ಗುರುವಾರ ಹುಟ್ಟಿದವರ ಗುಣ ಹೀಗಿರುತ್ತೆ ನೋಡಿ…! – ನಾಯಕತ್ವ ಗುಣ, ಪರಿಪೂರ್ಣ ಪ್ರೇಮಿ : ಏನೆಲ್ಲಾ ಗುಣಗಳಿವೆ ಗೊತ್ತಾ?

ಗುರುವಾರ ಹುಟ್ಟಿದವರ ಗುಣ ಹೀಗಿರುತ್ತೆ ನೋಡಿ…! – ನಾಯಕತ್ವ ಗುಣ, ಪರಿಪೂರ್ಣ ಪ್ರೇಮಿ : ಏನೆಲ್ಲಾ ಗುಣಗಳಿವೆ ಗೊತ್ತಾ?

ನ್ಯೂಸ್ ಆ್ಯರೋ‌ : ಏಳು ವಾರಗಳ ಮಧ್ಯದಲ್ಲಿ ಬರುವ ಐದನೇ ದಿನವೇ ಗುರುವಾರ. ಈ ದಿನವು ಹಿಂದೂ ಪಂಚಾಂಗದ ಪ್ರಕಾರ ಅತ್ಯಂತ ಪವಿತ್ರವಾದ ದಿನ. ಗುರು ಗ್ರಹ ಹಾಗೂ ಬ್ರಹಸ್ಪತಿ ದೇವರಿಗೆ ಮೀಸಲಾದ ದಿನ ಎಂದು ಹೇಳಲಾಗುವುದು. ಗುರು ಮತ್ತು ಬ್ರಹಸ್ಪತಿ ದೇವರು ಅತ್ಯಂತ ಶಕ್ತಿ ಶಾಲಿ ದೇವರು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಗ್ರಹವು ವ್ಯಕ್ತಿಯ ಜೀವನದಲ್ಲಿ ಅತ್ಯಂತ ಅದೃಷ್ಟ ಹಾಗೂ ಯಶಸ್ಸನ್ನು ತಂದುಕೊಡುವುದು ಎಂದು ಹೇಳಲಾಗುವುದು. ಗುರುವಿನ ಅನುಗ್ರಹ ಇದ್ದರೆ ವ್ಯಕ್ತಿಯು ಜೀವನದಲ್ಲಿ ಸಮೃದ್ಧಿ, ಸಂತೋಷ ಹಾಗೂ ನೆಮ್ಮದಿಯನ್ನು ತಂದುಕೊಡುವುದು. ಇಂತಹ ಶುಭ ದಿನದಂದು ಜನಿಸಿದವರ ಜೀವನ ಹಾಗೂ ಅವರ ಸ್ವಭಾವ ಹೇಗಿರುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

ಉದಾರ ಸ್ವಭಾವದ ವ್ಯಕ್ತಿತ್ವ
ಗುರುವಾರ ಜನಿಸಿದ ವ್ಯಕ್ತಿಗಳು ಉದಾರ ಸ್ವಭಾವದವರಾಗಿರುತ್ತಾರೆ. ಇವರು ಜೀವನದಲ್ಲಿ ಯಶಸ್ಸು ಮತ್ತು ಸಂಪತ್ತನ್ನು ನೋಡಲು ಬಯಸುತ್ತಾರೆ. ಇವರ ಆಸೆಯಂತೆಯೇ ಜೀವನದಲ್ಲಿ ಬಯಸಿದ ಸಂಗತಿಗಳು ದೊಡ್ಡ ಪ್ರಮಾಣದಲ್ಲಿಯೇ ದೊರೆಯುವುದು. ಕೆಲವು ಸಂದರ್ಭದಲ್ಲಿ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಇರುತ್ತವೆ. ಜೀವನದಲ್ಲಿ ಎಂತಹ ಸಂಗತಿಗಳು ಎದುರಾದರೂ ಅವುಗಳನ್ನು ಆಶಾವಾದದಿಂದ ನೋಡುತ್ತಾರೆ. ಹಾಗಾಗಿ ಅವರಿಗೆ ಜೀವನದ ಏರಿಳಿತವನ್ನು ಎದುರಿಸಲು ಸಾಧ್ಯವಾಗುವುದು. ಉತ್ತಮ ತೀರ್ಪುಗಾರರಾಗಿ ನಿರ್ಣಯ ಕೈಗೊಳ್ಳುವುದರಿಂದ ಇವರ ಸುತ್ತ ಜನರು ಅಭಿಪ್ರಾಯ ಹಾಗೂ ವಿಷಯಗಳ ಬಗ್ಗೆ ಸಲಹೆಯನ್ನು ಪಡೆಯಲು ಬರುವರು.

ಮುಕ್ತ ಮನಸ್ಸು

ಗುರುವಾರ ಜನಿಸಿದವರು ಸಾಮಾನ್ಯವಾಗಿ ಶಿಕ್ಷಕ ವೃತ್ತಿ ಮಾಡುವುದು ಹೆಚ್ಚು. ಅತ್ಯಂತ ಬುದ್ಧಿವಂತರು ಹಾಗೂ ಮುಕ್ತವಾದ ಮನಸ್ಸಿನವರು ಆಗಿರುತ್ತಾರೆ. ಇವರ ಅದೃಷ್ಟದ ಸಂಖ್ಯೆ 3. ಗುರುವಾರ ಗುರುವಿನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುವುದರಿಂದ ಸಂತೋಷದ ಜೀವನವನ್ನು ಅನುಭವಿಸಬಹುದು ಎಂದು ಸಲಹೆ ನೀಡಲಾಗುತ್ತದೆ. ಗುರುವಾರ ದತ್ತಿ ಅಥವಾ ದಾನ ಮಾಡುವುದರಿಂದಲೂ ಒಂದಿಷ್ಟು ಪುಣ್ಯ ಫಲಗಳು ದೊರೆಯುವುದು.

ವೃತ್ತಿ ಜೀವನ

ಗುರುವಾರ ಜನಿಸಿದವರು ಸಾಮಾನ್ಯವಾಗಿ ನಾಯಕರಾಗಿರುತ್ತಾರೆ. ಇವರು ಆಳಲು ಹುಟ್ಟಿದವರಾಗಿರುತ್ತಾರೆ ಎಂದು ಸಹ ಹೇಳಲಾಗುವುದು. ಇವರ ಆಕರ್ಷಕ ವ್ಯಕ್ತಿತ್ವವು ಇತರರನ್ನು ಬಹುಬೇಗ ಸೆಳೆದುಕೊಳ್ಳುವುದು. ಜೊತೆಗೆ ಸುತ್ತಲಿನ ಜನರು ಇವರ ಅನುಕರಣೆ ಮಾಡುವರು. ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಳ್ಳುವುದು ಹಾಗೂ ಅದರಲ್ಲಿಯೇ ಕೆಲಸ ನಿರ್ವಹಿಸುವುದು ಇವರಿಗೆ ಯಶಸ್ಸನ್ನು ತಂದುಕೊಡುವುದು.

ಅಲ್ಲದೇ ಉನ್ನತ ಮಟ್ಟದ ಕಾರ್ಯನಿರ್ವಾಹಕ ಜವಾಬ್ದಾರಿಯ ಕೆಲಸವನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಇವರು ಯಾವುದೇ ವೃತ್ತಿ ಅಥವಾ ವ್ಯಾಪಾರಗಳನ್ನು ಕೈಗೊಂಡರೂ ಉತ್ತಮ ಯಶಸ್ಸನ್ನು ಪಡೆದುಕೊಳ್ಳುವರು. ಇವರು ಸಾಮಾನ್ಯವಾಗಿ ಜವಾಬ್ದಾರಿ, ವೈವಿಧ್ಯತೆ ಮತ್ತು ಹೊಸತನದಿಂದ ಕೂಡಿರುವ ಕೆಲಸವನ್ನು ನಿರ್ವಹಿಸಲು ಬಯಸುತ್ತಾರೆ. ದಿನ ಪೂರ್ತಿ ಒಂದೇ ಕೆಲಸವನ್ನು ಮಾಡಲು ಅಥವಾ ಅದಕ್ಕೆ ಅಂಟಿಕೊಂಡು ಇರಲು ಇಷ್ಟಪಡುವುದಿಲ್ಲ.

ಪ್ರೀತಿಯ ಜೀವನ

ಗುರುವಾರ ಜನಿಸಿದವರ ಪ್ರೀತಿಯ ಜೀವನದ ಬಗ್ಗೆ ಹೇಳುವುದಾದರೆ ತಾವು ಏನು ಅನುಭವಿಸುತ್ತಿದ್ದೇವೆ ಎನ್ನುವುದನ್ನು ಪರಿಗಣಿಸುವುದಿಲ್ಲ. ಬದಲಿಗೆ ತಾವು ಏನನ್ನು ಭಾವಿಸುತ್ತೇವೆ ಎನ್ನುವುದರ ಕುರಿತು ಮಾತನಾಡಲು ಬಯಸುತ್ತಾರೆ. ಹಾಗಾಗಿ ಇವರಿಗೆ ತಮ್ಮ ಪ್ರೀತಿಯ ಜೀವನದಲ್ಲಿ ಸರಾಗವಾಗಿ ಪ್ರಯಾಣಿಸಲು ಕಷ್ಟವಾಗುವುದು. ಭಾವೋದ್ರಿಕ್ತ ವ್ಯಕ್ತಿಗಳಾದ ಇವರು ತಮ್ಮ ಪ್ರೇಮಿಯ ಪ್ರೀತಿಯಲ್ಲಿ ಆಳವಾಗಿ ಸಿಲುಕಿಕೊಳ್ಳುತ್ತಾರೆ. ಅಲ್ಲದೆ ಬಹುಬೇಗ ಬೇಸರಕ್ಕೆ ಒಳಗಾಗುವ ಸಾಧ್ಯತೆಗಳು ಇರುತ್ತವೆ. ಸಾಹಸವನ್ನು ಪ್ರೀತಿಸುವ ಪಾಲುದಾರನ್ನು ಹೊಂದಲು ಬಯಸುವರು. ಪ್ರೀತಿಯ ಜೀವನದಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ಪ್ರೀತಿಯ ಭಾವನೆಯನ್ನು ಅರ್ಥಮಾಡಿಕೊಳ್ಳಲು ಕಲಿಯಬೇಕಾಗುವುದು.

ದಾಂಪತ್ಯ ಜೀವನ

ಈ ದಿನದಲ್ಲಿ ಜನಿಸಿದವರಿಗೆ ತೀಕ್ಷ್ಣವಾಗಿ ಮಾತನಾಡುವ ಅಭ್ಯಾಸ ಇರುತ್ತದೆ. ಹಾಗಾಗಿ ತೀಕ್ಷ್ಣವಾದ ನಾಲಿಗೆಯನ್ನು ಇವರು ಸ್ವಲ್ಪ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಆಗ ವೈವಾಹಿಕ ಜೀವನವು ತೃಪ್ತಿಕರವಾಗಿ ಮತ್ತು ಯಶಸ್ವಿಯಾಗಿ ಇರುತ್ತದೆ. ವಿವಾದ ಹಾಗೂ ವಾದಗಳು ದಾಂಪತ್ಯ ಜೀವನದ ಒಂದು ಭಾಗವಾಗಿ ಇರುತ್ತವೆ. ಸಂಗಾತಿಯ ಭಾವನೆ ಹಾಗೂ ಪ್ರೀತಿಯನ್ನು ಅರಿಯಲು ಪ್ರಯತ್ನಿಸಬೇಕಾಗುವುದು. ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯ ಪದಗಳನ್ನು ಬಳಸಬೇಕು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *