
Pudeena Rice Recipe : ಬ್ರೇಕ್ ಫಾಸ್ಟ್ ಗೆ ಮಾಡಿ ರುಚಿಕರವಾದ ಪುದೀನಾ ರೈಸ್ ಬಾತ್ -ಇಲ್ಲಿದೆ ಮಾಡುವ ವಿಧಾನ..
- ಆರೋಗ್ಯವೇ ಭಾಗ್ಯ
- November 2, 2023
- No Comment
- 261
ನ್ಯೂಸ್ ಆ್ಯರೋ : ಮನೆಗೆ ಯಾರಾದ್ರೂ ಗೆಸ್ಟ್ ಬರುವವರಿದ್ದರೆ ಅಥವಾ ಪ್ರತಿದಿನ ಒಂದೇ ರೀತಿಯ ಅಡುಗೆ ಮಾಡೋದು ಅಂದ್ರೆ ಸ್ವಲ್ಪವಾದ್ರೂ ಬದಲಾವಣೆ ಮಾಡಬೇಕು ಅಂತ ಯೋಚಿಸುತ್ತೇವೆ. ಅತಿ ಕಡಿಮೆ ಸಮಯದಲ್ಲಿ, ಕಡಿಮೆ ಸಾಮಗ್ರಿಗಳನ್ನು ಬಳಸಿ, ರುಚಿಯಾದ ಅಡುಗೆ ತಯಾರಿಸುವುದು ನಿಜಕ್ಕೂ ಟಾಸ್ಕ್. ಹಾಗೆ ಅತಿ ಕಡಿಮೆ ಸಮಯದಲ್ಲಿ ರುಚಿಯಾದ ಹಾಗೂ ಹೆಚ್ಚು ಪದಾರ್ಥಗಳನ್ನು ಬಳಸದೆ ತಯಾರಿಸುವ ರೆಸಿಪಿಗಳಲ್ಲಿ ಪುದೀನಾ ರೈಸ್ ಬಾತ್ ಕೂಡಾ ಒಂದು.
ಹಾಗಿದ್ರೆ ಪುದೀನಾ ರೈಸ್ ಬಾತ್ ತಯಾರಿಸಲು ಏನೆಲ್ಲಾ ಸಾಮಗ್ರಿಗಳು ಬೇಕು..? ತಯಾರಿಸುವ ವಿಧಾನ ಹೇಗೆ ಎಂಬ ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು
ಎಣ್ಣೆ- 2 ಚಮಚ
ತುಪ್ಪ-1 ಚಮಚ
ಉದ್ದಿನ ಬೇಳೆ, ಕಡಲೆಬೇಳೆ- 1. 1/2 ಚಮಚ
ಸಾಸಿವ- ಅರ್ಧ ಚಮಚ
ಜೀರಿಗೆ- 1 ಚಮಚ
ಕೆಂಪು ಮೆಣಸಿನ ಕಾಯಿ- 4
ಹಸಿಮೆಣಸಿನ ಕಾಯಿ- 2
ಶುಂಠಿ,ಬೆಳ್ಳುಳ್ಳಿ ಪೇಸ್ಟ್- ಅರ್ಧ ಚಮಚ
ಪುದೀನಾ- 1 ಬಟ್ಟಲು
ಕೊತ್ತಂಬರಿ ಸೊಪ್ಪು- ಸ್ವಲ್ಪ
ತೆಂಗಿನ ಪುಡಿ- ಕಾಲು ಬಟ್ಟಲು
ಹುಣಸೆಹಣ್ಣು- ಸ್ವಲ್ಪ
ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1
ಕರಿಬೇವು-ಸ್ವಲ್ಪ
ಟೊಮೆಟೋ- 1
ಅನ್ನ- 1 ಬಟ್ಟಲು
ಉಪ್ಪು- ರುಚಿಗೆ ತಕ್ಕಷ್ಟು
ಕಡಲೆಕಾಯಿ ಬೀಜ- ಹುರಿದದ್ದು 1 ಚಿಕ್ಕ ಬಟ್ಟಲು
ಮಾಡುವ ವಿಧಾನ
ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು, ಎಣ್ಣೆ ಹಾಕಬೇಕು. ಕಾದ ನಂತರ, ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನ ಬೇಳೆ, ಜೀರಿಗೆ, ಒಣಗಿದ ಮೆಣಸಿನ ಕಾಯಿ, ಹಸಿಮೆಣಸಿನ ಕಾಯಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಪುದೀನಾ, ಕೊತ್ತಂಬರಿ ಸೊಪ್ಪು, ಕಾಯಿತುರಿ ಎಲ್ಲವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
ನಂತರ ಹುಣಸೆಹಳ್ಲು ಹಾಗೂ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಮಿಶ್ರಣ ತಣ್ಣಗಾದ ಬಳಿಕ ಮಿಕ್ಸಿ ಜಾರ್’ಗೆ ಹಾಕಿ ತರಿ, ತರಿಯಾಗಿ ರುಬ್ಬಿಕೊಳ್ಳಬೇಕು.
ಮತ್ತೆ ಒಲೆಯ ಮೇಲೆ ಬಾಣಲೆ ಇಟ್ಟು, ಅದಕ್ಕೆ ಸ್ವಲ್ಪ ತುಪ್ಪ, ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನ ಬೇಳೆ, ಕರಿಬೇವು, ಒಣಗಿತ ಮೆಣಕಿನ ಕಾಯಿ, ಹುರಿದ ಕಡಲೆಬೀಜ, ಈರುಳ್ಳಿ, ಟೊಮೆಟೋ ಹಾಕಿ ಕೆಂಪಗೆ ಹುರಿಯಬೇಕು.
ನಂತರ ಈಗಾಗಲೇ ರುಬ್ಬಿಕೊಂಡ ಮಸಾಲೆಯನ್ನು ಹಾಕಿ ಮಿಶ್ರಣ ಮಾಡಬೇಕು.
ನಂತರ ಅನ್ನವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ, ರುಚಿಕರವಾದ ಪುದೀನಾ ರೈಸ್ ಸವಿಯಲು ಸಿದ್ಧ.