ಮನೆಯ ಸುತ್ತಮುತ್ತ ಮರ ಗಿಡಗಳಿದ್ದರೆ ಸಮಸ್ಯೆ ತಪ್ಪಿದ್ದಲ್ಲ – ಹಾಗಾದ್ರೆ ಆ ಮರಗಳು ಯಾವುವು, ನೆಟ್ಟರೆ ಏನು ಸಮಸ್ಯೆ ಎನ್ನುವ ಮಾಹಿತಿ ಇಲ್ಲಿದೆ..

ಮನೆಯ ಸುತ್ತಮುತ್ತ ಮರ ಗಿಡಗಳಿದ್ದರೆ ಸಮಸ್ಯೆ ತಪ್ಪಿದ್ದಲ್ಲ – ಹಾಗಾದ್ರೆ ಆ ಮರಗಳು ಯಾವುವು, ನೆಟ್ಟರೆ ಏನು ಸಮಸ್ಯೆ ಎನ್ನುವ ಮಾಹಿತಿ ಇಲ್ಲಿದೆ..

ನ್ಯೂಸ್ ಆ್ಯರೋ : ವಾಸ್ತು ಪ್ರಕಾರ ಮರಗಳು ಮತ್ತು ಸಸ್ಯಗಳು ಸಕಾರಾತ್ಮಕ ಶಕ್ತಿಯೊಂದಿಗೆ ಸಂಬಂಧ ಹೊಂದಿರುತ್ತವೆ ಎಂದು ಹೇಳಲಾಗುತ್ತದೆ. ಇದು ನಮ್ಮ ಜೀವನದಲ್ಲಿ ಒಂದು ನಿರ್ದಿಷ್ಟ ರೀತಿಯ ಸ್ಪಷ್ಟತೆ ಮತ್ತು ಧನಾತ್ಮಕತೆಯನ್ನು ಹೆಚ್ಚಿಸುತ್ತದೆ. ಮನೆಯ ಸುತ್ತಮುತ್ತಲಿರುವ ಮರಗಳು ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇವುಗಳು ಕೂಡಾ ಗ್ರಹಗಳ ಶುಭ ಮತ್ತು ಅಶುಭ ಪರಿಣಾಮಗಳೊಂದಿಗೆ ಸಂಬಂಧ ಹೊಂದಿರುತ್ತದೆ.

ನಾವು ಈ ಸಸ್ಯ ಅಥವಾ ಮರಗಳ ಬಳಿ ಸುತ್ತಾಡುವಾಗ ಅವುಗಳ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಯು ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಕೆಲವು ಮರಗಳನ್ನು ಮಾತ್ರ ಮನೆ ಹತ್ತಿರ ನೆಡಬೇಕು. ಕೆಲವೊಂದು ಮರಗಳನ್ನು ನಕಾರಾತ್ಮಕ ಪರಿಣಾಮ ಬೀರುವ ಮರಗಳೆಂದು ವಾಸ್ತುಶಾಸ್ತ್ರದಲ್ಲಿ ಗುರುತಿಸಲಾಗಿದೆ. ಅವುಗಳನ್ನು ನೆಡುವುದರಿಂದ ಗ್ರಹಗಳ ದುಷ್ಪರಿಣಾಮ ಉಂಟಾಗುತ್ತದೆ. ಹಾಗಾದರೆ ಆ ಮರಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ತಾಳೆ ಮರ

ಈ ಮರ ಖರ್ಜೂರದ ಮರದಂತೆ ಹೋಲುತ್ತಿದ್ದರೂ, ಅಲಂಕಾರಿಕ ಗಿಡವಾಗಿ ಕಂಡರೂ ಅದನ್ನು ಮನೆಯೊಳಗೆ ನೆಡಬಾರದು ಎಂದು ವಾಸ್ತುಶಾಸ್ತ್ರ ತಿಳಿಸುತ್ತದೆ. ಈ ತಾಳೆ ಮರವನ್ನು ಮನೆಯೊಳಗೆ ನೆಡುವುದರಿಂದ ಆರ್ಥಿಕ ಸಂಕಷ್ಟ ಉಂಟಾಗುತ್ತದೆ.

ಈ ಮರದ ಹಣ್ಣು ತಿನ್ನಲು ತುಂಬಾ ರುಚಿಕರವಾಗಿರುತ್ತದೆ, ಆದರೆ ಇದನ್ನು ಮನೆಯಲ್ಲಿ ನೆಡುವುದರಿಂದ ಶುಭ ಫಲಗಳನ್ನು ಕಾಣಲಾರಿರಿ. ಅದರ ಹೆಚ್ಚಿದ ಎತ್ತರದಿಂದಾಗಿ, ಮನೆಯ ಸದಸ್ಯರ ಆರ್ಥಿಕ ಪ್ರಗತಿಯೂ ಕುಂಠಿತವಾಗುತ್ತದೆ ಎಂಬ ನಂಬಿಕೆ ಇದೆ.

ಬೋರೆ ಹಣ್ಣಿನ ಮರ

ಬೋರೆ ಹಣ್ಣು ತಿನ್ನಲು ತುಂಬಾ ರುಚಿಕರವಾಗಿರುತ್ತದೆ, ಆದರೆ ಇದನ್ನು ಮನೆಯಲ್ಲಿ ನೆಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯಲ್ಲಿ ನೆಡುವುದರಿಂದ ಸಮಸ್ಯೆಗಳುಂಟಾಗುತ್ತವೆಂಬ ನಂಬಿಕೆ ಇದೆ. ಬೋರೆ ಹಣ್ಣಿನ ಮರ ಮುಳ್ಳುಗಳಿಂದ ಕೂಡಿರುವುದರಿಂದ ಇದು ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ.

ಈ ಮರವನ್ನು ನೆಡುವುದರಿಂದ, ಮನೆಯ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯಗಳು ಶುರುವಾಗಲು ಪ್ರಾರಂಭವಾಗುತ್ತದೆ ಮತ್ತು ಆರ್ಥಿಕ ನಷ್ಟ ಪರಿಸ್ಥಿತಿ ಉಂಟಾಗಬಹುದು. ಈ ಮರ ಇರುವ ಮನೆಯಲ್ಲಿ ಲಕ್ಷ್ಮೀ ದೇವಿಯು ಇರುವುದಿಲ್ಲ ಎನ್ನಲಾಗುತ್ತದೆ.

ಹುಣಸೆ ಮರ

ಮನೆಯಲ್ಲಿ ಹುಣಸೆ ಮರವನ್ನು ನೆಡಬೇಡಿ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಅಂತಹ ಮನೆಗಳಲ್ಲಿ ದೆವ್ವ ಮತ್ತುಕೆಟ್ಟದೃಷ್ಟಿಯು ಭಯವನ್ನು ಸೃಷ್ಟಿಸುವುದು ಎಂಬ ನಂಬಿಕೆ ಇದೆ. ಹುಣಸೆ ಮರವನ್ನು ವಾಸ್ತುವಿನಲ್ಲಿ ನಕಾರಾತ್ಮಕ ಪರಿಣಾಮ ಬೀರು ಮರವೆಂದು ಪರಿಗಣಿಸಲಾಗಿದೆ. ಹುಣಸೆ ಮರವನ್ನು ಮನೆಯೊಳಗೆ ನೆಡುವುದರಿಂದ ಮನೆಯ ಸದಸ್ಯರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ.

ಹಾಲು ಬಿಡುವ ಮರಗಿಡ

ವಾಸ್ತವವಾಗಿ, ಹಾಲಿನಂತಹ ದ್ರವ ಬರುವ ಸಸ್ಯಗಳನ್ನು ಮನೆಯ ಒಳಾಂಗಣದಲ್ಲಿ ನೆಡಬಾರದು ಎಂದು ನಂಬಿಕೆ ಇದೆ. ಈ ಸಸ್ಯಗಳಿಂದ ಒಂದು ರೀತಿಯ ನಕಾರಾತ್ಮಕ ಶಕ್ತಿಯು ಹೊರಬರುತ್ತದೆ, ಅದು ಮನೆಯ ಸದಸ್ಯರಲ್ಲಿ ಅನಾರೋಗ್ಯವನ್ನು ತಂದಿಡಬಹುದು. ಈ ರೀತಿಯ ಗಿಡವನ್ನು ತೆರೆದ ಸ್ಥಳಗಳಲ್ಲಿ ಮಾತ್ರ ಬೆಳೆಸಬಹುದು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *