ಮನೆಯಲ್ಲಿ ಈ ಮೂರು ದೇವರುಗಳ ವಿಗ್ರಹವಿದ್ದರೆ ಹಣದ ಸಮಸ್ಯೆ ಕಾಡುವುದಿಲ್ಲ – ಯಾವ ದೇವರು ಮನೆಗೆ ಶುಭಸೂಚಕ ಗೊತ್ತಾ?

ಮನೆಯಲ್ಲಿ ಈ ಮೂರು ದೇವರುಗಳ ವಿಗ್ರಹವಿದ್ದರೆ ಹಣದ ಸಮಸ್ಯೆ ಕಾಡುವುದಿಲ್ಲ – ಯಾವ ದೇವರು ಮನೆಗೆ ಶುಭಸೂಚಕ ಗೊತ್ತಾ?

ನ್ಯೂಸ್ ಆ್ಯರೋ : ಹಿಂದೂ ಶಾಸ್ತ್ರದಲ್ಲಿ ಮನೆಯಲ್ಲಿ ಪ್ರಗತಿ ಮತ್ತು ಸಂಪತ್ತಿನ ಹೆಚ್ಚಳಕ್ಕೆ ಕಾರಣವಾಗುವ ಅನೇಕ ವಿಚಾರಗಳ ಕುರಿತು ಉಲ್ಲೇಖಿಸಲಾಗಿದೆ. ನಾವು ಶಾಸ್ತ್ರದ ಪ್ರಕಾರ, ನಮ್ಮ ಜೀವನದ ಹಣದ ಸಮಸ್ಯೆಗಳನ್ನು ಹೇಗೆ ನಿವಾರಿಸಿಕೊಳ್ಳಬಹುದು ಎನ್ನುವುದರ ಕುರಿತು ಇದು ಸಾಕಷ್ಟು ಮಾಹಿತಿಯನ್ನು ನೀಡುತ್ತದೆ. ಒಂದು ವೇಳೆ ನೀವು ಪದೇ ಪದೇ ಹಣದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಥವಾ ಹಣದ ವಿಚಾರದಲ್ಲಿ ನೀವು ಸೋಲನ್ನು ಅನುಭವಿಸುತ್ತಿದ್ದರೆ ಮನೆಯಲ್ಲಿ ಯಾವ 3 ದೇವರ ವಿಗ್ರಹಗಳನ್ನು ಅಥವಾ ಫೋಟೋವನ್ನು ಇಡಬೇಕು ಗೊತ್ತಾ..?

1. ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಫೋಟೋ:

ಲಕ್ಷ್ಮಿ ದೇವಿಯನ್ನು ಹಿಂದೂ ಧರ್ಮದಲ್ಲಿ ಸಂಪತ್ತಿನ ಅಧಿದೇವತೆ ಎಂದು ಕರೆಯಲಾಗುತ್ತದೆ. ಈಕೆಯನ್ನು ಪೂಜಿಸುವುದರಿಂದ ಓರ್ವ ವ್ಯಕ್ತಿಯು ಅಪಾರ ಸಂಪತ್ತು ಮತ್ತು ಧನ ಲಾಭವನ್ನು ಪಡೆದುಕೊಳ್ಳುತ್ತಾನೆ ಎನ್ನುವ ನಂಬಿಕೆಯಿದೆ. ಮನೆಯಲ್ಲಿ ಲಕ್ಷ್ಮಿ ದೇವಿಯ ಫೋಟೋವನ್ನಿಟ್ಟು ಆಕೆಯನ್ನು ನಿಯಮಿತವಾಗಿ ತುಪ್ಪದ ದೀಪ ಮತ್ತು ಸುಗಂಧ ದ್ರವ್ಯಗಳಿಂದ ಪೂಜೆಯನ್ನು ಮಾಡಬೇಕು. ಇದರಿಂದ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಸಂತೋಷಗೊಂಡ ನಿಮ್ಮ ಎಲ್ಲಾ ರೀತಿಯ ಹಣದ ಸಮಸ್ಯೆಗಳನ್ನು ದೂರಾಗಿಸುತ್ತಾಳೆ. ಹಾಗೂ ಧನ – ಧಾನ್ಯದ ವರವನ್ನು ನೀಡುತ್ತಾಳೆ.

2. ಕುಬೇರ ದೇವನ ವಿಗ್ರಹ ಅಥವಾ ಫೋಟೋ

ಮನೆಯಲ್ಲಿ ಲಕ್ಷ್ಮಿಯ ವಿಗ್ರಹ ಅಥವಾ ಫೋಟೋವನ್ನು ಇಟ್ಟುಕೊಳ್ಳುವುದರೊಂದಿಗೆ ಕುಬೇರ ದೇವನ ವಿಗ್ರಹ ಅಥವಾ ಫೋಟೋವನ್ನು ಕೂಡ ಇಟ್ಟುಕೊಳ್ಳಬೇಕು. ನಾವು ಮನೆಯಲ್ಲಿ ಕುಬೇರ ದೇವನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುವುದರಿಂದ ಅಥವಾ ಕುಬೇರನ ಫೋಟೋವನ್ನು ಇಟ್ಟುಕೊಳ್ಳುವುದರಿಂದ ಮತ್ತು ಅದಕ್ಕೆ ಪೂಜೆಯನ್ನು ಮಾಡುವುದರಿಂದ ಮನೆಯಲ್ಲಿ ಬಡತನ ಮಾತ್ರವಲ್ಲ, ಆರೋಗ್ಯದ ಸಮಸ್ಯೆಗಳು ಕೂಡ ದೂರಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ನೀವು ಮನೆಯಲ್ಲಿ ಕುಬೇರನ ವಿಗ್ರಹವನ್ನು ಇಡುವುದಾದರೆ ತಿಜೋರಿ ಅಥವಾ ಲಾಕರ್‌ನಲ್ಲಿ ಇಡಬೇಕು. ಇದರಿಂದ ನೀವು ಆರ್ಥಿಕ ಪ್ರಗತಿಯನ್ನು ಸಾಧಿಸುತ್ತೀರಿ. ಕುಬೇರನು ನಿಮ್ಮ ಸಂಪತ್ತಿನ ಆಸೆಯನ್ನು ಈಡೇರಿಸುತ್ತಾನೆ.

3. ಗಣೇಶನ ವಿಗ್ರಹ ಅಥವಾ ಫೋಟೋ

ಹಿಂದೂ ಧರ್ಮದಲ್ಲಿ ಗಣಪತಿಯನ್ನು ಸಂತೋಷ ಮತ್ತು ಸಮೃದ್ಧಿಯ ದೇವರು ಎಂದು ಪರಿಗಣಿಸಲಾಗುತ್ತದೆ. ಗಣಪತಿಯ ವಿಗ್ರಹವನ್ನು ಮನೆಯಲ್ಲಿಟ್ಟು ಪೂಜಿಸುವುದರಿಂದ ಆ ಮನೆಯು ಅದೃಷ್ಟವನ್ನು ಪಡೆದುಕೊಳ್ಳುತ್ತದೆ. ಆದರೆ, ಗಣಪತಿಯ ವಿಗ್ರಹವನ್ನು ಮನೆಯಲ್ಲಿ ಇಡುವ ಮುನ್ನ ಪಂಡಿತರ ಸಲಹೆಯನ್ನು ತೆಗೆದುಕೊಂಡು ನಂತರ ಇಡುವುದು ಉತ್ತಮ.

ಮನೆಯಲ್ಲಿ ಈ ಮೇಲಿನ 3 ದೇವರ ವಿಗ್ರಹ ಅಥವಾ ಫೋಟೋಗಳನ್ನು ಇಟ್ಟುಕೊಳ್ಳಬಹುದು ಅಥವಾ ತುಳಸಿ ಗಿಡವನ್ನು ಅಥವಾ ಮನೆಯ ಈಶಾನ್ಯ ದಿಕ್ಕಿನಲ್ಲಿ ಅಷ್ಟದಳ ಕಮಲವನ್ನು ಮಾಡಿ ಮಂಗಳ ಕಲಶವನ್ನು ಸ್ಥಾಪಿಸಬಹುದು. ಇದು ನಿಮ್ಮ ಮನೆಯಲ್ಲಿ ಶಾಂತಿ, ಸಂತೋಷವನ್ನು ನೆಲೆಸುವಂತೆ ಮಾಡುವುದಲ್ಲದೆ ಹಣದ ಕೊರತೆಯನ್ನೂ ದೂರ ಮಾಡುತ್ತದೆ.

Related post

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ಮೇಷಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳ ಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ. ನೀವು ನಿಮ್ಮನ್ನು…
ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ – ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಕಾರವಾರದಲ್ಲಿ ಅರೆಸ್ಟ್…!!

ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ…

ನ್ಯೂಸ್ ಆ್ಯರೋ : ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ…
ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ ಬಿದ್ದವನ ಕಥೆ ಮುಂದೇನಾಯ್ತು ಗೊತ್ತಾ?

ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ…

ನ್ಯೂಸ್‌ ಆ್ಯರೋ : ಈ ಆಧುನಿಕ ಯುಗದಲ್ಲಿ ಎಲ್ಲನೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಇನ್ನೂ ಗೂಗಲ್ ಮುಖೇನಾ ನಮಗೆ ಬೇಕಾದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಯಾವ ವಿಷಯದ ಬಗ್ಗೆನೂ…

Leave a Reply

Your email address will not be published. Required fields are marked *