದಲ್ಲಿ, ಚಿತ್ರದುರ್ಗದಲ್ಲಿ ಕೆಲವರನ್ನು, ಧನರಾಜ್ ಜೂನ್ 15 ರಂದು ಬಂಧಿಸಲಾಗಿದೆ.
Leave a Comment