ನೀವು ಮಂಗಳವಾರ ಹುಟ್ಟಿದವರಾಗಿದ್ದರೆ ನಿಮ್ಮ ಸ್ವಭಾವ ಹೀಗೆ ಇರುತ್ತಂತೆ..! – ನಿಮ್ಮ ಸಂಗಾತಿಯೂ ಹೀಗೆ ಇರ್ತಾರಾ ನೋಡಿ..‌

ನೀವು ಮಂಗಳವಾರ ಹುಟ್ಟಿದವರಾಗಿದ್ದರೆ ನಿಮ್ಮ ಸ್ವಭಾವ ಹೀಗೆ ಇರುತ್ತಂತೆ..! – ನಿಮ್ಮ ಸಂಗಾತಿಯೂ ಹೀಗೆ ಇರ್ತಾರಾ ನೋಡಿ..‌

ನ್ಯೂಸ್ ಆ್ಯರೋ : ಹುಟ್ಟಿದ ದಿನ, ದಿನಾಂಕ, ಸಮಯ, ಮತ್ತು ಸ್ಥಳ, ಮತ್ತು ವ್ಯಕ್ತಿಗಳ ಸ್ವಭಾವದ ಅಂಶಗಳ ನಡುವೆ ಸ್ಪಷ್ಟವಾದ ಸಂಬಂಧವಿದೆ ಎಂಬುದು ಒಂದು ನಂಬಿಕೆ. ಹಾಗಾಗಿ ಹುಟ್ಟಿದ ದಿನವನ್ನು ಒಂದು ಪ್ರಮುಖ ಅಂಶವೆಂದು ಪರಿಗಣಿಸಲಾಗುತ್ತದೆ, ಇದು ಜನರಿಗೆ ಸಂಬಂಧಿಸಿದ ಹಲವು ವಿಚಾರಗಳಲ್ಲಿ ಕೊಡುಗೆ ನೀಡುತ್ತದೆ. ಒಂದೊಂದು ದಿನಕ್ಕೂ ಒಂದೊಂದು ವಿಶೇಷತೆ ಇರುತ್ತದೆ. ಆ ದಿನಗಳಲ್ಲಿ ಹುಟ್ಟಿದವರ ಗುಣಗಳು ವಿಭಿನ್ನವಾಗಿರುತ್ತದೆ.

ಹಾಗಾದ್ರೆ ಮಂಗಳವಾರ ಜನಿಸಿದವರ ಗುಣಗಳು ಹೇಗಿರುತ್ತದೆ ಎಂಬುದು ಇಲ್ಲಿದೆ.

ಮಂಗಳವಾರ ವಾರದ ಮೂರನೇ ದಿನ. ಮಂಗಳ ಕೂಡ ಭೂಮಿಗೆ ಸಾಕಷ್ಟು ಸಮೀಪದಲ್ಲಿರುವ ಗ್ರಹ, ಆದ್ದರಿಂದ, ಇದು ಜನರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಎಂದು ಹೇಳಬಹುದು. ವೇದ ಹಾಗೂ ಜ್ಯೋತಿಷ್ಯವು ಜಾತಕದಲ್ಲಿ ಈ ಮಂಗಳನ ಸ್ಥಾನ ಮತ್ತು ಚಲನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಮಂಗಳವು ಆಕ್ರಮಣಕಾರಿ ಗ್ರಹ ಎಂದು ಹೇಳಲಾಗುತ್ತದೆ. ಆದ್ದರಿಂದ, ಮಂಗಳವಾರ ಜನಿಸಿದವರನ್ನು ಹೋರಾಟಗಾರರು ಎನ್ನಲಾಗುತ್ತದೆ. ಅವರು ದೃಢ ನಿರ್ಧಾರ ಮಾಡುವುದರಲ್ಲಿ ಹಾಗೂ ಯೋಜನೆಗಳನ್ನು ಮುನ್ನಡೆಸುವುದರ ಜೊತೆ ಯಶಸ್ವಿಯಾಗುವ ಬಯಕೆಯನ್ನು ಹೊಂದಿರುತ್ತಾರೆ.

ಈ ದಿನ ಜನಿಸಿದವರು ಧೈರ್ಯಶಾಲಿ, ಉತ್ಸಾಹಿಗಳು. ಆದರೂ ಕೂಡ ಕೆಲವೊಮ್ಮೆ ನಕಾರಾತ್ಮಕ ಅಂಶಗಳನ್ನು ಸಹ ಹೊಂದಿರುತ್ತಾರೆ.

ವ್ಯಕ್ತಿತ್ವ

ಮಂಗಳವಾರ ಜನಿಸಿದ ಜನರು ಹೆಚ್ಚಿನ ಶಕ್ತಿಯ ವ್ಯಕ್ತಿಗಳು ಎನ್ನಲಾಗುತ್ತದೆ. ಸಾಹಸಮಯ ಮನೋಭಾವವನ್ನು ಹೊಂದಿರುತ್ತಾರೆ, ಅವರು ಹೊಸ ಮಾರ್ಗಗಳನ್ನು ಅನ್ವೇಷಿಸಲು ಮತ್ತು ಸವಾಲುಗಳನ್ನು ಎದುರಿಸಲು ಯಾವಾಗಲೂ ಸಿದ್ಧರಿರುತ್ತಾರೆ. ಸಾಧನೆ ಮಾಡುವುದು ಇವರ ಗುರಿಯಾಗಿರುತ್ತದೆ. ಆದರೂ, ಅವರ ಅತಿಯಾದ ಉತ್ಸಾಹದಲ್ಲಿ, ಅವರು ಏಕಕಾಲದಲ್ಲಿ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಒಂದು ಸಮಯದಲ್ಲಿ ಒಂದು ಅಥವಾ ಎರಡು ಉದ್ಯೋಗಗಳ ಮೇಲೆ ಮಾತ್ರ ಗಮನಹರಿಸಿದರೆ ಅದು ಅವರಿಗೆ ಒಳ್ಳೆಯ ಫಲಿತಾಂಶ ನೀಡುತ್ತದೆ.

ಕೋಪ ಮತ್ತು ಧೈರ್ಯ

ಮಂಗಳವಾರ ಹುಟ್ಟಿದವರ ವಿಶೇಷತೆ ಇವರಲ್ಲಿರುವ ಶಕ್ತಿ ಇವರನ್ನು ಅಸಾಮಾನ್ಯರನ್ನಾಗಿಸುತ್ತದೆ. ಅವರ ಸ್ವಭಾವದಲ್ಲಿ ಕೋಪ ಮತ್ತು ಧೈರ್ಯ ಎದ್ದು ಕಾಣುತ್ತದೆ. ಈ ಕೋಪ ಅವರನ್ನು ಕಷ್ಟಗಳಿಗೆ ಸಿಕ್ಕದಂತೆಯೂ ಕಾಯುತ್ತದೆ. ಆದರೆ ಒಮ್ಮೊಮ್ಮೆ ಇದು ಅವರ ವಿಫಲತೆಗೂ ಕಾರಣವಾಗುತ್ತದೆ. ಇವರು ತಮ್ಮ ಬಗ್ಗೆ ಹೇಳಿದ ಮಾತುಗಳನ್ನು ಪರಿಶೀಲಿಸದೇ ಒಪ್ಪಿಕೊಳ್ಳುವುದಿಲ್ಲ. ಅವರ ಜೀವನದಲ್ಲಿ ಕುಹಕವಾಡುವುದು ಒಂದು ಭಾಗವಾಗಿರುತ್ತದೆ. ಅದರಲ್ಲೂ ಕೆಲಸದ ಸಮಯದಲ್ಲಿ ವ್ಯಂಗ್ಯೋಕ್ತಿಗಳನ್ನು ಅವರು ನುಡಿಯಬಹುದು. ಆದರೆ ಇದನ್ನು ಹಗುರವಾಗಿ ತೆಗೆದುಕೊಳ್ಳಬೇಕು.

ವೃತ್ತಿಜೀವನ

ಮಂಗಳವಾರ ಹುಟ್ಟಿದವರ ವೃತ್ತಿ ಜೀವನ ಸವಾಲುಗಳಿಂದ ಕೂಡಿರುತ್ತದೆ. ಈ ದಿನ ಹುಟ್ಟಿದವರು ಹೆಚ್ಚು ಧೈರ್ಯವಂತರು ಮತ್ತು ನಿಜವಾದ ಹೋರಾಟಗಾರರು ಆಗಿದ್ದಾರೆ. ಬ್ಯಾಂಕಿಂಗ್ ಮತ್ತು ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದ ಅಕೌಂಟೆನ್ಸಿ ಮುಂತಾದ ಕೆಲಸಗಳಲ್ಲಿ ಅವರಿಗೆ ಸ್ಥಾನ ದೊರೆಯುತ್ತದೆ ಮತ್ತು ಇಂತಹ ವೃತ್ತಿ ಅವರಿಗೆ ಹೇಳಿಮಾಡಿಸಿದ್ದಾಗಿದೆ. ಈ ದಿನ ಹುಟ್ಟಿದವರು ವೃತ್ತಿ ಜೀವನದಲ್ಲಿ ಚಾಲೆಂಜಿಂಗ್ ಆಗಿರುವ ಕಾರ್ಯಗಳನ್ನು ಮಾಡುವಲ್ಲಿ ನಿಪುಣರಾಗಿರುತ್ತಾರೆ. ಬಾಸ್‌ಗೆ ಸವಾಲು ಎಸೆದು ಹೊಸ ಉದ್ಯಮ, ಹೊಸ ಸ್ಟಾರ್ಟಪ್‌ಗಳನ್ನು ಸ್ಥಾಪಿಸುವಲ್ಲಿ ಇಂಥವರೇ ಹೆಚ್ಚು. ಹಾಗೇ ಕೆಲಸದ ಜಾಗದಲ್ಲಿ ಹೊಸ ಸವಾಲುಗಳನ್ನು ಸ್ವೀಕರಿಸುವುದರಲ್ಲಿ ನಿಪುಣರು.

ಪ್ರೀತಿ ಮತ್ತು ಮದುವೆ

ಮಂಗಳವಾರ ಜನಿಸಿದ ವ್ಯಕ್ತಿಗಳು ಪ್ರೀತಿಯ ವಿಚಾರದಲ್ಲಿ ಬಹಳ ಬದ್ಧತೆಯನ್ನು ಹೊಂದಿರುತ್ತಾರೆ. ಇವರು ಒಬ್ಬರನ್ನು ಪ್ರೀತಿಸಲು ಆರಂಭಿಸಿದರೆ ಅವರಿಗಾಗಿ ಯಾವುದೇ ಸಮಸ್ಯೆಯನ್ನು ಎದುರು ಹಾಕಿಕೊಳ್ಳಲು ಸಿದ್ದರಿರುತ್ತಾರೆ. ಆದರೆ ಮಂಗಳವಾರ ಜನಿಸಿದವರು ತಮ್ಮ ಪ್ರೀತಿಯನ್ನು ಮುಕ್ತವಾಗಿ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಅಲ್ಲದೇ ಪ್ರೀತಿಯನ್ನು ಹೇಳಿಕೊಂಡ ನಂತರ ಕೂಡ ಅವರ ಈ ಸಂಗಾತಿ ಜೊತೆಗಿನ ವಿರಸಕ್ಕೆ ಕಾರಣವಾಗುತ್ತದೆ.

ತಮ್ಮ ಸಂಗಾತಿಯ ಅಗತ್ಯತೆಗಳು ಮತ್ತು ಭಾವನೆಗಳಿಗೆ ಹೆಚ್ಚು ಬೆಲೆಯನ್ನು ಈ ದಿನ ಜನಿಸಿದವರು ನೀಡುತ್ತಾರೆ. ಇದರಿಂದ ಅವರ ಪ್ರೀತಿ ಪ್ರಬುದ್ಧ ಸಂಬಂಧವಾಗಿ ಬೆಳೆಯುತ್ತದೆ. ಮಂಗಳವಾರ ಜನಿಸಿದ ಜನರು ಧೈರ್ಯಶಾಲಿಗಳು ಮತ್ತು ತಮ್ಮ ಪಾಲುದಾರರು, ಮಕ್ಕಳು ಮತ್ತು ಕುಟುಂಬವನ್ನು ನಿರ್ಭಯವಾಗಿ, ಜೀವನದ ಎಲ್ಲಾ ಅಡೆತಡೆಗಳಿಂದ ರಕ್ಷಿಸುತ್ತಾರೆ. ಆದರೂ, ಅವರ ಅಸಹನೆ ಮತ್ತು ಆಕ್ರಮಣಕಾರಿ ಗುಣವು ಸಂಬಂಧದ ಸಾಮರಸ್ಯವನ್ನು ಹಾಳು ಮಾಡುತ್ತದೆ.

ಇನ್ನು ಮಂಗಳವಾರ ಜನಿಸಿದವರಿಗೆ 9 ಅದೃಷ್ಟ ಸಂಖ್ಯೆ. ಅವರು 9 ರಂದು ಶುಭ ಸಮಾರಂಭಗಳು ಮತ್ತು ಹೊಸ ಉದ್ಯಮಗಳನ್ನು ಆರಂಭಿಸಿದರೆ ಒಳ್ಳೆಯದು ಮತ್ತು ಅದು ಅವರಿಗೆ ಉತ್ತಮ ಲಾಭ ತರಬಹುದು. ಮಂಗಳವಾರ ದಾನಧರ್ಮಗಳನ್ನು ಮಾಡುವುದು ಬಹಳ ಉತ್ತಮ ಎಂದು ಹೇಳಲಾಗುತ್ತದೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *