ವೀಳ್ಯದೆಲೆ ಚಿತ್ರಾನ್ನ : ಬೆಳಗಿನ ಉಪಹಾರಕ್ಕೆ ಆರೋಗ್ಯಕರ ತಿಂಡಿ ತಿನ್ನಿ – ಮಾಡೋ ತಲೆಬಿಸಿ ಬೇಡ, ರೆಸಿಪಿ ಇಲ್ಲಿದೆ..

ವೀಳ್ಯದೆಲೆ ಚಿತ್ರಾನ್ನ : ಬೆಳಗಿನ ಉಪಹಾರಕ್ಕೆ ಆರೋಗ್ಯಕರ ತಿಂಡಿ ತಿನ್ನಿ – ಮಾಡೋ ತಲೆಬಿಸಿ ಬೇಡ, ರೆಸಿಪಿ ಇಲ್ಲಿದೆ..

ನ್ಯೂಸ್ ಆ್ಯರೋ : ಚಿತ್ರಾನ್ನ ಅಂದ್ರೆ ತಕ್ಷಣಕ್ಕೆ ನೆನಪಾಗೋದು ಶೇಂಗಾ, ಲೆಮನ್ ಸೇರಿಸಿ ಮಾಡಿದ ಅನ್ನ. ಮಾವಿನಕಾಯಿ, ನೆಲ್ಲಿಕಾಯಿಯನ್ನು ಸೇರಿಸಿ ಸಹ ಚಿತ್ರಾನ್ನವನ್ನು ತಯಾರಿಸ್ತಾರೆ. ನಿಂಬೆಹಣ್ಣಿನಿಂದ ತಯಾರಿಸುವ ಚಿತ್ರಾನ್ನದಂತೆಯೇ ಮಾವಿನಕಾಯಿ ಚಿತ್ರಾನ್ನ, ನೆಲ್ಲಿಕಾಯಿ ಚಿತ್ರಾನ್ನ ಹುಳಿಹುಳಿಯಾಗಿ ಟೇಸ್ಟೀಯಾಗಿರುತ್ತದೆ.

ಆದ್ರೆ ಇದೇ ರೀತಿ ವೀಳ್ಯದೆಲೆಯಿಂದಲೂ ಚಿತ್ರಾನ್ನ ತಯಾರಿಸಬಹುದು ಅನ್ನೋದು ನಿಮ್ಗೆ ಗೊತ್ತಿದ್ಯಾ? ಇಲ್ಲಾಂದ್ರೆ ಕೇಳಿ, ವೀಳ್ಯದೆಲೆಯಿಂದಲೂ (betel leaf) ತುಂಬಾ ಟೇಸ್ಟಿಯಾಗಿರುವ ಚಿತ್ರಾನ್ನ (Rice) ಮಾಡಬಹುದು. ಅದಕ್ಕೆ ಏನೆಲ್ಲಾ ಬೇಕು, ಮಾಡೋದು ಹೇಗೆ ತಿಳ್ಕೊಳ್ಳೋಣ.

ಬೇಕಾದ ಪದಾರ್ಥಗಳು

  • ಎರಡು ವೀಳ್ಯದೆಲೆ
  • 1 ಕಪ್ ಅನ್ನ
  • 2 ಹಸಿ ಮೆಣಸಿನಕಾಯಿ
  • ತುಪ್ಪ
  • ಒಂದು ಹಿಡಿ ಕೊಬ್ಬರಿ ತುರಿ
  • ನಾಲ್ಕೈದು ಕೆಂಪು ಒಣ ಮೆಣಸಿನಕಾಯಿ
  • ಮೂರು ಟೀ ಸ್ಪೂನ್‌ ಎಣ್ಣೆ
  • ಕೊತ್ತಂಬರಿ ಸೊಪ್ಪು ಸ್ವಲ್ಪ
  • ಸ್ವಲ್ಪ ಜೀರಿಗೆ
  • ಒಂದು ಟೀ ಸ್ಪೂನ್‌ ಉದ್ದಿನಬೇಳೆ
  • ಅರ್ಧ ಟೀ ಸ್ಪೂನ್‌ ಅರಿಶಿಣ ಪುಡಿ
  • ನಿಂಬೆ ರಸ

ಮಾಡುವ ವಿಧಾನ:

ಅಕ್ಕಿಯನ್ನು ತೊಳೆದು ಹದವಾದ ಪ್ರಮಾಣದಲ್ಲಿ ನೀರನ್ನು ಸೇರಿಸಿ ಅನ್ನವನ್ನು ತಯಾರಿಸಿಕೊಳ್ಳಿ. ಅನ್ನ ಹೆಚ್ಚು ಬೇಯದಂತೆ ನೋಡಿಕೊಳ್ಳಿ. ಹೀಗಾದರೆ ಅನ್ನ ಉದುರು ಉದುರಾಗಿ ಇರುವುದಿಲ್ಲ ಮತ್ತು ಚಿತ್ರಾನ್ನಕ್ಕೆ ಟೇಸ್ಟ್ ಬರುವುದಿಲ್ಲ. ಬಳಿಕ ಮಿಕ್ಸಿ ಜಾರ್‌ಗೆ ಎರಡು ವೀಳ್ಯದೆಲೆ, ಎರಡು ಹಸಿ ಮೆಣಸಿನಕಾಯಿ ಸೇರಿಸಿ ರುಬ್ಬಿ ಪೇಸ್ಟ್ ಮಾಡಿಟ್ಟುಕೊಳ್ಳಿ.

ಈಗ ದಪ್ಪ ತಳದ ಪ್ಯಾನ್ ತೆಗೆದುಕೊಂಡು ಎಣ್ಣೆಯನ್ನು ಬಿಸಿ ಮಾಡಿಕೊಂಡು ಇದಕ್ಕೆ ಸಾಸಿವೆ, ಉದ್ದಿನಬೇಳೆ, ಶೇಂಗಾ ಸೇರಿಸಿ. ಇವಿಷ್ಟು ಕಂದು ಬಣ್ಣಕ್ಕೆ ಬಂದ ನಂತರ ಕತ್ತರಿಸಿದ ಕೆಂಪು ಮೆಣಸಿಕಾಯಿ ಹಾಗೂ ಕರಿಬೇವಿನ ಎಲೆ, ಕತ್ತರಿಸಿದ ತೆಂಗಿನಕಾಯಿ ಚೂರುಗಳನ್ನು ಸೇರಿಸಿ.

ಇದಕ್ಕೆ ರುಬ್ಬಿದ ವೀಳ್ಯದೆಲೆ (Betel Leaves) ಮತ್ತು ಹಸಿರು ಮೆಣಸಿನಕಾಯಿ ಪೇಸ್ಟ್ ಸೇರಿಸಿ, ಮೇಲಿನಿಂದ ನಿಂಬೆ ರಸ, ಅರಿಶಿನ, ಉಪ್ಪು ಸೇರಿಸಿ ಹಸಿ ವಾಸನೆ ಹೋಗುವವರೆಗೆ 3-4 ನಿಮಿಷಗಳ ಕಾಲ ಹುರಿಯಿರಿ. ಈಗ ವೀಳ್ಯದೆಲೆಯ ಮಸಾಲಾ ಸಿದ್ಧವಾಗಿದೆ.

ಈಗ ಬಾಣಲೆಗೆ ಬೇಯಿಸಿದ ತಣ್ಣಗಾದ ಅನ್ನವನ್ನು ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ. ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿಕೊಳ್ಳಿ. ಈಗ ರುಚಿರುಚಿಯಾದ ವೀಳ್ಯದೆಲೆ ಚಿತ್ರಾನ್ನ ಸವಿಯಲು ಸಿದ್ಧವಾಗಿದೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *